2022ರ ಕೊನೆಯಲ್ಲಿ ಆರಂಭವಾದ ಉದ್ಯೋಗ ಕಡಿತವನ್ನು ಈಗಲೂ ಹಲವಾರು ಸಂಸ್ಥೆಗಳು ಮುಂದುವರಿಸುತ್ತಾ ಬಂದಿದೆ. ಪ್ರಮುಖವಾಗಿ ಗೂಗಲ್ ಇಂಡಿಯಾ ಸುಮಾರು 453 ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂದು ವರದಿಯಾಗಿದೆ. ಈ ಬಗ್ಗೆ ಗೂಗಲ್ ಇಂಡಿಯಾ ಸಿಇಒ ಸುಂದರ್ ಪಿಚೈ ಉದ್ಯೋಗ ಕಳೆದುಕೊಂಡವರಿಗೆ ಇಮೇಲ್ ಮೂಲಕ ಮಾಹಿತಿ ನೀಡಿದ್ದಾರೆ. ಗುರುವಾರ ತಡರಾತ್ರಿ ಈ ಮಾಹಿತಿಯನ್ನು ನೀಡಲಾಗಿದೆ.
ಮಾಹಿತಿ ಪ್ರಕಾರ ಈ ಇಮೇಲ್ ಅನ್ನು ಗೂಗಲ್ ಇಂಡಿಯಾದ ಮುಖ್ಯಸ್ಥ, ಉಪಾಧ್ಯಕ್ಷ ಸಂಜಯ್ ಗುಪ್ತಾ ಖಾತೆಯಿಂದ ಕಳುಹಿಸಲಾಗಿದೆ ಎಂದು ಬಿಜಿನೆಸ್‌ಲೈನ್ ವರದಿ ಮಾಡಿದೆ. ಆದರೆ ಈ ಇಮೇಲ್‌ನಲ್ಲಿ ಗೂಗಲ್ ಇಂಡಿಯಾ ಸಿಇಒ ಸುಂದರ್ ಪಿಚೈ ಹೇಳಿಕೆಗಳನ್ನು ಕೂಡಾ ಸೇರ್ಪಡೆ ಮಾಡಲಾಗಿದೆ.
ಕಳೆದ ತಿಂಗಳು ಪೋಷಕ ಸಂಸ್ಥೆ ಆಲ್ಫಾಬೆಟ್ ಇಂಕ್ ಗೂಗಲ್‌ನಲ್ಲಿ ಉದ್ಯೋಗ ಕಡಿತ ಮಾಡುವ ಬಗ್ಗೆ ಘೋಷಣೆ ಮಾಡಿದೆ. ಜಾಗತಿಕವಾಗಿ ಸುಮಾರು ಶೇಕಡ 6ರಷ್ಟು ಅಂದರೆ 12,000ರಷ್ಟು ಉದ್ಯೋಗ ಕಡಿತವನ್ನು ಘೋಷಿಸಿತ್ತು. ಆದರೆ ಈಗ ಗೂಗಲ್ ಇಂಡಿಯಾ ಘೋಷಿಸಿದ 453 ಉದ್ಯೋಗ ಕಡಿತವು ಈ ಹಿಂದೆ ಘೋಷಿಸಿದ 12,000 ಉದ್ಯೋಗ ಕಡಿತದಲ್ಲೇ ಸೇರ್ಪಡೆಯಾಗುತ್ತದೆಯೇ, ಬೇರೆಯೇ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಈ ಇಮೇಲ್‌ನಲ್ಲಿ ಸಿಇಒ ಸುಂದರ್ ಪಿಚೈ ಹೇಳಿಕೆಗಳು ಕೂಡಾ ಇದೆ. ಸಂಸ್ಥೆಯಲ್ಲಿ ಮಾಡಲಾಗುವ ಉದ್ಯೋಗ ಕಡಿತದ ಸಂಪೂರ್ಣ ಜವಾಬ್ದಾರಿಯನ್ನು ತಾನು ಹೊರುವುದಾಗಿ ಸುಂದರ್ ಪಿಚೈ ಹೇಳಿದ್ದಾರೆ. ಈ ಹಿಂದೆ ಜನವರಿಯಲ್ಲಿಯೂ ಸುಂದರ್ ಪಿಚೈ ಮಾಹಿತಿ ನೀಡಿದ್ದರು. ಯುಎಸ್ ಹೊರತುಪಡಿಸಿ ಬೇರೆ ಕಡೆಯಲ್ಲಿ ಉದ್ಯೋಗ ಕಳೆದುಕೊಂಡವರಿಗೆ ಸಹಾಯ ಲಭ್ಯವಾಗಲಿದೆ ಎಂದು ಹೇಳಿದ್ದರು. ಆದರೆ ಜಾಗತಿಕವಾಗಿ ಒಟ್ಟಾಗಿ ಎಷ್ಟು ಉದ್ಯೋಗಿಗಳನ್ನು ವಜಾಗೊಳಿಸಲಾಗುತ್ತದೆ, ಈ ಉದ್ಯೋಗ ಕಡಿತ ಮುಂದುವರಿಯುತ್ತದೆಯೇ ಎಂಬ ಬಗ್ಗೆ ಮಾಹಿತಿಯಿಲ್ಲ.
ಈ ಹಿಂದೆ ನಡೆದ ಉದ್ಯೋಗ ಕಡಿತಗಳು
ಗೂಗಲ್ ಮಾತ್ರವಲ್ಲ ಹಲವಾರು ಸಂಸ್ಥೆಗಳು ಉದ್ಯೋಗ ಕಡಿತವನ್ನು ಮಾಡಿದೆ. ಅಮೆಜಾನ್ ಸುಮಾರು 18,000 ಮಂದಿಯನ್ನು ಉದ್ಯೋಗದಿಂದ ತೆಗೆದುಹಾಕಿದೆ. ಅದಕ್ಕೂ ಮುನ್ನ 10 ಸಾವಿರ ಮಂದಿಯನ್ನು ವಜಾಗೊಳಿಸುವ ಘೋಷಣೆ ಮಾಡಿತ್ತು. ಮೆಟಾ ಸಂಸ್ಥೆಯು 13,000 ಮಂದಿಯನ್ನು ವಜಾಗೊಳಿಸಿದೆ. ಮೈಕ್ರೋಸಾಫ್ಟ್‌ನಲ್ಲಿ ಶೇಕಡ 5ರಷ್ಟು ಅಥವಾ 10,000, ಸೇಲ್ಸ್‌ಫೋರ್ಸ್‌ನಲ್ಲಿ ಶೇಕಡ 10ರಷ್ಟು ಅಥವಾ 8,000, ಡೆಲ್‌ನಲ್ಲಿ ಶೇಕಡ 5ರಷ್ಟು ಅಥವಾ 6,650, ಐಬಿಎಂಯಲ್ಲಿ ಶೇಕಡ 2ರಷ್ಟು ಅಥವಾ 3,900, ಎಸ್‌ಎಪಿನಲ್ಲಿ ಶೇಕಡ 3ರಷ್ಟು ಅಥವಾ 3,000, ಜೂಮ್‌ನಲ್ಲಿ ಶೇಕಡ 15ರಷ್ಟು ಅಥವಾ 1,300, ಕಾಯಿನ್‌ಬೇಸ್‌ನಲ್ಲಿ ಶೇಕಡ 20ರಷ್ಟು ಅಥವಾ 950, ಯಾಹೂವಿನಲ್ಲಿ ಶೇಕಡ 20ರಷ್ಟು ಅಥವಾ 1,600, ಗಿಟ್‌ಹಬ್‌ನಲ್ಲಿ ಶೇಕಡ 10ರಷ್ಟು ಅಥವಾ 300 ಉದ್ಯೋಗ ಕಡಿತ ಮಾಡಲಾಗಿದೆ.


Click it and Unblock the Notifications