ದೀಪಾವಳಿ, ದಸರಾ ಹಬ್ಬ ಮುಗಿದಾಯ್ತು. ರಜೆ ಮೂಲಕ ಊರಿಗೆ ಬಂದವರೆಲ್ಲಾ ಮರಳಿ ಕೆಲಸಕ್ಕೆ ಹೋಗಿ ಆಯ್ತು. ಆದ್ರೆ ಇನ್ನೇನು ಒಂದು ತಿಂಗಳಲ್ಲಿ ಕ್ರೈಸ್ತರ ಹಬ್ಬ ಕ್ರಿಸ್ಮಸ್ ಬರಲಿದೆ. ಈ ಹಬ್ಬದ ಪ್ರಯುಕ್ತ ಹಲವಾರು ಶಾಲೆಗಳಿಗೆ, ಕೆಲಸಗಳಿಗೆ ಸಾರ್ವತ್ರಿಕ ರಜೆ ನೀಡಲಾಗುತ್ತದೆ. ಈ ಸಂದರ್ಭದಲ್ಲಿ ಹೆಚ್ಚಿನವರು ಮತ್ತೆ ಊರಿಗೆ ಬರೋ ಪ್ಲಾನ್ ಮಾಡಿಕೊಂಡಿರುತ್ತಾರೆ. ಇದೀಗ ಅಂಥವರಿಗೆ ಗುಡ್ ನ್ಯೂಸ್ ಒಂದಿದೆ ನೋಡಿ. ಕ್ರಿಸ್ಮಸ್ ಹಬ್ಬಕ್ಕೆ ಊರಿಗೆ ಬರುವವರಿಗಾಗಿ ಇಂಡಿಯನ್ ರೈಲ್ವೇಯು ಟಿಕೆಟ್ ಬುಕಿಂಗ್ (Train Ticket Booking) ವ್ಯವಸ್ಥೆಗೆ ಅವಕಾಶ ನೀಡಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಭಾರತೀಯ ರೈಲ್ವೇ (Indian Railway) ಈ ನಿರ್ಧಾರ ಕೈಗೊಂಡಿದೆ.

ಪ್ರಯಾಣಿಕರಿಗೆ ಗುಡ್ ನ್ಯೂಸ್ ಕೊಟ್ಟ IRCTC!
IRCTC ವೆಬ್‌ಸೈಟ್ ಮೂಲಕ ಪ್ರಯಾಣಿಕರು ಈಗಲೇ ಕ್ರಿಸ್ಮಸ್ ಹಬ್ಬದ ರೈಲು ಟಿಕೆಟ್ ಬುಕ್ ಮಾಡಬಹುದು. ಅದಕ್ಕಾಗಿ ನೀವು ಅಧಿಕೃತ IRCTC ವೆಬ್‌ಸೈಟ್ www.irctc.co.in ಗೆ ಓಪನ್ ಮಾಡಿ. ನಿಮ್ಮ IRCTC ಐಡಿಯೊಂದಿಗೆ ಲಾಗ್ ಇನ್ ಮಾಡಬೇಕು. ಒಂದು ವೇಳೆ ನಿಮ್ಮ ಬಳಿ ಐಆರ್‌ಸಿಟಿಸಿ ಖಾತೆ ಇಲ್ಲದಿದ್ದರೆ, ಅಗತ್ಯವಿರುವ ವಿವರಗಳನ್ನು ಆಡ್ ಮಾಡಿ ರಿಜಿಸ್ಟರ್ ಮಾಡಿಕೊಳ್ಳಬಹುದು. ಆನಂತರ ನೀವು ಹೋಮ್‌ಪೇಜ್‌ನಲ್ಲಿ ನೀವು ಬುಕ್ ಮಾಡಲು ಬಯಸುವ ದಾಖಲೆಗಳನ್ನು ನಮೂದಿಸಬೇಕು.
ಹೋಮ್ ಪೇಜ್‌ನಲ್ಲಿ ನೀವು 'ಸರ್ಚ್ ಟ್ರೈನ್' ಅನ್ನು ಕ್ಲಿಕ್ ಮಾಡಿ. ಅಲ್ಲಿ ನೀವು ರೈಲುಗಳನ್ನು ಸೆಲೆಕ್ಟ್ ಮಾಡಬಹುದು. ನಿಮಗೆ ಬೇಕಾಗುವ ರೈಲು ಮತ್ತು ವರ್ಗವನ್ನು ಸೆಲೆಕ್ಟ್ ಮಾಡಬೇಕು. ನಂತರ 'ಬುಕ್ ನೌ' ಕ್ಲಿಕ್ ಮಾಡಿ. ಅದಕ್ಕೆ ಕ್ಲಿಕ್ ಮಾಡಿದ್ರೆ, ಪ್ರಯಾಣಿಕರ ದಾಖಲೆಗಳನ್ನು ಆಡ್ ಮಾಡಿ, ಪೇಮೆಂಟ್ ಮಾಡಿದರೆ ಆಯ್ತು. ಪೇಮೆಂಟ್ ಯಶಸ್ವಿಯಾ ನಂತರ, ನಿಮಗೆ ಇ ಟಿಕೆಟ್ ಸಿಗುತ್ತದೆ. ಅದನ್ನು ಪಡೆದುಕೊಂಡು ನೀವು ರಿಸರ್ವೇಶನ್ ಸ್ಲಿಪ್ ಅನ್ನು ಪ್ರಿಂಟ್ ಮಾಡಬಹುದು.
ಮೊಬೈಲ್ ಮೂಲಕ ಟಿಕೆಟ್ ಬುಕ್ ಮಾಡುವುದು ಹೇಗೆ?
IRCTC ರೈಲ್ ಕನೆಕ್ಟ್ ಮೊಬೈಲ್ ಅಪ್ಲಿಕೇಶನ್ ಬಳಸಿ ರೈಲ್ವೇ ಟಿಕೆಟ್ ಬುಕ್ ಮಾಡಬಹುದು. ಅದಕ್ಕಾಗಿ ನೀವು ಆಪ್ ಸ್ಟೋರ್‌ನಿಂದ IRCTC ರೈಲ್ ಕನೆಕ್ಟ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಬೇಕು. ಆ ನಂತರ ಆಪ್ ಓಪನ್ ಮಾಡಿ, IRCTC ಐಡಿಗಳನ್ನು ಹಾಕಿ ಲಾಗ್ ಇನ್ ಮಾಡಿ. ಅಲ್ಲಿ ನೀವು ಹೋಗಬೇಕಾದ ಜಾಗ, ಟಿಕೆಟ್ ವಿವರಗಳನ್ನು ಹಾಕಬೇಕು.
ಆನಂತರ ನೀವು ಆಪ್‌ನಲ್ಲಿ ಸರ್ಚ್ ಟ್ರೈನ್ ಎಂಬುದರ ಮೇಲೆ ಟ್ಯಾಪ್ ಮಾಡಬೇಕು. ಅಲ್ಲಿ ನೀವು ಹೋಗಲು ಬಯಸುವ ರೈಲು ಯಾವುದು ಮತ್ತು ವರ್ಗ ಯಾವುದು ಎಂಬುದನ್ನು ಆಯ್ಕೆ ಮಾಡಬೇಕು. ಆ ನಂತರ 'ಬುಕ್ ನೌ' ಮೇಲೆ ಕ್ಲಿಕ್ ಮಾಡಬೇಕು. ಬಳಿಕ ಪ್ರಯಾಣಿಕರ ದಾಖಲೆಗಳನ್ನು ಆಡ್ ಮಾಡಿ, ಪೇಮೆಂಟ್ ಮಾಡಬೇಕು. ಪೇಮೆಂಟ್ ಒಮ್ಮೆ ಯಶಸ್ವಿಯಾದ್ರೆ, ನೀವು ರೈಲು ಟಿಕೆಟ್ ಪಡೆದಂತೆ.
ಅಕ್ಟೋಬರ್ 1, 2025 ರಿಂದ, ಯಾವುದೇ ರೈಲಿಗೆ ಜನರಲ್ ರಿಸರ್ವೇಷನ್ ವಿಂಡೋ ತೆರೆದ ಮೊದಲ 15 ನಿಮಿಷಗಳಲ್ಲಿ ಕಾಯ್ದಿರಿಸಿದ ಸಾಮಾನ್ಯ ಟಿಕೆಟ್ ಬುಕ್ ಮಾಡಲು ಆಧಾರ್ ದಾಖಲೆಯನ್ನು ಸಲ್ಲಿಸುವುದು ಕಡ್ಡಾಯ ಮಾಡಿದೆ. ಇನ್ನು ಈ ನೀತಿಯು IRCTC ವೆಬ್‌ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್ ಎರಡಲ್ಲೂ ಅನ್ವಯವಾಗುತ್ತದೆ.
ಕ್ರಿಸ್ಮಸ್ ಹಬ್ಬದ ರಜಾ ದಿನಗಳಲ್ಲಿ ಅನೇಕರು ಊರಿಗೆ ಬರುತ್ತಾರೆ. ಈ ಸಂದರ್ಭದಲ್ಲಿ ರೈಲ್ವೇ ಸ್ಟೇಷನ್‌ಗಳಲ್ಲಾಗುವ ದಟ್ಟಣೆಯನ್ನು ತಡೆಯಲು ಈ ನಿರ್ಧಾರ ಕೈಗೊಂಡಿದ್ದು, ಅಧಿಕೃತ IRCTC ಪೋರ್ಟಲ್ ಅಥವಾ ರೈಲ್ವೇ ಬುಕಿಂಗ್ ಕೌಂಟರ್‌ಗಳ ಮೂಲಕ ಮುಂಚಿತವಾಗಿ ಟಿಕೆಟ್ ಕಾಯ್ದಿರಿಸಬಹುದು.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?



Click it and Unblock the Notifications