ನವದೆಹಲಿ, ಜನವರಿ 28: ಜನವರಿ-ಮಾರ್ಚ್ ತ್ರೈಮಾಸಿಕಕ್ಕೆ ಸಾಮಾನ್ಯ ಭವಿಷ್ಯ ನಿಧಿ(General Provident Fund) ಮೇಲಿನ ಬಡ್ಡಿದರವನ್ನು ಕೇಂದ್ರ ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಬಜೆಟ್ ವಿಭಾಗವು ಪ್ರಕಟಿಸಿದೆ. 20 ರ ಜನವರಿ 2020 ರಿಂದ ಮಾರ್ಚ್ ವರೆಗೆ ಜಿಪಿಎಫ್ ಮೇಲಿನ ಬಡ್ಡಿ ಶೇಕಡಾ 7.9 ರಷ್ಟಿದೆ.
ಒಂದು ವರ್ಷ ಉದ್ಯೋಗ ಪೂರ್ಣಗೊಳಿಸುವ ತಾತ್ಕಾಲಿಕ ಉದ್ಯೋಗಿಗಳು, ಎಲ್ಲಾ ಖಾಯಂ ಸರ್ಕಾರಿ ನೌಕರರು ಸಾಮಾನ್ಯ ಭವಿಷ್ಯ ನಿಧಿ ನಿಯಮ 1960 ರ ವ್ಯಾಪ್ತಿಗೆ ಒಳಪಡಲಿದ್ದಾರೆ ಎಂದು ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಚಿವಾಲಯ ಹೇಳಿದೆ.
ಅಂಚೆ ಕಚೇರಿ ಸಣ್ಣ ಉಳಿತಾಯ ಯೋಜನೆ, ಸಾರ್ವಜನಿಕ ಭವಿಷ್ಯ ನಿಧಿ(ಪಿಪಿಎಫ್), ರಾಷ್ಟ್ರೀಯ ಉಳಿತಾಯ ಪತ್ರ(ಎನ್ ಎಸ್ ಸಿ) ತ್ರೈಮಾಸಿಕ ಬಡ್ಡಿದರಗಳನ್ನು ಸರ್ಕಾರ ಘೋಷಣೆ ಮಾಡಿತ್ತು. ಆದರೆ, ಬಡ್ಡಿದರದಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿರಲಿಲ್ಲ. ಬಡ್ಡಿದರವನ್ನು ಶೇಕಡಾ 7.9 ಕ್ಕೆ ಉಳಿಸಲಾಗಿದೆ. ಕೇಂದ್ರ ಸರ್ಕಾರ ಸಣ್ಣ ಉಳಿತಾಯ ಯೋಜನೆಗಳಿಗೆ ನೀಡುವ ಬಡ್ಡಿದರವನ್ನು ಮೂರು ತಿಂಗಳಿಗೊಮ್ಮೆ ಪರಿಷ್ಕರಿಸುತ್ತದೆ.

ಸದ್ಯ ಜನವರಿ 2020ರಿಂದ ಮಾರ್ಚ್ ತನಕ ಜಿಪಿಎಫ್ ಬಡ್ಡಿದರ 7.9% ಇದ್ದು, ಜನವರಿ 01ರಿಂದಲೇ ಪೂರ್ವನ್ವಯವಾಗಲಿದೆ. ಯಾವೆಲ್ಲ ಭವಿಷ್ಯ ನಿಧಿ ಯೋಜನೆಗೆ ಇದು ಅನ್ವಯ ಇಲ್ಲಿದೆ ಪಟ್ಟಿ:
1. ಸಾಮಾನ್ಯ ಭವಿಷ್ಯ ನಿಧಿ(ಕೇಂದ್ರ ಸೇವೆ)
2. The Contributory Provident Fund
3. ಅಖಿಲ ಭಾರತ ಸೇವಾ ಭವಿಷ್ಯ ನಿಧಿ
4. ರಾಜ್ಯ ರೈಲ್ವೆ ಭವಿಷ್ಯ ನಿಧಿ
5. ಸಾಮಾನ್ಯ ಭವಿಷ್ಯ ನಿಧಿ(ರಕ್ಷಣಾ ಸೇವೆ)
6. The Indian Ordnance Department Provident Fund.
7. The Indian Ordnance Factories Workmen's Provident Fund.
8. ಭಾರತೀಯ ನೌಕಾಪಡೆ ಡಾಕ್ ಯಾರ್ಡ್ ಸಿಬ್ಬಂದಿ ಭವಿಷ್ಯ ನಿಧಿ.
9. ರಕ್ಷಣಾ ಸೇವಾ ಅಧಿಕಾರಿಗಳ ಭವಿಷ್ಯ ನಿಧಿ.
10. ಸಶಸ್ತ್ರ ಬಲ ಸಿಬ್ಬಂದಿ ಭವಿಷ್ಯ ನಿಧಿ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ನಿಫ್ಟಿ ಏರಿಕೆ: ಈಗಲೇ ಹೂಡಿಕೆ ಮಾಡಬೇಕಾ ಅಥವಾ ಕಾಯಬೇಕಾ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಪ್ರಾಪ್ಶೇರ್ ಸೆಲೆಸ್ಟಿಯಾ ಐಪಿಒ: ಹೂಡಿಕೆಗೆ ಇಂದು ಕೊನೆಯ ಅವಕಾಶ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications