ಬೆಂಗಳೂರು ಗುಲಾಬಿ ಈರುಳ್ಳಿ ಮೇಲಿನ ರಫ್ತು ತೆರಿಗೆಯನ್ನು ಹಣಕಾಸು ಸಚಿವಾಲಯ ಶುಕ್ರವಾರ ಕೆಲವು ಷರತ್ತುಗಳನ್ನು ವಿಧಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಮನ್ನಾ ಮಾಡಿದೆ. ಈ ಬಗ್ಗೆ ಶುಕ್ರವಾರ ಅಧಿಸೂಚನೆಯನ್ನು ಹೊರಡಿಸಲಾಗಿದೆ.
ಶುಕ್ರವಾರ ಹೊರಡಿಸಿದ ಅಧಿಸೂಚನೆಯ ಪ್ರಕಾರ, ರಫ್ತುದಾರರು ರಫ್ತು ಮಾಡುವ ಬೆಂಗಳೂರು ಗುಲಾಬಿ ಈರುಳ್ಳಿಯ ಐಟಂ ಮತ್ತು ಪ್ರಮಾಣವನ್ನು ಪ್ರಮಾಣೀಕರಿಸುವ ರಾಜ್ಯ ತೋಟಗಾರಿಕಾ ಆಯುಕ್ತರಿಂದ ಪ್ರಮಾಣಪತ್ರವನ್ನು ಒದಗಿಸಿದರೆ ಬೆಂಗಳೂರು ಗುಲಾಬಿ ಈರುಳ್ಳಿ ಮೇಲಿನ ರಫ್ತು ಸುಂಕದಿಂದ ವಿನಾಯಿತಿ ಪಡೆಯಬಹುದು.

ದೇಶೀಯ ಲಭ್ಯತೆಯನ್ನು ಹೆಚ್ಚಿಸಲು ಮತ್ತು ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯನ್ನು ನಿಯಂತ್ರಿಸಲು ಆಗಸ್ಟ್‌ನಲ್ಲಿ ಎಲ್ಲಾ ಬಗೆಯ ಈರುಳ್ಳಿಗಳ ರಫ್ತಿನ ಮೇಲೆ ಸರ್ಕಾರವು ಶೇಕಡ 40 ರಷ್ಟು ಸುಂಕವನ್ನು ವಿಧಿಸಿದೆ. ಈರುಳ್ಳಿ ಕೊರತೆ ನಡುವೆ ಸರ್ಕಾರ ಈ ಕ್ರಮವನ್ನು ಕೈಗೊಂಡಿದೆ.
ಭಾರತದ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಹಣದುಬ್ಬರವು ಜುಲೈ ತಿಂಗಳಲ್ಲಿ ಶೇಕಡ 7.44 ರಷ್ಟಿದೆ ಎಂದು ಅಧಿಕೃತ ಮಾಹಿತಿಯು ತೋರಿಸಿದೆ. ಇದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ಸಹಿಷ್ಣು ಮಿತಿಗಿಂತ ಶೇಕಡ 6 ಕ್ಕಿಂತ ಅಧಿಕವಾಗಿದೆ. ಆಹಾರ ಮತ್ತು ತರಕಾರಿ ಬೆಲೆ ಅಧಿಕವಾದ ಕಾರಣ ಹಣದುಬ್ಬರವೂ ಕೂಡಾ ಏರಿಕೆಯಾಗಿದೆ.
ಗ್ರಾಹಕ ವ್ಯವಹಾರಗಳ ಇಲಾಖೆಯ ಅಂಕಿಅಂಶಗಳ ಪ್ರಕಾರ, ದೇಶದಲ್ಲಿ ಈರುಳ್ಳಿಯ ಸರಾಸರಿ ಬೆಲೆ 33.53 ರೂಪಾಯಿ ಆಗಿದೆ. ಹಿಂದಿನ ದಾಖಲೆಯನ್ನು ಮುರಿದು, ಕೇಂದ್ರ ಸರ್ಕಾರವು 2022-23ರಲ್ಲಿ 2.50 ಲಕ್ಷ ಟನ್ ಈರುಳ್ಳಿಯನ್ನು ಸಂಗ್ರಹಿಸಿದೆ. ದೇಶದಲ್ಲಿ ಸಾಕಷ್ಟು ಈರುಳ್ಳಿಯ ದಾಸ್ತಾನು ಇದ್ದರೂ ಈ ವರ್ಷ ಬೇಸಿಗೆಯ ಬಿಸಿಲಿನ ಕಾರಣದಿಂದಾಗಿ ಕೆಟ್ಟ ಗುಣಮಟ್ಟದ ಈರುಳ್ಳಿ ಅಧಿಕವಾದ ಕಾರಣ ಉತ್ತಮ ಗುಣಮಟ್ಟದ ಈರುಳ್ಳಿಯು ದುಬಾರಿಯಾಗಿದೆ. ಈರುಳ್ಳಿ ರಫ್ತು 2022-23ರ ಅವಧಿಯಲ್ಲಿ ಆರು ವರ್ಷಗಳ ಗರಿಷ್ಠ ಮಟ್ಟಕ್ಕೆ 25.25 ಲಕ್ಷ ಟನ್‌ಗಳಿಗೆ ಅಂದರೆ ಶೇಕಡ 64 ರಷ್ಟು ಏರಿಕೆಯಾಗಿದೆ.


Click it and Unblock the Notifications