ಪ್ರಸ್ತುತ ರಸಗೊಬ್ಬರಗಳಿಗೆ ಜಾಗತಿಕ ಬೆಲೆಯು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಈ ನಡುವೆ ರೈತರಿಗೆ ಕೊಂಚ ಕಡಿಮೆ ದರದಲ್ಲಿ ರಸಗೊಬ್ಬರಗಳು ಲಭ್ಯವಾಗುವಂತೆ ಮಾಡಲು ಕೇಂದ್ರ ಸರ್ಕಾರವು ರಾಬಿ ಸೀಸನ್‌ನಲ್ಲಿ ಪಿ&ಕೆ ರಸಗೊಬ್ಬರಗಳ ಮೇಲೆ (ಫಾಸ್ಫಾಟಿಕ್ ಮತ್ತು ಪೊಟ್ಯಾಸಿಕ್ ರಸಗೊಬ್ಬರ) 22,303 ಕೋಟಿ ರೂಪಾಯಿಗಳ ಸಬ್ಸಿಡಿಯನ್ನು ಅನುಮೋದಿಸಿದೆ.
ಬುಧವಾರ (ಅಕ್ಟೋಬರ್ 25) ಸಂಪುಟ ಸಭೆಯ ನಂತರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರು ಈ ನಿರ್ಧಾರವನ್ನು ತಿಳಿಸಿದ್ದಾರೆ. ಕೇಂದ್ರ ಸಚಿವ ಸಂಪುಟವು ರಾಬಿ ಬೆಳೆ ಸೀಸನ್‌ಗೆ (ಅಕ್ಟೋಬರ್ 1, 2023 - ಮಾರ್ಚ್ 31, 2024) ಸಾರಜನಕ, ರಂಜಕ, ಪೊಟ್ಯಾಶ್ ಮತ್ತು ಗಂಧಕದಂತಹ ವಿವಿಧ ರಸಗೊಬ್ಬರಗಳಿಗೆ ರಸಗೊಬ್ಬರ ಆಧಾರಿತ ಸಬ್ಸಿಡಿ ದರಗಳನ್ನು (ಎನ್‌ಬಿಎಸ್) ಅನುಮೋದಿಸಿದೆ.

ಆದರೆ ಡಿ-ಅಮೋನಿಯಂ ಫಾಸ್ಫೇಟ್ ಪ್ರತಿ ಚೀಲಕ್ಕೆ ಈ ಹಿಂದಿನ ದರ 1,350 ರೂಪಾಯಿಯಂತೆಯೇ ಮಾರಾಟವಾಗುವುದು ಮುಂದುವರಿಯುತ್ತದೆ. ಆದರೆ ಮ್ಯೂರಿಯೇಟ್ ಆಫ್ ಪೊಟ್ಯಾಶ್ (ಎಂಒಪಿ) ದರವು ಕಡಿಮೆಯಾಗುತ್ತದೆ ಎಂದು ಸಚಿವ ಅನುರಾಗ್ ಠಾಕೂರ್ ತಿಳಿಸಿದರು.
ಏನಿದು ರಾಬಿ ಬೆಳೆ?
ರಾಬಿ ಬೆಳೆಯನ್ನು ಹಿಂಗಾರು ಬೆಳೆ ಎಂದು ಕೂಡಾ ಕರೆಯಲಾಗುತ್ತದೆ. ಇದು ಈಶಾನ್ಯ ಮಾನ್ಸೂನ್ ಅವಧಿಯಲ್ಲಿ ಮಾಡುವ ಬೇಸಾಯವಾಗಿದೆ. ಸಾಮಾನ್ಯವಾಗಿ ಡಿಸೆಂಬರ್‌ನಿಂದ ಮಾರ್ಚ್ ಅವಧಿಯಲ್ಲಿ ಮಾಡುವ ಕೃಷಿಗಳನ್ನು ರಾಬಿ ಬೆಳೆ ಎನ್ನಲಾಗುತ್ತದೆ. ನವೆಂಬರ್ ಮಧ್ಯದಲ್ಲಿ ಬಿತ್ತನೆ ಕಾರ್ಯ ಮಾಡಿ, ಏಪ್ರಿಲ್/ಮೇ ತಿಂಗಳಲ್ಲಿ ಕೊಯ್ಲು ನಡೆಯುತ್ತದೆ.
Bangalore Rose Onion: ಬೆಂಗಳೂರು ಗುಲಾಬಿ ಈರುಳ್ಳಿಗೆ ರಫ್ತು ಸುಂಕದಿಂದ ವಿನಾಯಿತಿ, ಇಲ್ಲಿದೆ ವಿವರ
ಸಾಸಿವೆ, ಬಜ್ರಾ, ಓಟ್ಸ್, ಗೋಧಿ, ಬಾರ್ಲಿ, ರೇಪ್ಸೀಡ್ ಮೊದಲಾದ ಧಾನ್ಯಗಳನ್ನು, ಸೀಬೆಹಣ್ಣು, ನಿಂಬೆ, ಮಲ್ಬೆರಿ, ಬಾಳೆಹಣ್ಣು, ಬಾದಾಮಿ, ದ್ರಾಕ್ಷಿ, ಕಿತ್ತಳೆ, ಮ್ಯಾಂಡರಿನ್ ಕಿತ್ತಳೆ, ಮಾವಿನ ಹಣ್ಣುಗಳು ರಾಬಿ ಬೆಳೆಗಳಾಗಿದೆ. ಇನ್ನು ಪಾರಿವಾಳ ಬಟಾಣಿ, ಕ್ಯಾರೆಟ್, ಹೂಕೋಸು, ಕಡಲೆ, ಉದ್ದು, ಮೆಂತ್ಯ, ಬೆಳ್ಳುಳ್ಳಿ, ಮೂಲಂಗಿ, ಆಲೂಗಡ್ಡೆ, ನವಿಲುಕೋಸು, ಟೊಮೆಟೊ, ಪಾಲಾಕ್ ಸೊಪ್ಪು, ಗೆಣಸು, ಬಟಾಣಿ, ಈರುಳ್ಳಿ, ಮಸೂರ, ತೊಗರಿ, ಬೆಂಡೆಕಾಯಿ ಕೂಡಾ ರಾಬಿ ಬೆಳೆಗಳಾಗಿದೆ.
ಭಾರತದಲ್ಲಿ ಕೃಷಿ ಚಟುವಟಿಕೆಗೆ ಸಂಬಂಧಿಸಿ ಮೂರು ಅವಧಿಗಳು ಇದೆ. ಅದರಲ್ಲಿ ಮೊದಲ ಕೃಷಿ ಮುಂಗಾರು ಅಥವಾ ಖಾರಿಫ್ ಬೇಸಾಯ ಆಗಿದೆ. ಎರಡನೆಯದು ಹಿಂಗಾರು ಅಥವಾ ರಾಬಿ ಬೇಸಾಯವಾಗಿದೆ. ಮೂರನೆಯದು ಬೇಸಿಗೆ ಅಥವಾ ಜೇಡ್ ಬೇಸಾಯವಾಗಿದೆ.
ನೈಋತ್ಯ ಮಾನ್ಸೂನ್ ಮಾರುತಗಳ ಅವಧಿಯ ಬೇಸಾಯವನ್ನು ಮುಂಗಾರು ಬೇಸಾಯದ ಅವಧಿ ಎಂದು ಪರಿಗಣಿಸಲಾಗುತ್ತದೆ. ಇದು ಮಳೆಗಾಲದ ಅವಧಿ ಆಗಿರುತ್ತದೆ. ಬೇಸಗೆಯಲ್ಲಿ ಮಾಡುವ ಬೇಸಾಯಕ್ಕೆ ಜೇಡ್ ಬೇಸಾಯ ಎನ್ನುತ್ತಾರೆ. ಅಧಿಕ ನೀರಿನ ಅಗತ್ಯವಿಲ್ಲದ ಕೃಷಿಯನ್ನು ಈ ಸಮಯದಲ್ಲಿ ಮಾಡಲಾಗುತ್ತದೆ.


Click it and Unblock the Notifications