ನವದೆಹಲಿ, ಮಾರ್ಚ್ 28: ಐಟಿ ವಲಯದ ಉದ್ಯೋಗಾಕಾಂಕ್ಷಿಗಳಿಗೆ ಸಿಹಿಸುದ್ದಿಯೊಂದಿದೆ. ಸ್ಟಾರ್ಟಪ್ ಮತ್ತು ಐಟಿ ವಲಯದಲ್ಲಿ ಉದ್ಯೋಗಿಗಳ ವಜಾ, ಪಿಂಕ್ ಸ್ಲಿಪ್‌ಗಳ ಬಗ್ಗೆ ವರದಿಯಾಗುತ್ತಿದ್ದರೂ, ಪರಿಸ್ಥಿತಿ ತೀರಾ ಬಿಗಡಾಯಿಸಿಲ್ಲ ಎಂಬುವುದಕ್ಕೆ ಈ ಸುದ್ದಿಯೇ ಸಾಕ್ಷಿಯಾಗಿದೆ. ಯಾಕೆಂದರೆ ಐಟಿ ಸೇವೆಗಳ ಉದ್ಯೋಗ ಮಾರುಕಟ್ಟೆಯಲ್ಲಿ ಟೆಕ್ನಿಕಲ್ ಟ್ಯಾಲೆಂಟ್ ಗಳಿಗಾಗಿ ಬೇಡಿಕೆಯು ಫೆಬ್ರವರಿಯಲ್ಲಿ ಹೊಸ ಗರಿಷ್ಠ ಮಟ್ಟಕ್ಕೆ ಏರಿದ್ದು, ಇದು ಈ ಕ್ಷೇತ್ರದ ಚೇತರಿಕೆಯ ಭರವಸೆಯನ್ನು ಹುಟ್ಟುಹಾಕಿದೆ.
ಸ್ಟಾಫಿಂಗ್ ಫಾರ್ಮ್ Xpheno ಅಂಕಿಅಂಶದ ಪ್ರಕಾರ, ಫೆಬ್ರವರಿಯಲ್ಲಿ ತಿಂಗಳೊಂದರಲ್ಲೇ, ಐಟಿ ವೃತ್ತಿಪರರಿಗೆ 124,000 ನೇಮಕಾತಿ ಆದೇಶಗಳು ತಲುಪಿದೆ. ಇದು ಜನವರಿಯಿಂದ ತೆಗೆದುಕೊಂಡರೆ ಗಮನಾರ್ಹವಗಿ 50%ದಷ್ಟು ಮತ್ತು ಡಿಸೆಂಬರ್‌ಗಿಂತ 33%ದಷ್ಟು ಹೆಚ್ಚಾಗಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಈ ಆದೇಶಗಳು ಭವಿಷ್ಯದ ಬೇಡಿಕೆಯನ್ನು ಸೂಚಿಸುತ್ತವೆ ಎಂಬುದು ಮುಖ್ಯವಾಗಿದೆ. ಮತ್ತು ಈವರೆಗೆ ಆಗಿರುವ ಆದೇಶಗಳ ಸಂಖ್ಯೆಯಂತೆ ನೈಜ ನೇಮಕಾತಿ ಆಗದೆಯೂ ಇರಬಹುದು.

ಎಕಾನಾಮಿಕ್ಸ್ ಟೈಮ್ ಟೀಮ್ಲೀಸ್ ಮತ್ತು ಇನ್ನೊಂದು ನೇಮಕಾತಿ ಸಂಸ್ಥೆಯ ದತ್ತಾಂಶವನ್ನು ಆಧರಿಸಿ ವರದಿ ಮಾಡಿದ್ದು , ಆ ಪ್ರಕಾರ ಈ ವರ್ಷದ ದ್ವಿತೀಯಾರ್ಧದಲ್ಲಿ ಐಟಿ ನೇಮಕಾತಿಯಲ್ಲಿ 7-8% ಹೆಚ್ಚಳವನ್ನು ಮುನ್ಸೂಚಿಸುತ್ತಿವೆ.
ಇತ್ತೀಚಿನ ನೇಮಕಾತಿ ಅಂಕಿಅಂಶಗಳು ಐಟಿ ಸೇವೆಗಳು, ಸಾಫ್ಟ್‌ವೇರ್ ಉತ್ಪನ್ನಗಳು ಮತ್ತು ಟೆಕ್ ಸ್ಟಾರ್ಟ್‌ಅಪ್‌ಗಳಂತಹ ವಿವಿಧ ಡೊಮೇನ್‌ಗಳನ್ನು ಒಳಗೊಂಡಿವೆ. 2023 ರಲ್ಲಿ ಕಂಡುಬರುವ ಅಸಂಗತತೆಯನ್ನು ಹೊರತುಪಡಿಸಿ, ಗಣನೀಯ ನೇಮಕಾತಿ ಚಟುವಟಿಕೆಗಳಲ್ಲಿ ತೊಡಗಿರುವ ಐಟಿ ಸೇವಾ ವಲಯದಿಂದ ಈ ಬೇಡಿಕೆಯ ಗಮನಾರ್ಹವಾಗಿ ಕಂಡುಬಂದಿದೆ.
ಇತ್ತೀಚಿನ ವರದಿಯಲ್ಲಿ, ಪ್ರಸಕ್ತ ಹಣಕಾಸು ವರ್ಷದಲ್ಲಿ $250-ಬಿಲಿಯನ್ ಐಟಿ ಉದ್ಯಮಕ್ಕೆ ಫ್ರೆಶರ್‌ಗಳ ಒಟ್ಟಾರೆ ನೇಮಕಾತಿಯು ಹಿಂದಿನ ವರ್ಷಕ್ಕೆ ಹೋಲಿಸಿದರೆ 60%-65% ರಷ್ಟು ಕುಸಿಯುವ ನಿರೀಕ್ಷೆಯಿದೆ ಎಂದು ಪ್ರಮುಖವಾಗಿ ತಿಳಿಸಲಾಗಿದೆ.
ಈ ಬಾರಿ 70,000-80,000 ಹೊಸ ಇಂಜಿನಿಯರ್‌ಗಳಿಗೆ ನೇಮಕಾತಿ ಅವಕಾಶ ಸಿಕ್ಕರೂ ಇದು ಕಳೆದ ಎರಡು ದಶಕಗಳಿಗೆ ಹೋಲಿಸಿದರೆ ಇದು ಅತ್ಯಂತ ಕಡಿಮೆ ನೇಮಕಾತಿ ಮಟ್ಟವಾಗಿದೆ. ಅದೇನೇ ಇದ್ದರೂ, ಪ್ರಸಕ್ತ ಕ್ಯಾಲೆಂಡರ್ ವರ್ಷದ ಉತ್ತರಾರ್ಧದಲ್ಲಿ ನಿರೀಕ್ಷಿತ ಚೇತರಿಕೆಯ ಸೂಚನೆಗಳಿವೆ.
ಬೆಂಗಳೂರು ಮೂಲದ ನೇಮಕಾತಿ ಸಂಸ್ಥೆಯಾದ ಟೀಮ್‌ಲೀಸ್, ನಿರೀಕ್ಷಿತ ಆರ್ಥಿಕ ಚೇತರಿಕೆ, ಸ್ಟಾಟರ್ಪ್ ವಲಯಗಳಿಗೆ ಫಂಡಿಂಗ್ ಮುಂತಾದ ವಿಚಾರಗಳಿಂದ 2024 ರ ದ್ವಿತೀಯಾರ್ಧದಲ್ಲಿ ನೇಮಕಾತಿ ವಿಚಾರದಲ್ಲಿ ಸುಮಾರು 8.2% ಹೆಚ್ಚಳವನ್ನು ನಿರೀಕ್ಷಿಸಿದೆ.
ಗಮನಾರ್ಹವಾಗಿ, ಐಟಿ ಕ್ಶೇತ್ರದಲ್ಲಿ ಫೆಬ್ರವರಿ ವರೆಗೆ FY23 ರಲ್ಲಿ 60,000 ಉದ್ಯೋಗಗಳ ನಿವ್ವಳ ಸೇರ್ಪಡೆಯನ್ನು ಕಂಡಿದ್ದು, ಇದು ಹಿಂದಿನ ಆರ್ಥಿಕ ವರ್ಷಕ್ಕಿಂತ ಗಮನಾರ್ಹ ಕುಸಿತವಾಗಿದೆ. ಐಟಿ ನೇಮಕಾತಿಯಲ್ಲಿ ಸೈಬರ್ ಭದ್ರತೆ, ರೊಬೊಟಿಕ್ , AI ನಂತಹ ವಿಶೇಷ ಕೌಶಲ್ಯಗಳನ್ನು ಹೊಂದಿರುವ ಉದ್ಯೋಗಗಳಿಗೆ ಬೇಡಿಕೆ ಮುಂದುವರಿಯಲಿದೆ. ಜೊತೆಗೆ ಐಟಿ ಸೇವಾ ವಲಯದಲ್ಲಿ ಎಂಟ್ರಿ-ಲೆವೆಲ್ ಮತ್ತು ಮಿಡ್-ಜೂನಿಯರ್ ಹಂತದ ಉದ್ಯೋಗಾವಕಾಶಗಳು ಹೆಚ್ಚುತ್ತಿವೆ, ಇದು ಉದ್ಯೋಗಿಗಳ ಬೇಡಿಕೆಯಲ್ಲಿ ಬದಲಾವಣೆಯ ಪ್ರವೃತ್ತಿಯನ್ನು ಸೂಚಿಸುತ್ತದೆ ಅಂದರೆ ತಪ್ಪಾಗಲಾರದು.
More From GoodReturns

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!



Click it and Unblock the Notifications