ಚಿನ್ನ, ಬೆಳ್ಳಿ ಬೆಲೆಯಲ್ಲಿ ಏರಿಕೆ; ಹಿಂದಿನ ದಿನದ ಇಳಿಕೆಯಿಂದ ಚೇತರಿಕೆ

ಈ ಹಿಂದಿನ ಸೆಷನ್ ನಲ್ಲಿ ಭಾರೀ ನಷ್ಟ ಕಂಡ ಮೇಲೆ ಭಾರತೀಯ ಮಾರುಕಟ್ಟೆಯಲ್ಲಿ ಗುರುವಾರ (ನವೆಂಬರ್ 5, 2020ರಂದು) ಚಿನ್ನ- ಬೆಳ್ಳಿ ದರದಲ್ಲಿ ಹೆಚ್ಚಳ ಆಗಿದೆ. ಎಂಸಿಎಕ್ಸ್ ನಲ್ಲಿ ಚಿನ್ನದ ಫ್ಯೂಚರ್ಸ್ 0.8% ಹೆಚ್ಚಳವಾಗಿ, ಪ್ರತಿ 10 ಗ್ರಾಮ್ ಗೆ 51,226 ರುಪಾಯಿಯಂತೆ ವಹಿವಾಟು ನಡೆಸಿದೆ.

ಇನ್ನು ಬೆಳ್ಳಿ ಫ್ಯೂಚರ್ಸ್ 1.2% ಏರಿಕೆ ಕಂಡು, 62,086 ರುಪಾಯಿ ಇದೆ. ಈ ಹಿಂದಿನ ಸೆಷನ್ ನಲ್ಲಿ ಚಿನ್ನದ ಫ್ಯೂಚರ್ಸ್ 800 ರುಪಾಯಿ ಇಳಿಕೆಯಾಗಿದ್ದರೆ, ಬೆಳ್ಳಿ ಫ್ಯೂಚರ್ಸ್ ಪ್ರತಿ ಕೇಜಿಗೆ 1400 ರುಪಾಯಿ ಕುಸಿತ ಕಂಡಿತ್ತು. ಜಾಗತಿಕ ಮಾರ್ಕೆಟ್ ನಲ್ಲಿ ಚಿನ್ನದ ಬೆಲೆ ಸ್ಥಿರವಾಗಿದೆ. ಯುಎಸ್ ಅಧ್ಯಕ್ಷೀಯ ಚುನಾವಣೆ ಫಲಿತಾಂಶದ ಹೊರತಾಗಿಯೂ ಸನ್ನಿವೇಶ ಹೀಗಿದೆ.

ಡೆಮಾಕ್ರಟ್ ಅಭ್ಯರ್ಥಿ ಜೋ ಬೈಡೆನ್ ಮುಂಚೂಣಿಯಲ್ಲಿ

ಡೆಮಾಕ್ರಟ್ ಅಭ್ಯರ್ಥಿ ಜೋ ಬೈಡೆನ್ ಮುಂಚೂಣಿಯಲ್ಲಿ

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟ್ ಅಭ್ಯರ್ಥಿ ಜೋ ಬೈಡೆನ್ ಮುಂಚೂಣಿಯಲ್ಲಿದ್ದಾರೆ. ಆದರೆ ಡೊನಾಲ್ಡ್ ಟ್ರಂಪ್ ಕಾನೂನು ಸಮರಕ್ಕೆ ಮುಂದಾಗಿದ್ದಾರೆ. ಹಲವು ಕಡೆ ಬ್ಯಾಟಲ್ ಗ್ರೌಂಡ್ ಗಳಲ್ಲಿ ಮರು ಎಣಿಕೆಗೆ ಮನವಿ ಮಾಡಿದ್ದಾರೆ. ಸ್ಪಾಟ್ ಗೋಲ್ಡ್ ದರವು ಸ್ವಲ್ಪ ಬದಲಾವಣೆಯಾಗಿ, ಪ್ರತಿ ಔನ್ಸ್ ಗೆ (28.3495 ಗ್ರಾಮ್) $ 1904.66 ಇದೆ. ಇತರ ಬೆಲೆ ಬಾಳುವ ಲೋಹಗಳ ಪೈಕಿ ಬೆಳ್ಳಿಯ ಬೆಲೆಯಲ್ಲಿ 0.3% ಏರಿಕೆಯಾಗಿ, $ 23.98 ಇದೆ. ಪ್ಲಾಟಿನಂ ಬೆಲೆ ಸ್ಥಿರವಾಗಿದ್ದು, $ 869.04ರಲ್ಲಿ ವಹಿವಾಟು ನಡೆಸಿದೆ. ಇನ್ನು ಪಲಾಡಿಯಂ 0.5% ಇಳಿಕೆಯಾಗಿ, $ 2,276.97ರಲ್ಲಿ ವಹಿವಾಟು ನಡೆಸಿದೆ. ಡಾಲರ್ ಸೂಚ್ಯಂಕವು ಇತರ ಕರೆನ್ಸಿಗಳ ವಿರುದ್ಧ 0.02% ಇಳಿಕೆಯಾಗಿದೆ. ಈ ಹಿಂದಿನ ಸೆಷನ್ ನಲ್ಲಿ 0.8% ಏರಿಕೆ ದಾಖಲಿಸಿತ್ತು.

ಚಿನ್ನದ ವಹಿವಾಟಿನಲ್ಲಿ ಏರಿಳಿತ

ಚಿನ್ನದ ವಹಿವಾಟಿನಲ್ಲಿ ಏರಿಳಿತ

ಚಿನ್ನದ ವಹಿವಾಟಿನಲ್ಲಿ ಏರಿಳಿತಗಳು ಇರುತ್ತವೆ. ಏಕೆಂದರೆ ಯುಎಸ್ ಚುನಾವಣೆ ಫಲಿತಾಂಶಕ್ಕೆ ಮಾರುಕಟ್ಟೆ ಸ್ಪಂದಿಸಲಿದೆ. ಸ್ಪಷ್ಟ ಫಲಿತಾಂಶವೇ ಬಂದರೂ ಚಿನ್ನದ ದರಕ್ಕೆ ಸಕಾರಾತ್ಮಕ ಆಗಬಹುದು. ಆದರೂ ಇದರಿಂದ ಕೊರೊನಾ ಪ್ಯಾಕೇಜ್ ಘೋಷಣೆಗೆ ದಾರಿ ಆಗಲಿದೆ ಎಂದು ಕೊಟಕ್ ಸೆಕ್ಯೂರಿಟೀಸ್ ಹೇಳಿದೆ. ಯುಎಸ್ ನಲ್ಲಿ ಆರ್ಥಿಕ ಪ್ಯಾಕೇಜ್ ಘೋಷಣೆ ಆಗಬಹುದು ಎಂಬ ನಿರೀಕ್ಷೆಯಲ್ಲಿ ಜಾಗತಿಕ ಈಕ್ವಿಟಿ ಮಾರ್ಕೆಟ್ ನಲ್ಲಿ ಏರಿಕೆ ಕಂಡುಬಂದಿದೆ. ಇನ್ನು ಚಿನ್ನದ ವ್ಯವಹಾರ ನಡೆಸುವವರು ಕೊರೊನಾ ಸೋಂಕಿನ ಪ್ರಮಾಣವನ್ನು ಗಮನಿಸುತ್ತಿದ್ದಾರೆ. ಎರಡನೇ ಬಾರಿಗೆ ಲಾಕ್ ಡೌನ್ ಘೋಷಣೆಗೆ ಇಂಗ್ಲೆಂಡ್ ಸಿದ್ಧವಾಗುತ್ತಿದೆ. ಆ ಮೂಲಕ ಫ್ರಾನ್ಸ್ ಮತ್ತು ಯುರೋಪ್ ನ ಇತರ ಆರ್ಥಿಕತೆಗಳ ಸಾಲಿನಲ್ಲಿ ಸಾಗುತ್ತಿದೆ.

ಚಿನ್ನದ ಗಟ್ಟಿ, ನಾಣ್ಯದ ಮಾರಾಟದಲ್ಲಿ ಏರಿಕೆ

ಚಿನ್ನದ ಗಟ್ಟಿ, ನಾಣ್ಯದ ಮಾರಾಟದಲ್ಲಿ ಏರಿಕೆ

ಈಚಿನ ಏರಿಳಿತದ ಹೊರತಾಗಿಯೂ ಈ ವರ್ಷ ಇಲ್ಲಿಯವರೆಗೆ ಭಾರತದಲ್ಲಿ ಚಿನ್ನದ ದರ ಮೂವತ್ತು ಪರ್ಸೆಂಟ್ ಹೆಚ್ಚಳವಾಗಿದೆ. ಕಳೆದ ಆಗಸ್ಟ್ ನಲ್ಲಿ ಭಾರತದಲ್ಲಿ ಚಿನ್ನದ ದರವು ಗರಿಷ್ಠ ಮಟ್ಟವಾದ 56,200 ಹಾಗೂ ಬೆಳ್ಳಿ ಬೆಲೆ ಪ್ರತಿ ಕೇಜಿಗೆ 80 ಸಾವಿರ ರುಪಾಯಿ ಸಮೀಪ ಇತ್ತು. ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವೀಸಸ್ ವರದಿ ಪ್ರಕಾರ, ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಭಾರತದಲ್ಲಿ ಚಿನ್ನದ ಗ್ರಾಹಕ ಬೇಡಿಕೆ (ಆಭರಣ, ಗಟ್ಟಿ, ನಾಣ್ಯ ಎಲ್ಲವೂ ಒಳಗೊಂಡಂತೆ) ವಾಪಸಾಗಿದೆ. ಆದರೆ ಕಳೆದ ವರ್ಷದ ಇದೇ ಅವಧಿಯಲ್ಲಿನ ಬೇಡಿಕೆ ಗಮನಿಸಿದರೆ ಭಾರೀ ಪ್ರಮಾಣದಲ್ಲಿ ಕಡಿಮೆ ಆಗಿದೆ. ಆಭರಣ ಮಾರಾಟದಲ್ಲಿ ಇಳಿಕೆಯಾದರೂ ಚಿನ್ನದ ಗಟ್ಟಿ, ನಾಣ್ಯದ ಮಾರಾಟದಲ್ಲಿ ಈ ತ್ರೈಮಾಸಿಕದಲ್ಲಿ ಉತ್ತಮ ಏರಿಕೆ ಆಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+