ಇ ಫಾರ್ಮಸಿಗಳಾದ ಟಾಟಾ 1ಎಂಜಿ, ನೆಟ್‌ಮೆಡ್ಸ್, ಮೆಡಿಬಡ್ಡಿ, ಪ್ರಾಕ್ಟೋ, ಅಪೋಲೋ ಮೊದಲಾದವುಗಳು ಆನ್‌ಲೈನ್ ಮೂಲಕ ಔಷಧಿಗಳನ್ನು ಮಾರಾಟ ಮಾಡುತ್ತದೆ. ಆದರೆ ಈ ಆನ್‌ಲೈನ್ ಔಷಧಿ ಮಾರಾಟ ಮಾಡುವ ಪ್ಲಾಟ್‌ಫಾರ್ಮ್‌ಗಳು ಆನ್‌ಲೈನ್‌ನಲ್ಲಿ ಔಷಧಿ ಮಾರಾಟ ಮಾಡುವಾಗ ನಿಯಮ ಉಲ್ಲಂಘನೆ ಮಾಡುತ್ತಿದೆ ಎಂದು ಆರೋಪಿಸಲಾಗಿದೆ.
ಡೇಟಾ ಗೌಪ್ಯತೆ, ಮಾಲ್‌ಪ್ರಾಕ್ಟಿಸಿಂಗ್, ಡ್ರಗ್ ಮಾರಾಟದಲ್ಲಿ ನಿಯಮ ಉಲ್ಲಂಘನೆ ಕಾರಣ ಕೇಂದ್ರ ಆರೋಗ್ಯ ಸಚಿವಾಲಯವು ಇ-ಫಾರ್ಮಸಿಗಳ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ ಎಂದು ವರದಿಯಾಗಿದೆ. ಟಾಟಾ 1ಎಂಜಿ, ಅಮೆಜಾನ್, ಫ್ಲಿಫ್‌ಕಾರ್ಟ್, ನೆಟ್‌ಮೆಡ್ಸ್, ಮೆಡಿಬಡ್ಡಿ, ಪ್ರಾಕ್ಟೋ, ಫ್ರಾನ್‌ಕ್ರಾಸ್ ಸೇರಿದಂತೆ 20 ಇ-ಫಾರ್ಮಸಿಗಳಿಗೆ ಡ್ರಗ್ ರೆಗ್ಯುಲೇಟರ್ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ಶೋಕಾಸ್ ನೋಟಿಸ್ ಕಳುಹಿಸಿದೆ.

ಮಸೂದೆ ಏನು ಹೇಳುತ್ತದೆ ತಿಳಿಯಿರಿ
ಸಚಿವಾಲಯದ ಪರಿಷ್ಕರಣೆಗಾಗಿ ಕಳುಹಿಸಲಾದ ಹೊಸ ಔಷಧಗಳು, ವೈದ್ಯಕೀಯ ಸಾಧನಗಳು ಮತ್ತು ಸೌಂದರ್ಯವರ್ಧಕಗಳ ಮಸೂದೆ, 2023 ರ ಪರಿಷ್ಕೃತ ಕರಡು ಪ್ರಕಾರ, "ಕೇಂದ್ರ ಸರ್ಕಾರವು ಆನ್‌ಲೈನ್ ಮೋಡ್ ಮೂಲಕ ಯಾವುದೇ ಔಷಧದ ಮಾರಾಟ ಅಥವಾ ವಿತರಣೆಯನ್ನು ನಿಯಂತ್ರಿಸಬಹುದು , ನಿರ್ಬಂಧಿಸಬಹುದು ಅಥವಾ ನಿಷೇಧಿಸಬಹುದು ಎಂದು ನೋಟಿಫಿಕೇಷನ್ ಹೇಳುತ್ತದೆ." 1940 ರ ಅಸ್ತಿತ್ವದಲ್ಲಿರುವ ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಕಾಯಿದೆಯ ಬದಲಾಗಿ ಹೊಸ ಔಷಧಗಳು, ವೈದ್ಯಕೀಯ ಸಾಧನಗಳು ಮತ್ತು ಸೌಂದರ್ಯವರ್ಧಕಗಳ ಮಸೂದೆ, 2023 ಆಗಿದೆ.
ಫ್ಲಿಫ್‌ಕಾರ್ಟ್‌ನಲ್ಲಿ ಆಸಿಡ್ ಮಾರಾಟವನ್ನು ಪ್ರಶ್ನಿಸಿದ ಸಿಸಿಪಿಎ
ಇ-ಫಾರ್ಮಸಿ ಮತ್ತು ಅಪಾಯಗಳು
* ಪಿಟಿಐನ ಅಧಿಕೃತ ಮೂಲಗಳ ಪ್ರಕಾರ, ಇಂತಹ ಇ-ಫಾರ್ಮಸಿಗಳ ಕಾರ್ಯನಿರ್ವಹಣೆಯನ್ನು ನಿಯಂತ್ರಿಸುವುದು, ಪ್ರಿಸ್ಕ್ರಿಪ್ಷನ್ ಔಷಧಿಗಳ ಅನಿಯಂತ್ರಿತ ಬಳಕೆ ಮತ್ತು ರೋಗಿಗಳ ಡೇಟಾದ ಗೌಪ್ಯತೆಯನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿದೆ.
* ಈ ಆನ್‌ಲೈನ್ ಫಾರ್ಮಸಿಗಳು ಔಷಧಿಗಳ ಸೇವನೆಗೆ ಸಂಬಂಧಿಸಿದ ಪ್ರದೇಶವಾರು ಡೇಟಾವನ್ನು ಸಂಗ್ರಹಿಸುತ್ತವೆ. ಇದು ರೋಗಿಗಳ ಸುರಕ್ಷತೆಯ ಅಪಾಯಗಳನ್ನು ಹೆಚ್ಚಿಸುತ್ತದೆ.
* ಡೇಟಾ ಗೌಪ್ಯತೆ, ಪ್ರಿಸ್ಕ್ರಿಪ್ಷನ್ ಇಲ್ಲದೆ ಔಷಧಿಗಳ ಮಾರಾಟ ಮತ್ತು ಮಾರಾಟಕ್ಕೆ ಸಂಬಂಧಿಸಿ ಸಂಸ್ಥೆಯು ಆಪಾದಿತ ದುಷ್ಕೃತ್ಯಗಳನ್ನು ಮಾಡುತ್ತಿದೆ ಎಂಬ ಆರೋಪವಿದೆ.
* ಲೈಸೆನ್ಸ್ ಇಲ್ಲದೆಯೇ ಆನ್‌ಲೈನ್‌ನಲ್ಲಿ ಆಫರ್‌ನಲ್ಲಿ ಔಷಧಿ ಮಾರಾಟ ಮಾಡುವುದರಿಂದ ಅಪಾಯ ಉಂಟಾಗುವ ಸಾಧ್ಯತೆಯಿದೆ.
ಈ ಹಿಂದೆ ಇ-ಕಾಮರ್ಸ್ ವೇದಿಕೆ ಫ್ಲಿಫ್‌ಕಾರ್ಟ್‌ನಲ್ಲಿ ಆಸಿಡ್ ಅನ್ನು ಮಾರಾಟ ಮಾಡಲಾಗುತ್ತಿದ್ದು, ಸೆಂಟ್ರಲ್ ಕನ್ಸ್ಯೂಮರ್ ಪ್ರೊಟೆಕ್ಷನ್ ಅಥಾರಿಟಿ (ಸಿಸಿಪಿಎ) ಇದನ್ನು ಪ್ರಶ್ನೆ ಮಾಡಿದೆ. ಹಾಗೆಯೇ ಮುಂದಿನ 7 ದಿನಗಳಲ್ಲಿ ಈ ಬಗ್ಗೆ ಉತ್ತರವನ್ನು ನೀಡುವಂತೆ ಸೂಚಿಸಲಾಗಿದೆ. ದೆಹಲಿಯಲ್ಲಿನ ದ್ವಾರಕದಲ್ಲಿ ಹುಡುಗಿಯ ಮೇಲೆ ಆಸಿಡ್ ದಾಳಿ ನಡೆದಿದೆ. ಆಸಿಡ್ ದಾಳಿಯನ್ನು ನಡೆಸಿದ ಯುವಕನು ಫ್ಲಿಫ್‌ಕಾರ್ಟ್‌ನಲ್ಲಿ ಈ ಆಸಿಡ್ ಅನ್ನು ಖರೀದಿ ಮಾಡಿದ್ದಾನೆ ಎಂದು ಆರೋಪ ಮಾಡಲಾಗಿದೆ.
ಈ ಹಿಂದೆ ದೆಹಲಿ ಮಹಿಳಾ ಆಯೋಗ ಪ್ಲಾಟ್‌ಫಾರ್ಮ್‌ನಲ್ಲಿ ಯುವಕನಿಗೆ ಆಸಿಡ್ ಮಾರಾಟ ಮಾಡಿರುವುದಕ್ಕೆ ಫ್ಲಿಫ್‌ಕಾರ್ಟ್ ವಿರುದ್ಧ ನೋಟಿಸ್ ಜಾರಿ ಮಾಡಿತ್ತು. ಫ್ಲಿಫ್‌ಕಾರ್ಟ್‌ನಲ್ಲಿ ಆಸಿಡ್ ಅನ್ನು ಮಾರಾಟ ಮಾಡಲಾಗಿದೆ ಎಂಬ ಬಗ್ಗೆ ಸುದ್ದಿ ಕೇಳಿಬರುತ್ತಿದ್ದಂತೆ ದೆಹಲಿ ಪೊಲೀಸರು ಕೂಡಾ ನೋಟಿಸ್ ಅನ್ನು ಜಾರಿ ಮಾಡಿದ್ದಾರೆ. ಇನ್ನು ನೋಟಿಸ್‌ನಲ್ಲಿ, "ದೆಹಲಿಯಲ್ಲಿ ಆಸಿಡ್ ದಾಳಿಯು ನಡೆದಿದ್ದು, ಈ ದಾಳಿಗೆ ಫ್ಲಿಫ್‌ಕಾರ್ಟ್‌ನಿಂದ ಆಸಿಡ್ ಅನ್ನು ಖರೀದಿ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ," ಎಂದು ನೋಟಿಸ್‌ನಲ್ಲಿ ಉಲ್ಲೇಖ ಮಾಡಲಾಗಿದೆ.


Click it and Unblock the Notifications