ಈಗಾಗಲೇ ದೇಶದ ಹಲವಾರು ನಗರಗಳಲ್ಲಿ ಈ ಹೈಸ್ಪೀಡ್ ವಂದೇ ಭಾರತ್ ರೈಲುಗಳು (Vande Bharat Train) ಓಡಾಡುತ್ತಿದೆ. ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಈ ಹೈ-ಸ್ಪೀಡ್ ವಂದೇ ಭಾರತ್ ರೈಲುಗಳು ಭಾರತೀಯ ರೈಲ್ವೆಗೆ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ. ಆರಂಭದಲ್ಲಿ ಸಿಟ್ಟಿಂಗ್ ರೈಲುಗಳನ್ನು ಆರಂಭಿಸಿದ ವಂದೇ ಭಾರತ್, ನಂತರದಲ್ಲಿ ಸ್ಲೀಪರ್ ರೈಲನ್ನು ಲಾಂಚ್ ಮಾಡಿದೆ.

90 ವಂದೇ ಭಾರತ್ ರೈಲುಗಳ ಉತ್ಪಾದನೆಗೆ ಸಜ್ಜು
ಇದೀಗ ಭಾರತೀಯ ರೈಲ್ವೇ 'ವಂದೇ ಭಾರತ್ ಎಕ್ಸ್‌ಪ್ರೆಸ್' ರೈಲು ಸೇವೆಗಳನ್ನು ದೇಶದಲ್ಲಿ ಮತ್ತಷ್ಟು ವಿಸ್ತರಿಸಲು ಯೋಜನೆ ರೂಪಿಸಿದೆ. ಇದಕ್ಕಾಗಿ ಮಹತ್ವದ ಯೋಜನೆಯೊಂದನ್ನು ಕೈಗೊಂಡಿದೆ. ದಿನೇ ದಿನೇ ವಂದೇ ಭಾರತ್ ರೈಲಿಗೆ ಬೇಡಿಕೆ ಹೆಚ್ಚಾಗುತ್ತಿರುವುದರಿಂದ, ಇದೀಗ ಭಾರತೀಯ ರೈಲ್ವೇ ಇಲಾಖೆ ಹೆಚ್ಚುವರಿಯಾಗಿ 90 ಹೊಸ ವಂದೇ ಭಾರತ್ ರೈಲುಗಳ ಉತ್ಪಾದನೆ ಮಾಡಲು ಮುಂದಾಗಿ ಎಂದು ವರದಿಯಾಗಿದೆ. ಈ ಮೂಲಕ ಹೆಚ್ಚು ನಗರಗಳಿಗೆ ಈ ರೈಲುಗಳನ್ನು ಸಂಪರ್ಕಿಸಲು ಸಿದ್ಧತೆ ನಡೆಸಲಾಗಿದೆ.
ಸದ್ಯ, 83 ವಂದೇ ಭಾರತ್ ರೈಲುಗಳು ಭಾರತದ ವಿವಿಧ ಮಾರ್ಗಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ವರದಿ ಪ್ರಕಾರ, ಭಾರತೀಯ ರೈಲ್ವೇಯು ವಂದೇ ಭಾರತ್ ಸೇವೆಯನ್ನು ಈಗಾಗಲೇ ದೇಶದ 24 ರಾಜ್ಯಗಳ 100 ಕ್ಕೂ ಹೆಚ್ಚು ನಗರಗಳಿಗೆ ವಿಸ್ತರಿಸಿದೆ. ಉತ್ತರ ಪ್ರದೇಶ, ದೆಹಲಿ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಛತ್ತೀಸ್‌ಗಢ, ಒಡಿಶಾ, ಕರ್ನಾಟಕ, ತಮಿಳುನಾಡು, ಕೇರಳ, ಹರಿಯಾಣ, ಉತ್ತರಾಖಂಡ, ಅಸ್ಸಾಂ, ಪಂಜಾಬ್, ಜಮ್ಮು-ಕಾಶ್ಮೀರ, ಗೋವಾ, ಹಿಮಾಚಲ ಪ್ರದೇಶ ಮತ್ತು ಅಸ್ಸಾಂ ರಾಜ್ಯಗಳು ಈ ಪಟ್ಟಿಯಲ್ಲಿವೆ.
ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ದಿನಹೋದಂತೆ ಜನಪ್ರಿಯತೆಯು ಹೆಚ್ಚಾಗುತ್ತಿರುವುದೇ, ಈ ವಿಸ್ತರಣೆಗೆ ಪ್ರಮುಖ ಕಾರಣವಾಗಿದೆ. ಅನೇಕ ಮಾರ್ಗಗಳಲ್ಲಿ, ಈ ರೈಲುಗಳು 100% ಕ್ಕಿಂತ ಜನರಿಗೆ ಬೇಕಾದ ದರದಲ್ಲಿ ಚಲಿಸುತ್ತಿವೆ. ಆದ್ದರಿಂದ ಹೈಸ್ಪೀಡ್ ವಂದೇ ಭಾರತ್ ರೈಲಿನ ಸೌಲಭ್ಯ ಇತರ ನಗರಗಳಿಗೂ ಸಿಗಬೇಕು ಎಂಬ ದೃಷ್ಟಿಯಿಂದ ಇದೀಗ ಭಾರತೀಯ ರೈಲ್ವೇ ಇಲಾಖೆ ಈ ನಿರ್ಧಾರಕ್ಕೆ ಮುಂದಾಗಿದೆ.
ಪ್ರಸ್ತುತ, ಕಾರ್ಯನಿರ್ವಹಿಸುತ್ತಿರುವ ವಂದೇ ಭಾರತ್ ರೈಲುಗಳು ಹೆಚ್ಚಾಗಿ ರಾಜ್ಯ ರಾಜಧಾನಿಗಳು ಮತ್ತು ಪ್ರಮುಖ ನಗರಗಳನ್ನು ಮಾತ್ರ ಸಂಪರ್ಕಿಸುತ್ತಿದೆ. ಆದರೆ ಮುಂಬರುವ 90 ವಂದೇ ಭಾರತ್ ರೈಲುಗಳ ಉತ್ಪಾದನೆಗೆ ಈಗಾಗಲೇ ಆರ್ಡರ್ ನೀಡಲಾಗಿದ್ದು, ಇವುಗಳನ್ನು ವಿವಿಧ ಕೋಚ್ ಕಾರ್ಖಾನೆಗಳಲ್ಲಿ ಉತ್ಪಾದಿಸಲಾಗುತ್ತಿದೆ. ಕಳೆದ 7 ವರ್ಷಗಳಲ್ಲಿ ನಿರ್ಮಿಸಲಾದ ಒಟ್ಟು ರೈಲುಗಳ ಸಂಖ್ಯೆಗಿಂತಲೂ ಹೆಚ್ಚಿನ ರೈಲುಗಳನ್ನು ಈ ಬಾರಿ ಉತ್ಪಾದಿಸಲಾಗುತ್ತಿದೆ.
ಈ ರೈಲುಗಳು ತಯಾರಾದ ನಂತರ, ಅವುಗಳನ್ನು ಸಣ್ಣ ನಗರಗಳು, ಪ್ರವಾಸಿ ತಾಣಗಳು ಮತ್ತು ಧಾರ್ಮಿಕ ಸ್ಥಳಗಳನ್ನೂ ವಂದೇ ಭಾರತ್ ರೈಲುಗಳು ಸಂಪರ್ಕಿಸಲಿವೆ. ಆ ನಂತರ ಹೆಚ್ಚಿನ ಸಂಖ್ಯೆಯಲ್ಲಿ ಜನರು ಈ ಹೈಸ್ಪೀಡ್ ರೈಲಿನ ಅನುಭವ ಪಡೆಯಬಹುದು. ಈಗಾಗಲೇ ಭಾರತೀಯ ರೈಲ್ವೇ ಇಲಾಖೆ ವಂದೇ ಭಾರತ್ ರೈಲಿನಿಂದ ಹಲವು ಕಡೆ ಗುರುತಿಸಿಕೊಂಡಿದೆ.


Click it and Unblock the Notifications