ಕಲ್ಯಾಣ ಕರ್ನಾಟಕ್ಕೆ ಭರ್ಜರಿ ಸಿಹಿಸುದ್ದಿ ಇದು! ಕೇಂದ್ರ ಸಚಿವ ವಿ. ಸೋಮಣ್ಣ ಕಲ್ಯಾಣ ಕರ್ನಾಟಕ್ಕೆ ಮತ್ತೊಂದು ಉಡುಗೊರೆ ಕೊಟ್ಟಿದ್ದಾರೆ. ಹೌದು, ಬೆಂಗಳೂರಿನಿಂದ ಕಲ್ಯಾಣ ಕರ್ನಾಟಕ್ಕೆ ಹೋಗುವ ಪ್ರಯಾಣಿಕರಿಗೆ ಇದು ಹೆಚ್ಚಿನ ಅನುಕೂಲಕರವಾಗಿದೆ.
ಬೆಂಗಳೂರಿಗೆ ಮತ್ತೊಂದು ನೇರ ರೈಲು ಓಡಾಟ ನಡೆಸುತ್ತಿದೆ ಎಂದು ವಿ. ಸೋಮಣ್ಣ ಘೋಷಣೆ ಮಾಡಿದ್ದಾರೆ. ಅದರಂತೆ, ಕೆಎಸ್‌ಆರ್ ಬೆಂಗಳೂರು - ಹುಬ್ಬಳ್ಳಿ ಎಕ್ಸ್‌ಪ್ರೆಸ್ ಅನ್ನು ಸಿಂಧನೂರಿಗೆ ವಿಸ್ತರಣೆಯನ್ನು ಮಾಡಲಾಗಿದೆ. ಇದರಿಂದ ನಾಲ್ಕು ಜಿಲ್ಲೆಗಳಿಗರ ಅನುಕೂಲವಾಗಲಿದೆ. ಈ ರೈಲಿನ ವಿವರ ಮತ್ತು ಇತ್ಯಾದಿ ಮಾಹಿತಿ ತಿಳಿಯಲು ಮುಂದೆ ಓದಿ.

ಸಿಂಧನೂರು ಹಾಗೂ ಬೆಂಗಳೂರು ನಡುವೆ ರೈಲಿನಿಂದ ಪ್ರಯಾಣಿಸಲು ಇನ್ನು ಮುಂದೆ ಮತ್ತಷ್ಟು ಸೌಲಭ್ಯ ಲಭ್ಯವಾಗಿದೆ. ಈಗಾಗಲೇ ಸೇವೆಯಲ್ಲಿರುವ ರೈಲು ಬೆಂಗಳೂರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (KSR) ನಿಲ್ದಾಣದಿಂದ ರಾತ್ರಿ 12.15ಕ್ಕೆ ಹೊರಟು, ಮುಂದಿನ ದಿನ ಬೆಳಿಗ್ಗೆ ಹುಬ್ಬಳ್ಳಿಗೆ ತಲುಪುತ್ತದೆ. ಅಲ್ಲಿಂದ ಸಿಂಧನೂರಿಗೆ ಸಾಗುತ್ತಾ ಮಧ್ಯಾಹ್ನದ ವೇಳೆಗೆ ತಲುಪುತ್ತದೆ. ಈ ರೈಲು, ಸಿಂಧನೂರಿಗೆ ತಲುಪಿದ ಬಳಿಕ, ಅಲ್ಲಿಂದ ಮಧ್ಯಾಹ್ನಕ್ಕೆ ಮರಳಿ ಪ್ರಯಾಣ ಆರಂಭಿಸಿ, ಹುಬ್ಬಳ್ಳಿ ಮಾರ್ಗವಾಗಿ, ಮರುದಿನ ಬೆಳಗಿನ ಜಾವ ಬೆಂಗಳೂರನ್ನು ತಲುಪುತ್ತದೆ. ಈ ಮೂಲಕ ಎರಡೂ ನಗರಗಳ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಹಳ್ಳಿಯ ಜನರಿಗೆ ಸುದೀರ್ಘ ಸುಲಭ ಪ್ರಯಾಣ ಸಾಧ್ಯವಾಗುತ್ತದೆ.
ರೈಲಿನ ಪ್ರಯಾಣಿಕರು ಸುಲಭವನ್ನು ಗಮನದಲ್ಲಿ ಇಟ್ಟುಕೊಂಡು ವಿವಿಧ ವರ್ಗಗಳ ಬೋಗಿಗಳು ಇರಿಸಲ್ಪಟ್ಟಿದೆ. ಈ ಮಾರ್ಗವಾಗಿ ಈಗಾಗಲೇ ಟಿಕೆಟ್ ಬುಕ್ಕಿಂಗ್ ಕೂಡ ಆರಂಭವಾಗಿದೆ.
ಈ ಕುರಿತು ಎಕ್ಸ್ ಖತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿರುವ ಕೇಂದ್ರ ಸಚಿವ ವಿ. ಸೋಮಣ್ಣ "ಕಲ್ಯಾಣ ಕರ್ನಾಟಕಕ್ಕೆ ಸಂಪರ್ಕ ಸುಧಾರಣೆಗೆ ಬೆಂಗಳೂರು - ಹುಬ್ಬಳ್ಳಿ ಎಕ್ಸ್‌ಪ್ರೆಸ್ (17391/17392) ಸಿಂಧನೂರಿಗೆ ವಿಸ್ತರಣೆಯು ಬೆಂಗಳೂರಿಗೆ ಮತ್ತೊಂದು ನೇರ ರೈಲು ಸಂಪರ್ಕವನ್ನು ನೀಡುತ್ತದೆ. ಇದು ಪ್ರಯಾಣಿಕರಿಗೆ ಪ್ರಯಾಣವನ್ನು ಸುಗಮಗೊಳಿಸುತ್ತದೆ.
ಈ ಹೊಸ ಸಂಪರ್ಕದಿಂದಾಗಿ ಕಲ್ಯಾಣ ಕರ್ನಾಟಕ ಭಾಗದ ಹಲವು ಪ್ರಯಾಣಿಕರಿಗೆ ಸಂಪರ್ಕ ಸುಧಾರಣೆಯಾಗುತ್ತದೆ. ಅದರಲ್ಲಿ ಗೋರೆಬಾಳ್ ರೈಲು ನಿಲ್ದಾಣದಲ್ಲಿ ಮೂರು ರೈಲುಗಳಿಗೆ ನಿಲುಗಡೆ ಅನುಮೋದನೆ ಸಿಕ್ಕಿದ್ದು, ಇದು ಪ್ರತಿನಿತ್ಯ ಪ್ರಯಾಣ ಮಾಡುವಂತಹ ಪ್ರಯಣಿಕರಿಗೆ ಹೆಚ್ಚಿನ ಅನುಕೂಲ ಸಿಗುತ್ತಿದೆ. ರೈಲು ಪ್ರಯಾಣವನ್ನು ಹೆಚ್ಚು ಅನುಕೂಲಕರ ಮಾಡಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು.
ಯಶವಂತಪುರ-ಸಿಂಧನೂರು ಎಕ್ಸ್‌ಪ್ರೆಸ್, ಹುಬ್ಬಳ್ಳಿ-ಸಿಂಧನೂರು ಎಕ್ಸ್‌ಪ್ರೆಸ್ ಹಾಗೂ ಹುಬ್ಬಳ್ಳಿ-ಸಿಂಧನೂರು ಪ್ಯಾಸೆಂಜರ್ ರೈಲುಗಳಿಗೆ ಗೊರೇಬಾಳ ರೈಲು ನಿಲ್ದಾಣದಲ್ಲಿ ಹೆಚ್ಚುವರಿ ರೈಲು ನಿಲುಗಡೆಗೆ ಆದೇಶಿಸಲಾಗಿದೆ.ಕಲ್ಯಾಣ ಕರ್ನಾಟಕದ ಜನತೆ ಈ ಹೊಸ ರೈಲು ಸೇವೆಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಎಂದು ಬರೆದುಕೊಂಡಿದ್ದಾರೆ.
ನಾಲ್ಕು ಜಿಲ್ಲೆಗೆ ನೇರ ಪ್ರಯೋಜನ
ಈ ರೈಲು ವಿಸ್ತರಣೆದಿಂದ ರಾಯಚೂರು, ಕೊಪ್ಪಳ, ಗದಗ ಹಾಗೂ ವಿಜಯನಗರ ಜಿಲ್ಲೆಗಳ ಜನತೆಗೆ ಹೆಚ್ಚಿನ ಅನುಕೂಲವಾಗುತ್ತದೆ. ಈ ಜಿಲ್ಲೆಗಳ ಹಲವಾರು ನಿಲ್ದಾಣಗಳಲ್ಲಿ ರೈಲು ನಿಲ್ಲಲಿದ್ದು, ಈ ಭಾಗದ ಜನರಿಗೆ ಬೆಂಗಳೂರು ನೇರವಾಗಿ ರೂಲಿನಲ್ಲಿ ಪ್ರಯಾಣವನ್ನು ಬೆಳಸಬಹುದು. ಇದರಿಂದ ಸ್ಥಳೀಯ ವಾಣಿಜ್ಯ, ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯ ಸೇವೆಗಳಿಗೆ ಬೆಂಗಳೂರಿಗೆ ಆಗಾಗ್ಗೆ ತೆರಳುವ ಜನರಿಗೆ ಸುಲಭವಾಗಿ ಪ್ರಯಾಣಕ್ಕೆ ಸಹಾತಯವಾಗುತ್ತದೆ.
ರೈಲು ಸೇವೆಯ ವೇಳಾಪಟ್ಟಿ
- ಬೆಂಗಳೂರು - ಹುಬ್ಬಳ್ಳಿ ಎಕ್ಸ್‌ಪ್ರೆಸ್ ಬೆಂಗಳೂರಿನಿಂದ ರಾತ್ರಿ 12:15ಕ್ಕೆ ರೈಲು ಹೊರಡುವುದು, ಬೆಳಿಗ್ಗೆ ಹುಬ್ಬಳ್ಳಿ ತಲುಪುವುದು.
- ಅಲ್ಲಿ ನಿಲುಗಡೆಯಾದ ಬಳಿಕ, ರೈಲು ಮಧ್ಯಾಹ್ನದ ವೇಳೆಗೆ ಸಿಂಧನೂರಿಗೆ ತಲುಪುವುದು.
- ಸಿಂಧನೂರಿನಿಂದ ಮತ್ತೆ ಮಧ್ಯಾಹ್ನ ಪ್ರಾರಂಭವಾಗಿ, ಮರುದಿನ ಬೆಳಿಗ್ಗೆ ಬೆಂಗಳೂರನ್ನು ತಲುಪಲಿದೆ.
ಟಿಕೆಟ್‌ಗಳನ್ನು ಹೇಗೆ ಬುಕ್ ಮಾಡಬಹುದು?
ನೀವು ಟಿಕೆಟ್‌ಗಳನ್ನು IRCTC ವೆಬ್‌ಸೈಟ್ ಅಥವಾ ಆಪ್ ಮೂಲಕ ಬುಕ್ ಮಾಡಬಹುದು.ಅಥವಾ ರೈಲ್ವೆ ನಿಲ್ದಾಣದಲ್ಲಿ ಟಿಕೆಟ್ ತಗೆದುಕೊಳ್ಳಬಹುದು.
ಗೋಕಾಕ್ ರೋಡ್ ರೈಲು ನಿಲ್ದಾಣಕ್ಕೆ ಹೊಸ ರೂಪ
ವರ್ಧಿತ ಮೂಲಸೌಕರ್ಯ ಮತ್ತು ಸುಧಾರಿತ ಪ್ರಯಾಣಿಕ ಸೌಲಭ್ಯಗಳೊಂದಿಗೆ ಪುನರಾಭಿವೃದ್ದಿಗೊಂಡ ಗೋಕಾಕ್ ರೋಡ್ ರೈಲು ನಿಲ್ದಾಣವು ಅಮೃತ ಭಾರತ ನಿಲ್ದಾಣ ಯೋಜನೆಯ ಅಡಿ ಭಾರತದ ಪ್ರಗತಿಯ ಸಂಕೇತವಾಗಿ ರೂಪುಗೊಂಡಿದೆ. ಅಮೃತ ಭಾರತ ನಿಲ್ದಾಣ ಯೋಜನೆಯಡಿಯಲ್ಲಿ ಪುನರಾಭಿವೃದ್ಧಿಗೊಳಿಸಲಾದ ಈ ನಿಲ್ದಾಣವು ಈಗ ಸೂಚನಾ ಫಲಕಗಳು, ಸೌಂದರ್ಯದಾಯಕ ನಿಲ್ದಾಣದ ಮುಂಭಾಗವನ್ನು ಹೊಂದಿದೆ. ಹಿಂದೆಂದಿಗಿಂತಲೂ ಸುಗಮ ಮತ್ತು ಹೆಚ್ಚು ಪ್ರಯಾಣಿಕ ಸ್ನೇಹಿ ಪ್ರಯಾಣವನ್ನು ಅನುಭವ ನೀಡುತ್ತದೆ.
ಅಮೃತ ಭಾರತ ನಿಲ್ದಾಣ ಯೋಜನೆಯಡಿಯಲ್ಲಿ ಹೊಸ ರೂಪ ಪಡೆದಿರುವ ಗೋಕಾಕ್ ರೋಡ್ ರೈಲು ನಿಲ್ದಾಣವು, ಈಗ ಸುಧಾರಿತ ಸಂಚಾರ ಪ್ರದೇಶ , 12 ಮೀ ಅಗಲದ ಪಾದಚಾರಿ ಸೇತುವೆ, ವಿಶಾಲವಾದ ಎಕ್ಸಿಕ್ಯುಟಿವ್ ಲೌಂಜ್ ಮತ್ತು ಆಧುನೀಕರಿಸಿದ ಟಿಕೆಟ್ ವಲಯವನ್ನು ಹೊಂದಿದೆ.


Click it and Unblock the Notifications