ಚಿನ್ನ- ಬೆಳ್ಳಿ ಬೆಲೆಯಲ್ಲಿ ಏರಿಕೆ ಕಂಡರೂ ಈ ವಾರದಲ್ಲಿ 2,000 ರುಪಾಯಿಯಷ್ಟು ಇಳಿಕೆ

ಚಿನ್ನ- ಬೆಳ್ಳಿ ದರವು ನವೆಂಬರ್ 12ನೇ ತಾರೀಕಿನ ಗುರುವಾರ ಭಾರತೀಯ ಮಾರುಕಟ್ಟೆಯಲ್ಲಿ ಏರಿಕೆ ದಾಖಲಿಸಿವೆ. ಆದರೆ ಈ ವಾರದ ಆರಂಭದಲ್ಲಿ ಭಾರೀ ಕುಸಿತ ಕಂಡಿತ್ತು. MCXನಲ್ಲಿ ಚಿನ್ನದ ಫ್ಯೂಚರ್ಸ್ 0.35% ಹೆಚ್ಚಳವಾಗಿ, ಪ್ರತಿ 10 ಗ್ರಾಮ್ ಗೆ 50,339ರಂತೆ ವಹಿವಾಟು ನಡೆಸಿತು.

ಬೆಳ್ಳಿ ಫ್ಯೂಚರ್ಸ್ 0.38% ಏರಿಕೆಯಾಗಿ, ಪ್ರತಿ ಕೇಜಿಗೆ 62,780 ರುಪಾಯಿಯಂತೆ ವ್ಯವಹರಿಸಿತು. ಈ ಹಿಂದಿನ ಸೆಷನ್ ನಲ್ಲಿ ಚಿನ್ನದ ಫ್ಯೂಚರ್ಸ್ ಪ್ರತಿ 10 ಗ್ರಾಮ್ ಗೆ 310 ರುಪಾಯಿ ಇಳಿಕೆ ಕಂಡಿತ್ತು. ಇನ್ನು ಬೆಳ್ಳಿ ಬೆಲೆಯು ಪ್ರತಿ ಕೇಜಿಗೆ 600 ಕುಸಿದಿತ್ತು. ಈಚೆಗೆ ಬೆಲೆ ಕಡಿಮೆ ಆಗಿರುವುದು ಮತ್ತು ಹಬ್ಬದ ಸೀಸನ್ ಕಾರಣಕ್ಕೆ ಭಾರತದಲ್ಲಿ ಚಿನ್ನಕ್ಕೆ ಬೇಡಿಕೆ ತರಬಹುದು ಎಂಬ ನಿರೀಕ್ಷೆ ಇದೆ.

ಈ ವಾರ ಚಿನ್ನದ ದರದಲ್ಲಿ ಭಾರೀ ಇಳಿಕೆ ಆಗಿದ್ದು ಪ್ರತಿ 10 ಗ್ರಾಮ್ ಗೆ 2,000 ರುಪಾಯಿಯಷ್ಟು ಇಳಿಕೆಯಾಗಿದೆ.

ಭಾರತದಾದ್ಯಂತ ಚಿನ್ನಾಭರಣ ಖರೀದಿ ಆರಂಭಕ್ಕೆ ಕಾರಣ

ಭಾರತದಾದ್ಯಂತ ಚಿನ್ನಾಭರಣ ಖರೀದಿ ಆರಂಭಕ್ಕೆ ಕಾರಣ

ಮಾರ್ಕೆಟ್ ನಲ್ಲಿ ಗ್ರಾಹಕರಿಂದ ಹೆಚ್ಚಾಗಿರುವ ಬೇಡಿಕೆ ಮಧ್ಯೆ ಆರ್ಥಿಕತೆ ಚೇತರಿಕೆ, ಗ್ರಾಹಕರ ಸಕಾರಾತ್ಮಕ ಸ್ಪಂದನೆ ಮತ್ತು ಧನ್ ತೆರಾಸ್ ಇವೆಲ್ಲ ಸೇರಿ ಹಬ್ಬದ ಸೀಸನ್ ಗೆ ಭಾರತದಾದ್ಯಂತ ಚಿನ್ನಾಭರಣ ಖರೀದಿ ಆರಂಭಕ್ಕೆ ಕಾರಣ ಆಗುತ್ತದೆ. ಇನ್ನು ಈ ಸಂದರ್ಭದಲ್ಲಿ ಚಿನ್ನ ಖರೀದಿ ಮಾಡುವ ಸಂಪ್ರದಾಯ ಕೂಡ ಇದ್ದು, ಇದರಿಂದ ಈಗಿನ ಬಿಕ್ಕಟ್ಟಿನ ಸಂದರ್ಭಾದಲ್ಲಿ ಚಿನ್ನದ ಮೇಲಿನ ಹೂಡಿಕೆ ಪ್ರಮಾಣ ಹೆಚ್ಚಾಗಲು ಕಾರಣ ಆಗುತ್ತದೆ. ಧನ್ ತೆರಾಸ್ ಹಾಗೂ ದೀಪಾವಳಿ ಸಂದರ್ಭದಲ್ಲಿ ಚಿನ್ನ ಖರೀದಿಯನ್ನು ಮಾಡಲಿದ್ದಾರೆ ಎಂದು ಮಲಬಾರ್ ಗೋಲ್ಡ್ ಅಂಡ್ ಡೈಮೆಂಡ್ಸ್ ಅಧ್ಯಕ್ಷರಾದ ಎಂ.ಪಿ. ಅಹ್ಮದ್ ಅಭಿಪ್ರಾಯ ಪಟ್ಟಿದ್ದಾರೆ.

ದುರ್ಬಲ ಡಾಲರ್ ನಿಂದ ಚಿನ್ನಕ್ಕೆ ಬೆಂಬಲ

ದುರ್ಬಲ ಡಾಲರ್ ನಿಂದ ಚಿನ್ನಕ್ಕೆ ಬೆಂಬಲ

ಜಾಗತಿಕ ಮಾರುಕಟ್ಟೆಯಲ್ಲಿ ಇಂದು ಚಿನ್ನದ ಬೆಲೆಯಲ್ಲಿ ಏರಿಕೆ ಆಗಿದೆ. ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಗಳಿಕೆ ಕಳೆದುಕೊಳ್ಳುತ್ತಿದ್ದಂತೆ ಚಿನ್ನದ ದರದಲ್ಲಿ ಏರಿಕೆಯಾಗಿದೆ. ಚಿನ್ನದದ ದರವು ಔನ್ಸ್ ಗೆ $1,871.03 ಆಗುವ ಮೂಲಕ 0.3% ಏರಿಕೆ ಕಂಡಿದೆ. ಇನ್ನು ಕೊರೊನಾ ಸೋಂಕು ಪ್ರಕರಣ ಹೆಚ್ಚುತ್ತಿರುವಂತೆ ಹಾಗೂ ದುರ್ಬಲ ಡಾಲರ್ ತಳ ಮಟ್ಟದಲ್ಲಿ ಚಿನ್ನದ ದರಕ್ಕೆ ಬೆಂಬಲ ನೀಡುತ್ತಿದೆ. US ಡಾಲರ್ ಸೂಚ್ಯಂಕ 0.06% ಇಳಿಕೆಯಾಗಿದ್ದು, ಇತರ ಕರೆನ್ಸಿ ಇರಿಸಿಕೊಂಡವರಿಗೆ ಚಿನ್ನದ ದರ ಅಗ್ಗವಾಗಿದೆ. ಇತರ ಬೆಲೆಬಾಳುವ ಲೋಹಗಳಲ್ಲಿ ಬೆಳ್ಳಿ 0.4% ಇಳಿಕೆಯಾಗಿ, ಔನ್ಸ್ ಗೆ $24.16 ಇದೆ. ಪ್ಲಾಟಿನಂ $ 865ರಲ್ಲಿದೆ.

ಇಟಿಎಫ್ ಹೂಡಿಕೆ ಚಟುವಟಿಕೆ ಮಿಶ್ರವಾಗಿದೆ

ಇಟಿಎಫ್ ಹೂಡಿಕೆ ಚಟುವಟಿಕೆ ಮಿಶ್ರವಾಗಿದೆ

ಆನ್ ಲೈನ್ ಇಸಿಬಿ ಫೋರಂನಲ್ಲಿ ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ಅಧ್ಯಕ್ಷರಾದ ಕ್ರಿಸ್ಟಿನ್ ಲಗಾರ್ಡೆ ಮತ್ತು ಫೆಡರಲ್ ರಿಸರ್ವ್ ಅಧ್ಯಕ್ಷ ಜೆರೋಮ್ ಪೊವೆಲ್ ಏನು ಹೇಳುತ್ತಾರೆ ಎಂಬುದರ ಕಡೆಗೆ ಚಿನ್ನದ ವರ್ತಕರು ಕುತೂಹಲದ ಕಣ್ಣುಗಳಿಂದ ಎದುರು ನೋಡುತ್ತಿದ್ದಾರೆ. ಇಟಿಎಫ್ ಚಟುವಟಿಕೆ ಮಿಶ್ರವಾಗಿರುವುದು ಹೂಡಿಕೆದಾರರಲ್ಲಿನ ವಿಶ್ವಾಸದ ಕೊರತೆ ತೋರಿಸುತ್ತಿದೆ ಎನ್ನುತ್ತಾರೆ ವಿಶ್ಲೇಷಕರು. ವಿಶ್ವದ ಅತಿ ದೊಡ್ಡ ಚಿನ್ನದ ಇಟಿಎಫ್ ಹೋಲ್ಡಿಂಗ್ಸ್ SPDR ಗೋಲ್ಡ್ ಟ್ರಸ್ಟ್ ನಲ್ಲಿ ಬುಧವಾರ ಚಿನ್ನದ ಇಟಿಎಫ್ 0.72% ಇಳಿಕೆಯಾಗಿ, 1,240.74 ಟನ್ ನಲ್ಲಿದೆ.

ಚಿನ್ನ ಮೇಲೇರುವ ಸಾಧ್ಯತೆ

ಚಿನ್ನ ಮೇಲೇರುವ ಸಾಧ್ಯತೆ

ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಕೊರೊನಾ ಲಸಿಕೆ ಬರುವ ಸಾಧ್ಯತೆ ಹೆಚ್ಚಿದೆ. ಜತೆಗೆ ಯುಎಸ್ ಆರ್ಥಿಕ ಉತ್ತೇಜನ ಘೋಷಿಸುವ ಕಡೆಗೆ ನೋಡಲಾಗುತ್ತಿದೆ. ಸಾಮಾನ್ಯ ಆಲೋಚನೆಯು ಚಿನ್ನದ ದರ ಮೇಲೇರಬಹುದು ಅಂತಲೇ ಇದೆ ಎಂದು ಕೊಟಕ್ ಸೆಕ್ಯೂರಿಟೀಸ್ ಹೇಳಿದೆ. ಸದ್ಯಕ್ಕೆ ಸವರನ್ ಗೋಲ್ಡ್ ಬಾಂಡ್ ಸ್ಕೀಮ್ 2020- 21 ಸಿರೀಸ್ VIIIರ ಸಬ್ ಸ್ಕ್ರಿಪ್ಷನ್ ನವೆಂಬರ್ 9ರಿಂದ 13, 2020ರ ಮಧ್ಯೆ ಲಭ್ಯವಾಗಲಿದೆ. ಪ್ರತಿ ಗ್ರಾಮ್ ಗೆ 5,177 ರುಪಾಯಿ ಎಂದು ನಿಗದಿ ಮಾಡಲಾಗಿದೆ. ಯಾವ ಹೂಡಿಕೆದಾರರು ಆನ್ ಲೈನ್ ಮೂಲಕ ಅಪ್ಲೈ ಮಾಡುತ್ತಾರೋ ಹಾಗೂ ಡಿಜಿಟಲ್ ಪಾವತಿ ಮಾಡುತ್ತಾರೋ ಅಂಥವರಿಗೆ ಪ್ರತಿ ಗ್ರಾಮ್ ಗೆ ಐವತ್ತು ರುಪಾಯಿ ರಿಯಾಯಿತಿ ನೀಡುತ್ತದೆ. ಅಂಥ ಹೂಡಿಕೆದಾರರಿಗೆ ಪ್ರತಿ ಗ್ರಾಮ್ ಗೆ 5127 ರುಪಾಯಿಯಂತೆ ದೊರೆಯುತ್ತದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+