ಚಿನ್ನ ಮತ್ತು ಬೆಳ್ಳಿ ಬೆಲೆಯು ಎಂಸಿಎಕ್ಸ್ ಫ್ಯೂಚರ್ಸ್ ಮಾರ್ಕೆಟ್ ನಲ್ಲಿ ಸೋಮವಾರ (ಡಿಸೆಂಬರ್ 21, 2020) ಏರಿಕೆ ಕಂಡಿದೆ. ಯುಎಸ್ ನಲ್ಲಿ ಉತ್ತೇಜನಾ ಪ್ಯಾಕೇಜ್ ಒಪ್ಪಂದ ಅಂತಿಮ ಆಗಬಹುದು ಎಂಬ ಹಿನ್ನೆಲೆಯಲ್ಲಿ ಬೆಲೆ ಮೇಲೇರಿದೆ. ಬೆಳಗ್ಗೆ 11.20ರ ಹೊತ್ತಿಗೆ ಚಿನ್ನದ ಬೆಲೆ ಪ್ರತಿ ಹತ್ತು ಗ್ರಾಮ್ ಗೆ 584 ರುಪಾಯಿ ಏರಿಕೆ ಕಂಡು, 50,888 ರುಪಾಯಿಗೆ ವಹಿವಾಟು ನಡೆಸಿತು.
ಇನ್ನು ಬೆಳ್ಳಿ ಬೆಲೆಯು ಕೇಜಿಗೆ 2832ರಂತೆ ಅಥವಾ 4% ಏರಿಕೆ ಕಂಡು, 70,739 ರುಪಾಯಿಯಲ್ಲಿ ವಹಿವಾಟು ನಡೆಸಿತು. ಇನ್ನು ಸ್ಪಾಟ್ ಚಿನ್ನದ ದರವು ಪ್ರತಿ ಔನ್ಸ್ ಗೆ (28.3495 ಗ್ರಾಮ್) 0.8% ಏರಿಕೆ ಕಂಡು, $ 1896.39ಕ್ಕೆ ವ್ಯವಹಾರ ನಡೆಸಿತು. ನವೆಂಬರ್ 9ನೇ ತಾರೀಕಿನ ನಂತರ ಕಂಡ ಹೆಚ್ಚಿನ ದರ ಇದು. ಅಂದು $ 1899.29ಕ್ಕೆ ವಹಿವಾಟು ನಡೆಸಿತ್ತು. ಇನ್ನು ಫ್ಯೂಚರ್ಸ್ 0.7% ಮೇಲೇರಿ, $ 1902.70ರಲ್ಲಿತ್ತು.
ಯುಎಸ್ ನ ಪ್ರಮುಖ ಎರಡು ಪಕ್ಷಗಳಾದ ರಿಪಬ್ಲಿಕನ್ ಮತ್ತು ಡೆಮಾಕ್ರಟ್ ಗಳ ನಾಯಕರು ಆರ್ಥಿಕ ಉತ್ತೇಜನಾ ಪ್ಯಾಕೇಜ್ 900 ಬಿಲಿಯನ್ ಡಾಲರ್ ಒದಗಿಸಲು ಒಪ್ಪಿಕೊಂಡಿರುವುದಾಗಿ ಹೇಳಿದ್ದಾರೆ. ಇನ್ನು ಕಳೆದ ವಾರ ಯುಎಸ್ ಸೆಂಟ್ರಲ್ ಬ್ಯಾಂಕ್ ಭರವಸೆ ನೀಡಿದ್ದು, ಹಣಕಾಸು ಮಾರ್ಕೆಟ್ ಗೆ ನಗದು ಪೂರೈಕೆ ಹಾಗೂ ಆರ್ಥಿಕತೆ ಚೇತರಿಸಿಕೊಳ್ಳುವ ತನಕ ಕಡಿಮೆ ಬಡ್ದಿ ಮುಂದುವರಿಯುವುದಾಗಿ ತಿಳಿಸಿದೆ.

ಡಾಲರ್ ಮೌಲ್ಯ ಗಳಿಕೆ ಕಾಣುತ್ತಿದ್ದರೂ ಜಾಗತಿಕ ಮಟ್ಟದಲ್ಲಿ ಕೊರೊನಾ ಸ್ಥಿತಿ ಬಿಗಡಾಯಿಸುತ್ತಿರುವುದರಿಂದ ಚಿನ್ನದ ಬೆಲೆಯಲ್ಲಿ ಏರಿಕೆ ಆಗುತ್ತಿದೆ.
ವರ್ಷದ ಕೊನೆಗೆ 1900 USDಗೂ ಮೇಲೆ ಚಿನ್ನ:
ಈಗ ಆರ್ಥಿಕ ಉತ್ತೇಜನ ಘೋಷಣೆಯ ಬಲ ಸಿಕ್ಕಿದೆ. ಆದ್ದರಿಂದ ಚಿನ್ನದ ಬೆಲೆಯು ಈ ವರ್ಷದ ಕೊನೆಗೆ $ 1900ಕ್ಕೂ ಮೇಲೆ ವಹಿವಾಟು ಮುಗಿಸುವ ಸಾಧ್ಯತೆ ಇದೆ. ಅದು $ 1925 ಕೂಡ ದಾಟಬಹುದು ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ. ಮುಂದಿನ ವರ್ಷದ ಮಾರ್ಚ್ ತನಕ ತಳ ಮಟ್ಟದಲ್ಲಿ ಚಿನ್ನಕ್ಕೆ ಬೆಂಬಲ ನೀಡುವ ವಿವಿಧ ಅಂಶಗಳಿವೆ ಎನ್ನುತ್ತಾರೆ.


Click it and Unblock the Notifications