ಪ್ಯಾಕ್ಟ್ ಚೆಕ್: Google Pay ಯನ್ನು ಆರ್‌ಬಿಐ ನಿಷೇಧಿಸಿದ್ದು ನಿಜಾನಾ?

ಜನಪ್ರಿಯ ಡಿಜಿಟಲ್ ಪೇಮೆಂಟ್ ಅಪ್ಲಿಕೇಶನ್ Google Pay ಇಂದು ಟ್ವಿಟ್ಟರ್‌ನಲ್ಲಿ GPayBanned By RBI ಎಂದು ಟ್ರೆಂಡ್ ಆಗಿದೆ. ಇದಕ್ಕೆ ಕಾರಣ Google Pay ಅಪ್ಲಿಕೇಶನ್‌ನ್ನು ಆರ್‌ಬಿಐ ನಿಷೇಧಿಸಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿಯಾಗಿ ಹರಿದಾಡಿದ್ದರಿಂದ.

ಹಣಕಾಸು ತಜ್ಞ ಅಭಿಜಿತ್ ಮಿಶ್ರಾ ಎನ್ನುವವರು ದೆಹಲಿ ಹೈಕೋರ್ಟ್‌ನಲ್ಲಿ Google Pay ಆರ್‌ಬಿಐ ಅನುಮತಿ ಪಡೆಯದೆಯೇ ವಹಿವಾಟು ನಡೆಸಿ ಅನಧಿಕೃತವಾಗಿ ಲಾಭ ಮಾಡಿಕೊಳ್ಳುತ್ತಿದೆ. ಇದು ಕಾನೂನು ಬಾಹಿರ. ಭಾರತದಲ್ಲಿ ಈ Google Pay ಯನ್ನು ನಿಷೇಧಿಸಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ಸಲ್ಲಿಕೆಯ ಕುರಿತು ಪಿಟಿಐ ಸುದ್ದಿ ಮಾಡಿತ್ತು.

ಆದರೆ, ಸಾಮಾಜಿಕ ಜಾಲತಾಣದಲ್ಲಿ ಹಲವಾರು ನೆಟ್ಟಿಗರು Google Pay ಯನ್ನು ಆರ್‌ಬಿಐ ನಿಷೇಧ ಮಾಡಿದೆ ಎಂದು ಸಂದೇಶಗಳನ್ನು ಹರಿ ಬಿಟ್ಟು, ಅದನ್ನು ಮೂಬೈಲ್‌ನಿಂದ ತೆಗೆದು ಹಾಕುವ ಬಗ್ಗೆ ಚರ್ಚೆಯಾಗಿತ್ತು. ಆದರೆ, ಇಂದು ಎನ್‌ಪಿಸಿಐ ಮತ್ತು ಗೂಗಲ್ ಇಂಡಿಯಾ ಕಂಪನಿ, Google Pay ಯನ್ನು ಆರ್‌ಬಿಐ ನಿಷೇಧ ಮಾಡಿಲ್ಲ. ಕಾನೂನಿನ ಪ್ರಕಾರ ವ್ಯವಹಾರ ನಡೆಸುತ್ತಿದೆ ಎಂದು ಸ್ಪಷ್ಟನೆ ನೀಡಿದೆ.

ಭಾರತದಲ್ಲಿ  Google Pay ನಿಷೇಧಿಸಲಾಗಿಲ್ಲ

ಭಾರತದಲ್ಲಿ Google Pay ನಿಷೇಧಿಸಲಾಗಿಲ್ಲ

ಭಾರತದಲ್ಲಿ Google Pay ನಿಷೇಧಿಸಲಾಗಿಲ್ಲ ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ (ಎನ್‌ಪಿಸಿಐ) ಸ್ಪಷ್ಟಪಡಿಸಿದೆ. ಎನ್‌ಪಿಸಿಐ ಭಾರತದಲ್ಲಿ ಡಿಜಿಟಲ್ ಪಾವತಿಗಳನ್ನು ನಿರ್ವಹಿಸುವ ಒಂದು ಸಂಸ್ಥೆಯಾಗಿದ್ದು, Unified Payments Interface (UPI) ಅನ್ನು ಅಭಿವೃದ್ಧಿಪಡಿಸಿದೆ. ಇದನ್ನು ಗೂಗಲ್ ಪೇ, ಫೋನ್ ಪೆ, ಮತ್ತು ಪೇಟಿಎಂನಂತಹ ಪ್ಲಾಟ್‌ಫಾರ್ಮ್‌ಗಳ ಪಾವತಿಗಳಿಗಾಗಿ ಬಳಸಲಾಗುತ್ತದೆ.

ಪಿಎಸ್‌ಒಗೆ ಅಪ್ಲಿಕೇಶನ್ ಪೂರೈಕೆದಾರ

ಪಿಎಸ್‌ಒಗೆ ಅಪ್ಲಿಕೇಶನ್ ಪೂರೈಕೆದಾರ

ಆರ್‌ಬಿಐ Google Payಯನ್ನು ಪಾವತಿ ವ್ಯವಸ್ಥೆ ಆಪರೇಟರ್ (ಪಿಎಸ್‌ಒ) ಎಂದು ಅಧಿಕೃತಗೊಳಿಸಿದೆ ಎಂದು ಎನ್‌ಪಿಸಿಐ ತನ್ನ ಸ್ಪಷ್ಟೀಕರಣದಲ್ಲಿ ತಿಳಿಸಿದೆ. Google Pay ನಂತಹ ಕಂಪನಿಗಳು ಪಿಎಸ್‌ಒಗೆ ಅಪ್ಲಿಕೇಶನ್ ಪೂರೈಕೆದಾರರಾಗಿದ್ದು ವಹಿವಾಟುಗಳನ್ನು ಕಾನೂನಿನಡಿಯಲ್ಲಿ ಸಂಪೂರ್ಣವಾಗಿ ರಕ್ಷಿಸಲಾಗಿದೆ ಎನ್ನಲಾಗಿದೆ.

ಸಂಪೂರ್ಣವಾಗಿ ಕಾನೂನಿನೊಳಗೆ ಕಾರ್ಯನಿರ್ವಹಿಸುತ್ತದೆ

ಸಂಪೂರ್ಣವಾಗಿ ಕಾನೂನಿನೊಳಗೆ ಕಾರ್ಯನಿರ್ವಹಿಸುತ್ತದೆ

Google Pay ಸಂಪೂರ್ಣವಾಗಿ ಕಾನೂನಿನೊಳಗೆ ಕಾರ್ಯನಿರ್ವಹಿಸುತ್ತದೆ. ಯುಪಿಐ ಮೂಲಕ ಪಾವತಿಗಳನ್ನು ನೀಡಲು ನಾವು ಪಾಲುದಾರ ಬ್ಯಾಂಕುಗಳಿಗೆ ತಂತ್ರಜ್ಞಾನ ಸೇವಾ ಪೂರೈಕೆದಾರರಾಗಿ ಕೆಲಸ ಮಾಡುತ್ತೇವೆ. ದೇಶದ ಯುಪಿಐ ಅಪ್ಲಿಕೇಶನ್‌ಗಳನ್ನು ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳು ಎಂದು ವರ್ಗೀಕರಿಸಲಾಗಿದೆ ಮತ್ತು ಅವುಗಳು ಪಾವತಿ ವ್ಯವಸ್ಥೆಗಳ ನಿರ್ವಾಹಕರು ಆಗಿರಬೇಕಾಗಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಪ್ಪಾಗಿ ಅರ್ಥೈಸಲಾಗಿದೆ ಎಂದು ಗೂಗಲ್ ಪೇ ಇಂಡಿಯಾ ಸ್ಪಷ್ಟೀಕರಣ ನೀಡಿದೆ.

ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್

ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್

Google Pay ಹಾಗೂ ಎನ್‌ಪಿಸಿಐ ಗುರುವಾರ ಈ ಸ್ಪಷ್ಟೀಕರಣವನ್ನು ನೀಡಿದ್ದರೂ, ಆರ್‌ಬಿಐ ಬಗ್ಗೆ ಹ್ಯಾಶ್‌ಟ್ಯಾಗ್ ಅಡಿ ಬ್ಯಾನ್ ವಿಷಯ ಪ್ರಸಾರವಾಗುತ್ತಲೇ ಇದೆ ಮತ್ತು ಟ್ವಿಟರ್‌ನಲ್ಲಿ ಸಕತ್ ಟ್ರೆಂಡಿಂಗ್ ವಿಷಯವಾಗಿದೆ. ಮೆಮ್‌ಗಳನ್ನು ಹಾಕಿ ಗೂಗಲ್ ಪೇ ಬಗ್ಗೆ ಟ್ರೋಲ್ ಮಾಡುತ್ತಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+