For Quick Alerts
ALLOW NOTIFICATIONS  
For Daily Alerts

ಚಿನ್ನ- ಬೆಳ್ಳಿಯಲ್ಲಿ ಭರ್ಜರಿ ಕುಸಿತ; ಏರಿದಷ್ಟೇ ವೇಗದಲ್ಲಿ ಬಿತ್ತು ದುಬಾರಿ ಲೋಹದ ದರ

|

ಈ ಹಿಂದಿನ ಸೆಷನ್ ನಲ್ಲಿನ ನಷ್ಟದ ವಿಸ್ತರಣೆಯಾಗಿ ಚಿನ್ನದ ಬೆಲೆ ಬುಧವಾರವೂ ಕುಸಿದಿದ್ದು, ಪ್ರತಿ 10 ಗ್ರಾಮ್ ಗೆ 2,000 ರುಪಾಯಿ ತನಕ ಇಳಿಕೆ ಆಗಿದೆ. ಸಾರ್ವಕಾಲಿಕ ದಾಖಲೆ ಮೊತ್ತವಾದ 56,191 ರುಪಾಯಿಯಿಂದ 6236 ರು. ಕುಸಿತ ಕಂಡು, 50 ಸಾವಿರಕ್ಕಿಂತ ಕೆಳಗೆ ಇಳಿದಿದೆ. ಕಳೆದ ಜುಲೈ 21ನೇ ತಾರೀಕು ಚಿನ್ನದ ಬೆಲೆ 50 ಸಾವಿರಕ್ಕಿಂತ ಕೆಳಗೆ ಬಂದಿತ್ತು.

ಇವತ್ತಿನದೂ ಸೇರಿ ಸತತ ಮೂರನೇ ಕುಸಿತ ಇದು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಕುಸಿತ ಆಗಿರುವುದನ್ನು ಭಾರತದಲ್ಲಿ ಕೂಡ ಚಿನ್ನದ ದರ ಅನುಸರಿಸಿದೆ. ಅದೇ ರೀತಿ ಬೆಳ್ಳಿ ದರ ಭಾರೀ ಪ್ರಮಾಣದಲ್ಲಿ ಇಳಿಕೆ ಆಗಿದೆ. ಒಂದೇ ದಿನದಲ್ಲಿ ಬೆಳ್ಳಿ ಕೇಜಿಗೆ 6000 ರುಪಾಯಿಗಿಂತ ಹೆಚ್ಚು ಕುಸಿದಿದೆ. ಇದಕ್ಕೂ ಮುನ್ನ ಬೆಳ್ಳಿಯು ದಾಖಲೆಯ ಮೊತ್ತವಾದ 77,949/kg ಮುಟ್ಟಿತ್ತು.

ದುಬೈನಲ್ಲಿ ಚಿನ್ನ ಖರೀದಿ ಚೀಪ್ ಅಂಡ್ ಬೆಸ್ಟ್ ಏಕೆ? ಇಲ್ಲಿವೆ 5 ಕಾರಣಗಳುದುಬೈನಲ್ಲಿ ಚಿನ್ನ ಖರೀದಿ ಚೀಪ್ ಅಂಡ್ ಬೆಸ್ಟ್ ಏಕೆ? ಇಲ್ಲಿವೆ 5 ಕಾರಣಗಳು

ದೇಶೀ ಮಾರುಕಟ್ಟೆಯಲ್ಲಿ ಬೆಳ್ಳಿ ದರ ಕೇಜಿಗೆ 17,039 ರುಪಾಯಿ ಕುಸಿತ ಕಂಡಿದೆ. ಭಾರತದ MCXನಲ್ಲಿ ಗೋಲ್ಡ್ ಫ್ಯೂಚರ್ಸ್ ಬುಧವಾರದ ಆರಂಭದ ವಹಿವಾಟಿನಲ್ಲಿ 4% ಇಳಿಕೆ ಕಂಡ ಚಿನ್ನ, 50 ಸಾವಿರಕ್ಕಿಂತ ಕೆಳಗೆ ವ್ಯವಹಾರ ನಡೆಸಿತು. ಕಳೆದ ಐದು ತಿಂಗಳಲ್ಲಿ ಒಂದೇ ದಿನದಲ್ಲಿ ಚಿನ್ನ ಕಂಡ ಗರಿಷ್ಠ ನಷ್ಟದ ಪ್ರಮಾಣ ಇದು.

ಚಿನ್ನ- ಬೆಳ್ಳಿಯಲ್ಲಿ ಭರ್ಜರಿ ಕುಸಿತ; ಬಿತ್ತು ದುಬಾರಿ ಲೋಹದ ದರ

ಬುಧವಾರದಂದು ಬೆಳಗ್ಗೆ 10.30ರ ಸುಮಾರಿಗೆ ಗೋಲ್ಡ್ ಅಕ್ಟೋಬರ್ ಫ್ಯೂಚರ್ಸ್ 1395 ರುಪಾಯಿ ಇಳಿದು, ಪ್ರತಿ 10 ಗ್ರಾಮ್ ಗೆ 50,534 ರುಪಾಯಿಗೆ ವಹಿವಾಟು ನಡೆಸಿತು. ಇನ್ನು ಬೆಳ್ಳಿ ಸೆಪ್ಟೆಂಬರ್ ಫ್ಯೂಚರ್ಸ್ ಕೇಜಿಗೆ 62,460ಕ್ಕೆ ವಹಿವಾಟು ನಡೆಸಿತು. 4,474 ರುಪಾಯಿ ಇಳಿಕೆ ಕಂಡಿತು.

ನಿರೀಕ್ಷೆ ಮಾಡಿದ್ದಕ್ಕಿಂತ ಅಮೆರಿಕದಿಂದ ಬಂದ ಆರ್ಥಿಕತೆಯ ಉತ್ತಮ ಸ್ಥಿತಿ ದತ್ತಾಂಶಗಳು, ಆರ್ಥಿಕ ಉತ್ತೇಜನದ ಭರವಸೆಯಿಂದ ಈಕ್ವಿಟಿ ಮಾರುಕಟ್ಟೆ ಕಡೆಗೆ ಹೂಡಿಕೆದಾರರು ಆಕರ್ಷಿತರಾಗುವಂತೆ ಮಾಡಿದೆ. ಚಿನ್ನದ ದರದಲ್ಲಿ ಇಳಿಕೆ ಕಾಣುವಂತಾಗಿದೆ ಎನ್ನುತ್ತಾರೆ ತಜ್ಞರು. ಇದೇ ವೇಳೆ ಡಾಲರ್ ಕೂಡ ಚಿಗಿತುಕೊಳ್ಳುತ್ತಿದ್ದು, ಹೂಡಿಕೆದಾರರು ಲಾಭವನ್ನು ನಗದು ಮಾಡಿಕೊಳ್ಳುತ್ತಿದ್ದಾರೆ.

English summary

Gold, Silver Price Crash On August 12; Gold Below 50 Thousand

Gold and silver price crash on August 12, following international price. Gold traded below 50,000. And also silver price also come down.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X