ವಿಶ್ವದಲ್ಲಿ ಅತಿ ಹೆಚ್ಚು ವೇತನ ಪಡೆಯುವ ಸಿಇಒಗಳಲ್ಲಿ ಭಾರತ ಮೂಲದ ಸುಂದರ್ ಪಿಚೈ ಒಬ್ಬರು. 2019ರಲ್ಲಿ ಅವರಿಗೆ 28 ಕೋಟಿ ಡಾಲರ್ ಗೂ ಹೆಚ್ಚು (ಭಾರತೀಯ ರುಪಾಯಿಗಳಲ್ಲಿ 2128 ಕೋಟಿಗೂ ಹೆಚ್ಚು) ವೇತನವನ್ನು ಪಡೆದಿದ್ದಾರೆ ಎಂದು ಆಲ್ಫಾಬೆಟ್ ಕಂಪೆನಿ ಮಾಹಿತಿ ನೀಡಿದೆ. ಇತರ ದೊಡ್ಡ ಕಂಪೆನಿಗಳ ಸಿಇಒಗಳು 20 ಕೋಟಿ ಅಮೆರಿಕನ್ ಡಾಲರ್ ಗಿಂತ ಕಡಿಮೆ ವೇತನವನ್ನು ಇತ್ತೀಚಿನ ವರ್ಷಗಳಲ್ಲಿ ಪಡೆದಿದ್ದಾರೆ.
ಈ ಬಗ್ಗೆ ಈಕ್ವಿಲಾರ್ ಮಾಹಿತಿಯನ್ನು ಉದಾಹರಿಸಿ ಐಎಎನ್ ಎಸ್ ವರದಿ ಮಾಡಿದೆ. ಸುಂದರ್ ಪಿಚೈಗೆ ಬಂದಿರುವ ವೇತನದ ಬಹುಪಾಲು ಷೇರುಗಳ ರೂಪದಲ್ಲಿ ಬಂದಿದೆ. ಸುಂದರ್ ಪಿಚೈ ಅವರ ಕಳೆದ ವರ್ಷದ ವೇತನ ಹೆಚ್ಚಳದ ಹಿಂದಿನ ಕಾರಣ ಕೂಡ ಆಲ್ಫಾಬೆಟ್ ಸಿಇಒ ಆದ ಮೇಲೆ ದೊರೆತಿರುವ ಷೇರುಗಳೇ. ಆಲ್ಫಾಬೆಟ್ ಸಿಇಒ ಆಗುವಾಗ ಪಿಚೈ ವೇತನ 20 ಕೋಟಿ ಡಾಲರ್ ಇತ್ತು. ಅದರಲ್ಲಿ ಬಹುಪಾಲು ಷೇರಿನ ಮೂಲಕವೇ ನೀಡಲಾಗಿತ್ತು.
ವಿಶ್ವದಾದ್ಯಂತ ಕೊರೊನಾ ವ್ಯಾಪಿಸಿರುವ ಹಿನ್ನೆಲೆಯಲ್ಲಿ ಮೈಕ್ರೋಸಾಫ್ಟ್ ಮಾರ್ಕೆಟಿಂಗ್ ವೆಚ್ಚವನ್ನು ಕಡಿತ ಮಾಡಲಾಗಿದೆ ಹಾಗೂ ಈ ವರ್ಷ ನೇಮಕಾತಿಯನ್ನು ಕೂಡ ಕಡಿಮೆ ಮಾಡಲಾಗಿದೆ. ಸುಂದರ್ ಪಿಚೈಗೆ ಈಚೆಗೆ ಬಡ್ತಿ ದೊರೆತಿತ್ತು. ಆ ನಂತರ ಮೂಲವೇತನವು ಅದುವರೆಗೆ ಇದ್ದ 6.50 ಲಕ್ಷ ಡಾಲರ್ ನಿಂದ 20 ಲಕ್ಷ ಡಾಲರ್ ಗೆ ಹೆಚ್ಚಳವಾಗಿತ್ತು.

ಸುಂದರ್ ಪಿಚೈ ವೇತನ ಉಳಿದ ಸಿಇಒಗಳಿಗಿಂತ ಬಹಳ ಹೆಚ್ಚಿದೆ. ಅದಕ್ಕೆ ಕಾರಣ ಅವರಿಗೆ ವೇತನ ರೂಪದಲ್ಲಿ ದೂರೆಯುವ ಷೇರುಗಳು. ಆದರೆ 2018ರಲ್ಲಿ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಗೆ 230 ಕೋಟಿ ಡಾಲರ್ ಗಿಂತ ಹೆಚ್ಚಿನ ಮೌಲ್ಯದ ಷೇರು ದೊರೆತಿತ್ತು. ಅಂದ ಹಾಗೆ ಗೂಗಲ್ ಮುಖ್ಯಸ್ಥರೂ ಆಗಿರುವ ಸುಂದರ್ ಪಿಚೈ ಈಚೆಗೆ ಕೊರೊನಾ ವಿರುದ್ಧ ಹೋರಾಟಕ್ಕೆ ಬೆಂಗಳೂರು ಮೂಲದ ಸಂಸ್ಥೆ GiveIndia ಗೆ 5 ಕೋಟಿ ರುಪಾಯಿ ದೇಣಿಗೆ ನೀಡಿದ್ದರು.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications