For Quick Alerts
ALLOW NOTIFICATIONS  
For Daily Alerts

Gold Rate Today: ಗರಿಷ್ಠ ಮಟ್ಟದಿಂದ ಎಷ್ಟು ಇಳಿದಿದೆ ಗೊತ್ತಾ ಚಿನ್ನ?

|

ಕೊರೊನಾ ಲಸಿಕೆ ಭರವಸೆ ಹಿನ್ನೆಲೆಯಲ್ಲಿ ಜಾಗತಿಕ ಈಕ್ವಿಟಿ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಕಂಡಿದ್ದು, ಭಾರತದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ ಆಗಿದೆ. ಎಂಸಿಎಕ್ಸ್ ನಲ್ಲಿ ಫೆಬ್ರವರಿ ಚಿನ್ನದ ಫ್ಯೂಚರ್ಸ್ ಪ್ರತಿ 10 ಗ್ರಾಮ್ ಗೆ 0.6 ಪರ್ಸೆಂಟ್ ಇಳಿಕೆ ಕಂಡು, 49,815 ರುಪಾಯಿ ತಲುಪಿದ್ದರೆ, ಬೆಳ್ಳಿ ದರವು ಕೇಜಿಗೆ 1.2 ಪರ್ಸೆಂಟ್ ಕುಸಿದು, 64,404 ರುಪಾಯಿ ತಲುಪಿದೆ.

ಚಿನ್ನದ ಮೈನಿಂಗ್ ಸ್ಟಾಕ್ ಮೇಲೆ ಹೂಡಿಕೆ ಭಾರತದಿಂದಲೂ ಮಾಡಬಹುದಾ?ಚಿನ್ನದ ಮೈನಿಂಗ್ ಸ್ಟಾಕ್ ಮೇಲೆ ಹೂಡಿಕೆ ಭಾರತದಿಂದಲೂ ಮಾಡಬಹುದಾ?

ಲಸಿಕೆಯಲ್ಲಿನ ಪ್ರಗತಿ ಮತ್ತು ಹೂಡಿಕೆದಾರರ ದುರ್ಬಲ ಆಸಕ್ತಿ ಕಾರಣಕ್ಕೆ ಚಿನ್ನದ ದರವು ಇಳಿಕೆ ಕಾಣುತ್ತಿದೆ ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ. ಈ ಹಿಂದಿನ ಸೆಷನ್ ನಲ್ಲಿ ಚಿನ್ನದ ದರವು 0.2% ಏರಿಕೆ ಕಂಡಿದ್ದರೆ, ಬೆಳ್ಳಿ ದರವು 0.6%ನಷ್ಟು ಇಳಿಕೆಯನ್ನು ದಾಖಲಿಸಿತ್ತು.

ಈಕ್ವಿಟಿ ಹೂಡಿಕೆ ಕಡೆ ಆಸಕ್ತಿ

ಈಕ್ವಿಟಿ ಹೂಡಿಕೆ ಕಡೆ ಆಸಕ್ತಿ

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ ಆಗಿದೆ. ಕೊರೊನಾ ಲಸಿಕೆ ಅಭಿವೃದ್ಧಿಯ ಬಗ್ಗೆ ಸುದ್ದಿ ಹೊರಬರುತ್ತಿದ್ದಂತೆ ಹೂಡಿಕೆದಾರರು ಈಕ್ವಿಟಿ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದಕ್ಕೆ ಮುಂದಾಗುತ್ತಿದ್ದಾರೆ. ಆದರೆ ಯುಎಸ್ ನಲ್ಲಿ ಆರ್ಥಿಕ ಉತ್ತೇಜನಾ ಪ್ಯಾಕೇಜ್ ಘೋಷಣೆ ನಿರೀಕ್ಷೆ ಹಿನ್ನೆಲೆಯಲ್ಲಿ ಚಿನ್ನಕ್ಕೆ ತಳ ಮಟ್ಟದಲ್ಲಿ ಬೆಂಬಲ ನೀಡುತ್ತಿದೆ. ಸ್ಪಾಟ್ ಗೋಲ್ಡ್ ದರ 0.3% ಇಳಿಕೆ ಕಂಡು, ಪ್ರತಿ ಔನ್ಸ್ ಗೆ (28.3495 ಗ್ರಾಮ್) $ 1865.46ರಂತೆ ವಹಿವಾಟು ನಡೆಸಿದೆ. ಇನ್ನು ಇತರ ಬೆಲೆ ಬಾಳುವ ಲೋಹಗಳ ಪೈಕಿ ಚಿನ್ನದ ದರವು 0.7% ಇಳಿಕೆ ಕಂಡು, ಪ್ರತಿ ಔನ್ಸ್ ಗೆ $ 24.38ರಂತೆ ವಹಿವಾಟು ನಡೆಸಿದ್ದರೆ, ಪ್ಲಾಟಿನಂ 0.6% ಹೆಚ್ಚಳವಾಗಿ $1028.17 ತಲುಪಿದೆ. ಪಲಾಡಿಯಂ 0.1% ಮೇಲೇರಿ $ 2,311.87ರಲ್ಲಿದೆ.

$ 916 ಬಿಲಿಯನ್ ಆರ್ಥಿಕ ಉತ್ತೇಜನ ಪ್ರಸ್ತಾವ

$ 916 ಬಿಲಿಯನ್ ಆರ್ಥಿಕ ಉತ್ತೇಜನ ಪ್ರಸ್ತಾವ

ಯುಎಸ್ ಖಜಾಂಚಿ ಕಾರ್ಯದರ್ಶಿ ಸ್ಟೀವನ್ ಮುಚಿನ್ ಮಂಗಳವಾರ ಮಾತನಾಡಿ, ಡೆಮಾಕ್ರಟ್ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿಗೆ ಹೊಸ ಆರ್ಥಿಕ ಪರಿಹಾರ ಪ್ಯಾಕೇಜ್ ಸಲ್ಲಿಸಿರುವುದಾಗಿ ಹೇಳಿದ್ದಾರೆ. ಈ ಹಿಂದೆ ಸಲ್ಲಿಸಿದ್ದ $ 908 ಬಿಲಿಯನ್ ಗೂ ದೊಡ್ಡ ಪ್ರಮಾಣದಲ್ಲಿ, ಅಂದರೆ $ 916 ಬಿಲಿಯನ್ ಪ್ರಸ್ತಾವ ಇರಿಸಲಾಗಿದೆ. ಹಣದುಬ್ಬರವನ್ನು ಹಾಗೂ ಕರೆನ್ಸಿ ಅಸ್ಥಿರತೆಯನ್ನು ಕಾಯ್ದುಕೊಳ್ಳಲು ಚಿನ್ನವನ್ನು ಬಳಸಿಕೊಳ್ಳಲಾಗಿದೆ. ಈ ವರ್ಷ ಹಳದಿ ಲೋಹವು ಭಾರತದಲ್ಲಿ ಮಾರ್ಕೆಟ್ ನಲ್ಲಿ 25%ಗೂ ಹೆಚ್ಚು ಏರಿಕೆಯನ್ನು ಕಡಿದೆ. ಶೂನ್ಯ ಸಮೀಪದ ಬಡ್ಡಿ ದರ ಹಾಗೂ ಜಾಗತಿಕ ಮಟ್ಟದಲ್ಲಿ ದೊಡ್ಡ ಪ್ರಮಾಣದ ಉತ್ತೇಜನ ಕ್ರಮದಿಂದ ಆಗಿರುವ ಹಣದುಬ್ಬರ ಏರಿಕೆ ಅಪಾಯವು ಚಿನ್ನಕ್ಕೆ ಅನುಕೂಲಕರವಾಗಿದೆ.

ಬ್ರೆಕ್ಸಿಟ್ ನಂತರದ ವ್ಯವಹಾರ ಒಪ್ಪಂದದ ಕಡೆಗೆ ಕಣ್ಣು

ಬ್ರೆಕ್ಸಿಟ್ ನಂತರದ ವ್ಯವಹಾರ ಒಪ್ಪಂದದ ಕಡೆಗೆ ಕಣ್ಣು

ಚಿನ್ನದ ವಹಿವಾಟುದಾರರು ಬ್ರೆಕ್ಸಿಟ್ ನಂತರದ ವ್ಯವಹಾರ ಒಪ್ಪಂದದ ಬೆಳವಣಿಗೆ ಬಗ್ಗೆ ಕಣ್ಣು ನೆಟ್ಟಿದ್ದಾರೆ. ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಯುರೋಪಿಯನ್ ಒಕ್ಕೂಟದ ಮುಖ್ಯಸ್ಥರ ಜತೆಗೆ ಮಾತುಕತೆ ನಡೆಸಬೇಕಿದೆ. ಬ್ರಿಟನ್ ನಲ್ಲಿ ಕೊರೊನಾ ಲಸಿಕೆ ಹಾಕಲು ಆರಂಭಿಸಿದ್ದು ಹಾಗೂ ಯುಎಸ್ ನಲ್ಲಿ ಲಸಿಕೆಗೆ ಒಪ್ಪಿಗೆ ಸಿಕ್ಕಿದ್ದು ಅಪಾಯಕಾರಿ ಎನಿಸಿದ ಆಸ್ತಿಗಳ ಬಗ್ಗೆ ಭರವಸೆ ಮೂಡಿಸಿದೆ. ಫೈಜರ್ ಲಸಿಕೆಯನ್ನು ತನ್ನ ಜನರಿಗೆ ನೀಡುತ್ತಿರುವ ಮೊದಲ ದೇಶ ಬ್ರಿಟನ್. ಆ ಮೂಲಕ ಕೊರೊನಾ ವಿರುದ್ಧ ಮಹತ್ತರವಾದ ಯುದ್ಧವನ್ನು ಸಾರಲಾಗಿದೆ. ಚಿನ್ನದ ಬೆಲೆ ಭಾರೀ ಪ್ರಮಾಣದಲ್ಲಿ ಚೇತರಿಕೆ ಕಂಡಿದ್ದರೂ ಹೂಡಿಕೆದಾರರನ್ನು ಸೆಳೆಯುವಲ್ಲಿ ವಿಫಲವಾಗಿದೆ. ತೀವ್ರವಾದ ಏರಿಕೆ ಕಂಡ ನಂತರ ಕಳೆದ ಕೆಲವು ವಾರ ಔನ್ಸ್ ಗೆ $ 1850ಕ್ಕಿಂತ ಕೆಳಗೆ ಕುಸಿದಿದೆ. ಇಟಿಎಫ್ ಹೊರಹರಿವಿನಿಂದಾಗಿ ಚಿನ್ನದ ಬೆಲೆಯಲ್ಲಿ ಒತ್ತಡ ಕಂಡುಬರುತ್ತದೆ ಎನ್ನುತ್ತಾರೆ ವಿಶ್ಲೇಷಕರು.

English summary

Gold, Silver Rate Down In Future Market On India's MCX

Gold and silver rate down in future market on India's MCX on December 9, 2020.
Story first published: Wednesday, December 9, 2020, 11:01 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X