ಭಾರತೀಯ ರೈಲ್ವೇ ಇಲಾಖೆ (Indian Railways) ಪ್ರಯಾಣಿಕರ ಅನುಕೂಲಕ್ಕಾಗಿ ಸದಾ ಏನಾದರೊಂದು ಸೌಲಭ್ಯಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತದೆ. ಇದೀಗ ಕರ್ನಾಟಕ ರೈಲ್ವೇ ಪ್ರಯಾಣಿಕರಿಗೆ ಗುಡ್ ನ್ಯೂಸ್ ಒಂದಿದೆ. ಕಲಬುರಗಿ ಮತ್ತು ಬೆಂಗಳೂರು (Kalaburagi-Bengaluru) ಕಂಟೋನ್ಮೆಂಟ್ ನಡುವೆ ವಿಶೇಷ ವಾರಾಂತ್ಯದ ರೈಲುಗಳನ್ನು ಪರಿಚಯಿಸಿದೆ. ಆ ಪ್ರಕಾರ ಪ್ರಯಾಣಿಕರು ತಮಗೆ ಬೇಕಾದ ದಿನಗಳಲ್ಲಿ ಸಂಚಾರ ಮಾಡಬಹುದು.

ಕಲಬುರಗಿ ಮತ್ತು ಬೆಂಗಳೂರು ಕಂಟೋನ್ಮೆಂಟ್ ನಡುವೆ ವಿಶೇಷ ವಾರಾಂತ್ಯದ ರೈಲುಗಳನ್ನು ರೈಲ್ವೇ ಇಲಾಖೆ ಆರಂಭಿಸಿದೆ. ಈ ಸೇವೆಗಳು ಡಿಸೆಂಬರ್ ಅಂತ್ಯದವರೆಗೆ ಪ್ರತಿಯಾಗಿ ಆರು ಟ್ರಿಪ್‌ಗಳನ್ನು ಒಳಗೊಂಡಿರುತ್ತದೆ.
ಹೆಚ್ಚಿದ ಪ್ರಯಾಣಿಕರ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ, ಭಾರತೀಯ ರೈಲ್ವೆಯ ಸೋಲಾಪುರ ವಿಭಾಗ ಈ ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ. ನವೆಂಬರ್ 24ರಂದು ಘೋಷಿಸಲಾದ ಈ ರೈಲುಗಳು ಡಿಸೆಂಬರ್ ಅಂತ್ಯದವರೆಗೆ ಕಾರ್ಯಾಚರಣೆ ನಡೆಸಲಿದೆ ಎಂದು ವರದಿಯಾಗಿದೆ. ಕಾರ್ಯಕ್ರಮಗಳ ಸೀಸನ್ ಆರಂಭವಾಗುತ್ತಿರುವ ಹಿನ್ನೆಲೆ, ಪ್ರಯಾಣಿಕರ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ರೈಲ್ವೇ ಇಲಾಖೆ ಈ ಸೇವೆ ನೀಡುತ್ತಿದ್ದು, ಇದರಿಂದ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ಯಾವಾಗ ಆರಂಭ?
ನವೆಂಬರ್ 23ರಿಂದ ಡಿಸೆಂಬರ್ 28ರವರೆಗೆ, ವಿಶೇಷ ರೈಲು ಸಂಖ್ಯೆ 06208 ಕಲಬುರಗಿಯಿಂದ ಪ್ರತಿ ಭಾನುವಾರ ಬೆಳಿಗ್ಗೆ 09:35ಕ್ಕೆ ಹೊರಟು ರಾತ್ರಿ 08:30ಕ್ಕೆ ಬೆಂಗಳೂರು ಕಂಟೋನ್ಮೆಂಟ್ ತಲುಪಲಿದೆ. ಇನ್ನು ಬೆಂಗಳೂರಿನಿಂದ ಕಲಬುರ್ಗಿಗೆ ರೈಲು ಸಂಖ್ಯೆ 06207, ನವೆಂಬರ್ 22ರಿಂದ ಡಿಸೆಂಬರ್ 27ರವರೆಗೆ ಪ್ರತಿ ಶನಿವಾರ ಬೆಂಗಳೂರು ಕಂಟೋನ್ಮೆಂಟ್‌ನಿಂದ ಸಂಜೆ 07:20ಕ್ಕೆ ಹೊರಟು ಮರುದಿನ ಬೆಳಿಗ್ಗೆ 07:30ಕ್ಕೆ ಕಲಬುರಗಿ ತಲುಪಲಿದೆ.
ಈ ವಿಶೇಷ ರೈಲುಗಳು ಯಲಹಂಕ, ಹಿಂದೂಪುರ, ಧರ್ಮಾವರಂ, ಅನಂತಪುರ, ಗೂಟಂಟಕಲ್, ಅಡೋನಿ, ಮಂತ್ರಾಲಯಂ ರಸ್ತೆ, ರಾಯಚೂರು, ಕೃಷ್ಣ, ಯಾದಗಿರಿ ಮತ್ತು ಶಹಾಬಾದ್ ಸೇರಿದಂತೆ ಪ್ರಮುಖ ನಿಲ್ದಾಣಗಳನ್ನು ಸಾಗಿಕೊಂಡು ಸಂಚರಿಸಲಿದೆ. ಪ್ರತಿಯೊಂದು ರೈಲು 22 ಬೋಗಿಗಳನ್ನು ಹೊಂದಿದ್ದು, 20 ಸ್ಲೀಪರ್ ಕ್ಲಾಸ್ ಮತ್ತು 2 ಸೆಕೆಂಡ್ ಕ್ಲಾಸ್ ಲಗೇಜ್-ಕಮ್-ದಿವ್ಯಾಂಗಜನ್ ಬೋಗಿಗಳನ್ನು ಹೊಂದಿರಲಿದೆ ಎನ್ನಲಾಗಿದೆ
ಈ ವಿಶೇಷ ರೈಲುಗಳ ಟಿಕೆಟ್‌ಗಳನ್ನು ಎಲ್ಲಾ ಬುಕಿಂಗ್ ಕೌಂಟರ್‌ಗಳಲ್ಲಿ ಮತ್ತು IRCTC ವೆಬ್‌ಸೈಟ್ ಮೂಲಕವೂ ಬುಕ್ ಮಾಡಬಹುದು. ಕಾಯ್ದಿರಿಸದ ಪ್ರಯಾಣಿಕರು ನಿಲ್ದಾಣದ ಕೌಂಟರ್‌ಗಳಲ್ಲಿ ಅಥವಾ UTS ಅಪ್ಲಿಕೇಶನ್ ಮೂಲಕವೂ ಟಿಕೆಟ್ ಕಾಯ್ದಿರಿಸಬಹುದು.
ಯಾವಾಗ ಬರಲಿದೆ ವಂದೇ ಭಾರತ್ ಸ್ಲೀಪರ್?
ಅತ್ತ ಭಾರತೀಯ ರೈಲ್ವೇ ಇಲಾಖೆ ಹೊಸ ಹೊಸ ಸೇವೆಗಳನ್ನು ನೀಡುತ್ತಿದ್ದರು, ವಂದೇ ಭಾರತ್ ಸ್ಲೀಪರ್ ರೈಲಿನ ಕಾರ್ಯಾಚರಣೆ ವಿಳಂಬವಾಗುತ್ತಿದೆ. ಪರಿಶೀಲನೆ ನಂತರ ಹಲವಾರು ಲೋಪಗಳನ್ನು ಕಂಡುಕೊಂಡ ಅಧಿಕಾರಿಗಳು ಮತ್ತೆ ಸರಿ ಮಾಡಿ ಪ್ರಾಯೋಗಿಕವಾಗಿ ಪರಿಶೀಲನೆಗೆ ಕಳುಹಿಸುವಂತೆ ಕೋರಲಾಗಿದೆ. ಇಲ್ಲದಿದ್ದರೆ ಇದೇ ನವೆಂಬರ್, ಡಿಸೆಂಬರ್ ವೇಳೆ ವಂದೇ ಭಾರತ್ ಸ್ಲೀಪರ್‌ನ ಮೊದಲ ರೈಲು ಕಾರ್ಯಾಚರಣಡ ನಡೆಸಲಿತ್ತು.
ಇನ್ನು ಈ ಸ್ಲೀಪರ್ ರೈಲಿನ ವಿಶೇಷತೆಗಳನ್ನು ನೋಡುವುದಾದರೆ, ಸೀಟುಗಳು ಬಹಳ ವಿಶಾಲವಾಗಿರುತ್ತದೆ. ಆದ್ದರಿಂ ಪ್ರಯಾಣಿಕರು ಆರಾಮವಾಗಿ ಸ್ಲೀಪರ್ ರೈಲುಗಳಲ್ಲಿ ಪ್ರಯಾಣ ಮಾಡಬಹುದು. ಅಷ್ಟೇ ಅಲ್ಲದೇ ಆಸನದಲ್ಲೇ ವೈಫೈ, ಚಾರ್ಜಿಂಗ್ ಸೌಲಭ್ಯ, ಹೀಗೆ ಅಗತ್ಯ ಸೌಕರ್ಯಗಳನ್ನು ನೀಡಲಾಗಿದೆ.


Click it and Unblock the Notifications