ಕೊಯಮತ್ತೂರಿನಲ್ಲಿ ಈಗ ಚಿನ್ನ, ಬೆಳ್ಳಿ ಮಾಸ್ಕ್ ಲಭ್ಯ, ಬೆಲೆ ಎಷ್ಟು ಗೊತ್ತಾ?

ಚಿನ್ನ ಹಾಗೂ ಬೆಳ್ಳಿಯ ದಾರಗಳನ್ನು ಬಳಸಿ, ಕೊಯಮತ್ತೂರಿನ ಆಭರಣ ತಯಾರಕರೊಬ್ಬರು ಮಾಸ್ಕ್ ತಯಾರಿಸಿದ್ದಾರೆ. ಈಗೆಲ್ಲ ಕೊರೊನಾ ಟ್ರೆಂಡ್. ಪುಣೆಯ ಶಂಕರ್ ಕುರಡೆಯಿಂದ ಆರಂಭಗೊಂಡ ಚಿನ್ನದ ಮಾಸ್ಕ್ ಟ್ರೆಂಡ್ 'ಖೋ' ಕೊಡುತ್ತಾ ಸೂರತ್, ಕಟಕ್, ಕೊಯಮತ್ತೂರಿನ ತನಕ ಬಂದಿದೆ. ಶಂಕರ್ ಕುರಡೆ ಮಾಡಿಸಿದ್ದ ಮಾಸ್ಕ್ ಬೆಲೆ 2.89 ಲಕ್ಷ ರುಪಾಯಿ.

ಇದೀಗ ಕೊಯಮತ್ತೂರಿನಲ್ಲಿ 18 ಕ್ಯಾರೆಟ್ ಚಿನ್ನದಲ್ಲಿ ಮಾಡಿಸಿರುವ ಮಾಸ್ಕ್ ಬೆಲೆ 2.75 ಲಕ್ಷ ರುಪಾಯಿ. ಇಲ್ಲ ಚಿನ್ನ ಬೇಡ, ನಮಗೆ ಬೆಳ್ಳಿಯ ಮಾಸ್ಕ್ ಇರಲಿ ಅಂದರೆ ಅದಕ್ಕೆ 15,000 ರುಪಾಯಿ. ಈ ಮಾಸ್ಕ್ ಗಾಗಿ 0.06 ಮಿಲಿಮೀಟರ್ ಸಣ್ಣದ ಚಿನ್ನ ಹಾಗೂ ಬೆಳ್ಳಿಯ ದಾರ ಬಳಸಿ, ಸಿದ್ಧಪಡಿಸಿದ್ದಾರೆ ವಂಶಪಾರಂಪರ್ಯವಾಗಿ ಆಭರಣ ತಯಾರಿಯನ್ನೇ ಕಸುಬು ಮಾಡಿಕೊಂಡಿರುವ ರಾಧಾಕೃಷ್ಣ ಸುಂದರಮ್ ಆಚಾರ್ಯ.

ಶ್ರೀಮಂತರು ಮದುವೆಗಳಲ್ಲಿ ಬಳಸಬಹುದು

ಶ್ರೀಮಂತರು ಮದುವೆಗಳಲ್ಲಿ ಬಳಸಬಹುದು

"ನನಗೆ ಗೊತ್ತು, ಸಾಮಾನ್ಯ ಜನರಿಗೆ ಇದನ್ನು ಖರೀದಿಸಿ, ಬಳಸಲು ಆಗಲ್ಲ. ಆದರೆ ಶ್ರೀಮಂತರು ಮದುವೆಗಳಲ್ಲಿ ಇದನ್ನು ಬಳಸಬಹುದು. ಈ ತನಕ ಒಂಬತ್ತು ಆರ್ಡರ್ ಬಂದಿದೆ. ಅದರಲ್ಲಿ ಬಹುತೇಕ ಉತ್ತರ ಭಾರತದಿಂದ ಬಂದಿವೆ" ಎಂದು ಆಚಾರ್ಯ ಎಎನ್ ಐ ಸುದ್ದಿ ಸಂಸ್ಥೆ ಬಳಿ ತಿಳಿಸಿದ್ದಾರೆ.

ಮಾಸ್ಕ್ ತಯಾರಿಸಲು ಏಳು ದಿನಗಳ ಸಮಯ

ಮಾಸ್ಕ್ ತಯಾರಿಸಲು ಏಳು ದಿನಗಳ ಸಮಯ

ಈ ಮಾಸ್ಕ್ ತಯಾರಿಸಿದ ಮುಖ್ಯ ಉದ್ದೇಶ ಕೊರೊನಾದಿಂದ ರಕ್ಷಿಸಿಕೊಳ್ಳಲು ಮಾಸ್ಕ್ ಧರಿಸಿ ಎಂದು ಜಾಗೃತಿ ಮೂಡಿಸುವುದು. ಈ ಒಂದು ಮಾಸ್ಕ್ ತಯಾರಿಸಲು ಏಳು ದಿನಗಳ ಸಮಯ ತೆಗೆದುಕೊಳ್ಳುತ್ತದೆ ಎನ್ನುತ್ತಾರೆ ಆಚಾರ್ಯ. ಅಂದ ಹಾಗೆ ಸ್ವತಃ ಆಚಾರ್ಯ ಅವರಿಗೆ ಯಾವಾಗಲೂ ವಿಶಿಷ್ಟವಾದದ್ದನ್ನು ಮಾಡುವುದರಲ್ಲಿ ಆಸಕ್ತಿ ಜಾಸ್ತಿ.

ಚಿನ್ನದ ದಾರ ಬಳಸಿ ಹಲವು ವಸ್ತುಗಳು ತಯಾರಿ

ಚಿನ್ನದ ದಾರ ಬಳಸಿ ಹಲವು ವಸ್ತುಗಳು ತಯಾರಿ

ಮೂರು ವರ್ಷದ ಹಿಂದೆ ಜ್ಯುವೆಲ್ಲರಿ ಮಳಿಗೆಯಿಂದ ಕೆಲಸ ಬಿಟ್ಟ ಮೇಲೆ ಚಿನ್ನದ ದಾರಗಳನ್ನು ಬಳಸಿ ಹಲವು ವಸ್ತುಗಳನ್ನು ಡಿಸೈನ್ ಮಾಡಿದ್ದಾರೆ. ಬಟ್ಟೆ, ಹ್ಯಾಂಡ್ ಬ್ಯಾಗ್, ಛತ್ರಿ ಮತ್ತಿತರ ವಸ್ತುಗಳನ್ನು ಸಹ ಡಿಸೈನ್ ಮಾಡಿದ್ದಾರೆ. ಭಾರತದಲ್ಲಿ ದಿನದಿನಕ್ಕೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಜತೆಗೆ ಈ ರೀತಿ ಟ್ರೆಂಡಿಂಗ್ ಮಾಸ್ಕ್ ಗಳು ಸಹ ಮಾಧ್ಯಮಗಳಲ್ಲಿ ಸುದ್ದಿ ಆಗುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+