ತುಮಕೂರು ಜನರ ಅದೃಷ್ಟವೋ? ಅಥವಾ ತುಮಕೂರಿಗೆ ಸಿಕ್ಕಿರುವ ಜನಪ್ರತಿನಿಧಿಗಳ ಪುಣ್ಯವೋ? ಗೊತ್ತಿಲ್ಲ. ಕಲ್ಪತರು ನಾಡಿನಲ್ಲಿ ಅಭಿವೃದ್ಧಿಯ ಶಕೆ ಆರಂಭವಾಗಿದೆ. ಹೌದು, ತುಮಕೂರಿಗೆ ಮೆಟ್ರೋ (Namma Metro) ವಿಸ್ತರಣೆ, ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ (Tumkur International Cricket Stadium) ನಿರ್ಮಾಣ, ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಇದರ ಬೆನ್ನಲ್ಲೇ ಮತ್ತರೆಡು ಸಿಹಿಸುದ್ದಿ ಸಿಕ್ಕಿದೆ.
ಹೌದು,ತುಮಕೂರಿಗರಿಗೆ ಎರಡು ಸಿಹಿಸುದ್ದಿ ಬರುವುದಾಗಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ. ತುಮಕೂರಿಗೆ ನಮ್ಮ ಮೆಟ್ರೋ ಮಾತ್ರವಲ್ಲ ಅರ್ಬನ್ ರೈಲು ಕೂಡ ಬರಬೇಕು ಎಂದು ಹೇಳಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾವು ತುಮಕೂರಿಗೆ ಮೆಟ್ರೋ ಯೋಜನೆ ರಾಜ್ಯದ ತೀರ್ಮಾನ ಏನಾಗುತ್ತೆ ನೋಡಿಕೊಂಡು ಕೇಂದ್ರದವರ ಬಳಿ ಮಾತಾಡ್ತೀವೆ. ತುಮಕೂರಿಗೆ ಮೆಟ್ರೋ ಅಗತ್ಯವಿದೆ ಅಂತ ಸಚಿವ ವಿ. ಸೋಮಣ್ಣ ಹೇಳಿದ್ದಾರೆ. ಜೊತೆಗೆ ಸಬ್ ಅರ್ಬನ್ ಕೂಡ ಆಗಬೇಕು ಅಂತ ಇದೆ. ಎರಡೂ ಆದರೆ ನಮ್ಮ ತುಮಕೂರು ಅತಿವೇಗವಾಗಿ ಬೆಳೆಯುತ್ತಿದೆ. ಇಂಡಸ್ಟ್ರಿ ಹಬ್ ಬೆಳೆಯುತ್ತಿದೆ. ಬೆಂಗಳೂರು ವಿಸ್ತರಣೆ ಮಾಡಿದಂತೆ ತುಮಕೂರು ವಿಸ್ತರಣೆ ಮಾಡಬೇಕು ಎಂದು ಹೇಳಿದ್ದಾರೆ.
ತುಮಕೂರನ್ನ ಗ್ರೇಟರ್ ಬೆಂಗಳೂರಿಗೆ ಸೇರ್ಪಡೆ ಮಾಡಬೇಕು
ತುಮಕೂರು ಜಿಲ್ಲೆಯನ್ನು ಗ್ರೇಟರ್ ಬೆಂಗಳೂರು ವ್ಯಾಪಿಗೆ ಸೇರಿಸಬೇಕು.ಈ ಕುರಿತು ತುಮಕೂರಿನರು ಜನತೆ ಹೆಚ್ಚಾಗಿ ಕೇಳುತ್ತಿದ್ದಾರೆ. ಈಗಾಗಲೇ ತುಮಕೂರನ್ನು ಗ್ರೇಟರ್ ಬೆಂಗಳೂರಿಗೆ ಸೇರಿಸಲು ಅಧ್ಯಯನ ಕೂಡ ನಡೆಯುತ್ತಿದೆ. ಬೆಂಗಳೂರಿಗೆ ಸಮೀಪವಿರುವ ತುಮಕೂರು ಜಿಲ್ಲೆ ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ಸೇರಿಸಿಕೊಂಡರೆ ಹೆಚ್ಚಿನ ಅಭಿವೃದ್ಧಿಯಾಗುತ್ತದೆ.ಬೆಂಗಳೂರಿನಂತೆ ತುಮಕೂರು ಕೂಡ ವೇಗವಾಗಿ ಬೆಳೆಯುತ್ತದೆ. ಇದಕ್ಕೆ ಪ್ರಸ್ತಾವನೆಯನ್ನು ಕೂಡ ಸಲ್ಲಿಕೆ ಮಾಡಲಾಗಿದೆ ಎಂದು ಮಾಹಿತಿಯನ್ನು ತಿಳಿಸಿದ್ದಾರೆ.
20 ಸಾವಿರ ಎಕರೆಯಲ್ಲಿ ಇಂಡಸ್ಟ್ರೀಯಲ್ ಹಬ್
ಬೆಂಗಳೂರಿಗೆ 70 ಕಿ.ಮೀ ಹತ್ತರದಲ್ಲಿ ತುಮಕೂರು ಇದೆ. ಈಗಾಗಲೇ ಹಲವಾರು ಕಂಪನಿಗಳು ತುಮಕೂರಿಗೆ ಬಂದಿವೆ. ಸಿಎಂ ಸಿದ್ದರಾಮಯ್ಯ ತುಮಕೂರಿನಲ್ಲಿ ಕೈಗಾರಿಕಾ ಕಾರಿಡಾರ್ ನಿರ್ಮಾಣಕ್ಕೆ ಅನುಮತಿ ನೀಡಿದ್ದಾರೆ. ನಾವು 20 ಸಾವಿರ ಎಕರೆಯಲ್ಲಿ ಇಂಡಸ್ಟ್ರೀಯಲ್ ಹಬ್ ಮಾಡಿದ್ದೇವೆ ಎಂದರು.
ತುಮಕೂರಿಗೆ ಮೆಟ್ರೋ ಸಂಪರ್ಕದ ಅಗತ್ಯವಿದೆ
ತುಮಕೂರಿಗೆ ಮೆಟ್ರೋ ಯೋಜನೆಯನ್ನು ವಿಸ್ತರಿಸುವ ಬಗ್ಗೆ ಸರ್ಕಾರದ ನಿಲುವೇನು ಎಂಬುದನ್ನು ನೋಡಿದ ಬಳಿಕ ನಾನು ಸಂಸದ ವಿ. ಸೋಮಣ್ಣ ಕೇಂದ್ರ ಸರ್ಕಾರಕ್ಕೆ ಮನವಿಯನ್ನು ಮಾಡುತ್ತೇನೆ. ಆದರೆ ನಮ್ಮ ತುಮಕೂರಿಗೆ ಮೆಟ್ರೋ ಬೇಕೇ ಬೇಕು ಎಂದು ಸಚಿವ ವಿ. ಸೋಮಣ್ಣ ಕೂಡ ಹೇಳಿದ್ದಾರೆ. ತುಮಕೂರಿಗೆ ಮೊಟ್ರೋದ ಅಗತ್ಯ ತುಂಬಾನೇ ಇದೆ.ಉಪನಗರ ರೈಲು ಯೋಜನೆಯೂ ಪೂರ್ಣಗೊಳ್ಳಲಿ. ಈ ಎರಡೂ ಯೋಜನೆಗಳು ಅನುಷ್ಠಾನಗೊಂಡರೆ ಉತ್ತಮ ಹೇಳಿದ್ದಾರೆ.
ಸ್ವಾಗತ ಕಮಾನು ನಿರ್ಮಾಣಕ್ಕೆ ಮನವಿ
ತುಮಕೂರು ನಗರ ಪಕ್ಕದಲ್ಲಿ ರಾಷ್ಟ್ರೀಯ ಹೆದ್ದಾರಿ ಇರುವುದರಿಂದ ಪ್ರಯಾಣದ ವೇಳೆ ಯಾರಿಗೂ ಗೊತ್ತಾಗುವುದಿಲ್ಲ. ತುಮಕೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ವಾಗತ ಕಮಾನು ನಿರ್ಮಿಸಿದರೆ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ತುಮಕೂರು ಮಹಾನಗರ ಸ್ಮಾರ್ಟ್ ಸಿಟಿಯಿಂದ 5 ಕೋಟಿ ರೂ. ಹಣ ಒದಗಿಸಿಕೊಂಡಿದ್ದೇವೆ. ಇದಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಬೇಕಿದೆ. ಈ ಕುರಿತಂತೆ ಕೇಂದ್ರದ ಭೂಹೆದ್ದಾರಿ ಸಚಿವರಾದ ನಿತೀನ್ ಗಡ್ಕರಿ ಅವರಿಗೆ ವಿ.ಸೋಮಣ್ಣ ಅವರ ಮುಖಾಂತರ ಮನವಿಯನ್ನು ನೀಡಿ, ಅನುಮತಿಯನ್ನು ಕೊಡಿಸುವಂತೆ ಪ್ರಸ್ತಾಪಿಸಿದ್ದೇನೆ.
ತುಮಕೂರಿನಲ್ಲಿ ಸ್ವಾಗತ ಕಮಾನು ನಿರ್ಮಾಣದಿಂದ ತುಮಕೂರಿನ ಪ್ರವೇಶ ದ್ವಾರಆಕರ್ಷಕವಾಗಿ ಕಾಣುವುದರ ಜೊತೆಗೆ,ಜಿಲ್ಲೆಯ ಹೆಗ್ಗುರುತಾಗಿಯೂ ಹೊರಹೊಮ್ಮುತ್ತದೆ. ಕೇಂದ್ರದ ಕುಡಿಯುವ ನೀರಿನ ಯೋಜನೆ ಸೇರಿದಂತೆ ವಿವಿಧ ಅಭಿವೃದ್ಧಿ ವಿಚಾರಗಳ ಕುರಿತು ಚರ್ಚೆಯನ್ನು ಮಾಡಿದ್ದೇವೆ ಎಂದು ಹೇಳಿದ್ದಾರೆ.
ತುಮಕೂರಿಗೆ ಮೆಟ್ರೋ ವಿಸ್ತರಣೆ, ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ, ಎರಡನೇ ವಿಮಾನ ನಿಲ್ದಾಣ ನಿರ್ಮಾಣ,ಸ್ವಾಗತ ಕಮಾನು ನಿರ್ಮಾಣ, ಇಂಡಸ್ಟ್ರೀಯಲ್ ಹಬ್, ತುಮಕೂರು ಗ್ರೇಟರ್ ಬೆಂಗಳೂರಿಗೆ ಸೇರ್ಪಡೆ, ಅರ್ಬನ್ ರೈಲು, ಉಪನಗರ ರೈಲ್ವೆ, ಈ ಎಲ್ಲಾ ಯೋಜನೆಗಳು ತುಮಕೂರಿನಲ್ಲಿ ಅಭಿವೃದ್ದಿಯಾದರೆ ತುಮಕೂರಿನ ಜನರ ಅದೃಷ್ಟವೇ ಬದಲಾಗಬಹುದು.


Click it and Unblock the Notifications