ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಲೈಫ್ ಇನ್ಷೂರೆನ್ಸ್ ಆಫ್ ಇಂಡಿಯಾವು ಯೆಸ್ ಬ್ಯಾಂಕ್ ನ ಶೇಕಡಾ 49ರಷ್ಟು ಷೇರುಗಳನ್ನು ಖರೀದಿಸಬಹುದು. ಪ್ರಿಫರೆನ್ಷಿಯಲ್ ಷೇರುಗಳನ್ನು ತಲಾ 2 ರುಪಾಯಿಗಳಂತೆ 490 ಕೋಟಿ ರುಪಾಯಿಗೆ ಖರೀದಿ ಮಾಡಬಹುದು ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.
ಓಪನ್ ಆಫರ್ ನಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಸೆಬಿ ವಿನಾಯಿತಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಇತರ ಸರ್ಕಾರಿ ಸಂಸ್ಥೆಗಳಿಗೆ ಯೆಸ್ ಬ್ಯಾಂಕ್ ಖರೀದಿ ಮಾಡುವುದಕ್ಕೆ ಕೇಂದ್ರದಿಂದ ಅನುಮತಿ ಸಿಕ್ಕಿದೆ. ಸದ್ಯಕ್ಕೆ ಯೆಸ್ ಬ್ಯಾಂಕ್ ಬ್ಯಾಡ್ ಲೋನ್ ಗಳ ಸುಳಿಯಲ್ಲಿ ಸಿಲುಕಿದ್ದು, ಬಂಡವಾಳ ಸಂಗ್ರಹ ಹೊಸದಾಗಿ ಮಾಡುವುದಕ್ಕೆ ಅನಿಶ್ಚಿತತೆ ಎದುರಿಸುತ್ತಿದೆ.
ಈಗಿನ ಸಮಸ್ಯೆಯ ಕಾರಣಕ್ಕೆ 2019 ಡಿಸೆಂಬರ್ ತ್ರೈ ಮಾಸಿಕದ ಫಲಿತಾಂಶವನ್ನು ಈ ತನಕ ಯೆಸ್ ಬ್ಯಾಂಕ್ ಘೋಷಣೆ ಮಾಡಿಲ್ಲ. ಇನ್ನು ಈಗಿನ ಬೆಳವಣಿಗೆಗಳ ಬಗ್ಗೆ ಸೆಬಿ ನಿಯಮಾವಳಿ ಅನ್ವಯವೇ ಪ್ರತಿಕ್ರಿಯೆ ನೀಡುವುದಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಯೆಸ್ ಬ್ಯಾಂಕ್ ತಿಳಿಸಿವೆ.

ಯೆಸ್ ಬ್ಯಾಂಕ್ ನ ಪ್ರವರ್ತಕರಾದ ಮಧು ಕಪೂರ್, ಯೆಸ್ ಕ್ಯಾಪಿಟಲ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ ಅಂಡ್ ಮ್ಯಾಗ್ಸ್ ಫಿನ್ವೆಸ್ಟ್ ಬಳಿ 8.33 ಪರ್ಸೆಂಟ್ ಷೇರಿದೆ ಎಂದು ಸ್ಟಾಕ್ ಎಕ್ಸ್ ಚೇಂಜ್ ನ ಮಾಹಿಗಳು ತಿಳಿಸುತ್ತಿವೆ. ಬ್ಯಾಂಕ್ ನ ಸಹ ಸ್ಥಾಪಕ ರಾಣಾ ಕಪೂರ್ ಅವರು ಬ್ಯಾಂಕ್ ನಲ್ಲಿನ ತಮ್ಮ ಷೇರಿನ ಪಾಲನ್ನು ಸಂಪೂರ್ಣವಾಗಿ ಮಾರಾಟ ಮಾಡಿದ್ದಾರೆ.
ವಿದೇಶಿ ಹೂಡಿಕೆದಾರರು 15.17 ಪರ್ಸೆಂಟ್, ಎಲ್ ಐಸಿ 8.06 ಮತ್ತು ಮ್ಯೂಚುವಲ್ ಫಂಡ್ ಗಳು 5.09 ಪರ್ಸೆಂಟ್ ನಷ್ಟು ಷೇರು ಹೊಂದಿವೆ.
ಠೇವಣಿ ಮೊತ್ತವನ್ನು ಐವತ್ತು ಸಾವಿರಕ್ಕಿಂತ ಹೆಚ್ಚಿಗೆ ವಿಥ್ ಡ್ರಾ ಮಾಡಲು ಅವಕಾಶ ನೀಡದಂತೆ ಯೆಸ್ ಬ್ಯಾಂಕ್ ಗೆ ಕೇಂದ್ರ ಸರ್ಕಾರವು ಸೂಚನೆ ನೀಡಿದೆ.


Click it and Unblock the Notifications