For Quick Alerts
ALLOW NOTIFICATIONS  
For Daily Alerts

ಫ್ಲಿಫ್‌ಕಾರ್ಟ್‌ನಲ್ಲಿ ಆಸಿಡ್ ಮಾರಾಟವನ್ನು ಪ್ರಶ್ನಿಸಿದ ಸಿಸಿಪಿಎ

|

ಇ-ಕಾಮರ್ಸ್ ವೇದಿಕೆ ಫ್ಲಿಫ್‌ಕಾರ್ಟ್‌ನಲ್ಲಿ ಆಸಿಡ್ ಅನ್ನು ಮಾರಾಟ ಮಾಡಲಾಗುತ್ತಿದ್ದು, ಸೆಂಟ್ರಲ್ ಕನ್ಸ್ಯೂಮರ್ ಪ್ರೊಟೆಕ್ಷನ್ ಅಥಾರಿಟಿ (ಸಿಸಿಪಿಎ) ಇದನ್ನು ಪ್ರಶ್ನೆ ಮಾಡಿದೆ. ಹಾಗೆಯೇ ಮುಂದಿನ 7 ದಿನಗಳಲ್ಲಿ ಈ ಬಗ್ಗೆ ಉತ್ತರವನ್ನು ನೀಡುವಂತೆ ಸೂಚಿಸಲಾಗಿದೆ.

 

ದೆಹಲಿಯಲ್ಲಿನ ದ್ವಾರಕದಲ್ಲಿ ಹುಡುಗಿಯ ಮೇಲೆ ಆಸಿಡ್ ದಾಳಿ ನಡೆದಿದೆ. ಆಸಿಡ್ ದಾಳಿಯನ್ನು ನಡೆಸಿದ ಯುವಕನು ಫ್ಲಿಫ್‌ಕಾರ್ಟ್‌ನಲ್ಲಿ ಈ ಆಸಿಡ್ ಅನ್ನು ಖರೀದಿ ಮಾಡಿದ್ದಾನೆ ಎಂದು ಆರೋಪ ಮಾಡಲಾಗಿದೆ. ಈ ಹಿಂದೆ ದೆಹಲಿ ಮಹಿಳಾ ಆಯೋಗ ಪ್ಲಾಟ್‌ಫಾರ್ಮ್‌ನಲ್ಲಿ ಯುವಕನಿಗೆ ಆಸಿಡ್ ಮಾರಾಟ ಮಾಡಿರುವುದಕ್ಕೆ ಫ್ಲಿಫ್‌ಕಾರ್ಟ್ ವಿರುದ್ಧ ನೋಟಿಸ್ ಜಾರಿ ಮಾಡಿತ್ತು.

ಫ್ಲಿಫ್‌ಕಾರ್ಟ್‌ನಲ್ಲಿ ಆಸಿಡ್ ಅನ್ನು ಮಾರಾಟ ಮಾಡಲಾಗಿದೆ ಎಂಬ ಬಗ್ಗೆ ಸುದ್ದಿ ಕೇಳಿಬರುತ್ತಿದ್ದಂತೆ ದೆಹಲಿ ಪೊಲೀಸರು ಕೂಡಾ ನೋಟಿಸ್ ಅನ್ನು ಜಾರಿ ಮಾಡಿದ್ದಾರೆ. ಇನ್ನು ನೋಟಿಸ್‌ನಲ್ಲಿ, "ದೆಹಲಿಯಲ್ಲಿ ಆಸಿಡ್ ದಾಳಿಯು ನಡೆದಿದ್ದು, ಈ ದಾಳಿಗೆ ಫ್ಲಿಫ್‌ಕಾರ್ಟ್‌ನಿಂದ ಆಸಿಡ್‌ ಅನ್ನು ಖರೀದಿ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ," ಎಂದು ನೋಟಿಸ್‌ನಲ್ಲಿ ಉಲ್ಲೇಖ ಮಾಡಲಾಗಿದೆ.

 ಫ್ಲಿಫ್‌ಕಾರ್ಟ್‌ನಲ್ಲಿ ಆಸಿಡ್ ಮಾರಾಟವನ್ನು ಪ್ರಶ್ನಿಸಿದ ಸಿಸಿಪಿಎ

ನೋಟಿಸ್‌ನಲ್ಲಿ ಏನಿದೆ?

ಮಾಧ್ಯಮದ ವರದಿಯನ್ನು ಆಧಾರಿಸಿ ಸಿಸಿಪಿಎ ನೋಟಿಸ್‌ನಲ್ಲಿ ಉಲ್ಲೇಖಿಸಿದ್ದು, "ಫ್ಲಿಫ್‌ಕಾರ್ಟ್‌ನಲ್ಲಿ ಆಸಿಡ್ ಸುಲಭ ಹಾಗೂ ಯಾವುದೇ ನಿರ್ಬಂಧವಿಲ್ಲದೆ ಲಭ್ಯವಾಗುತ್ತದೆ ಎಂದು ಮಾಹಿತಿ ಲಭ್ಯವಾಗಿದೆ. ಈ ರೀತಿ ಸುಲಭವಾಗಿ ಆಸಿಡ್ ಲಭ್ಯವಾಗುವುದು ಅತೀ ಆತಂಕಕಾರಿಯಾಗಿದೆ, ಗ್ರಾಹಕರಿಗೆ ಅಸುರಕ್ಷಿತವಾಗಿದೆ," ಎಂದು ಹೇಳಿದೆ. ಏಳು ದಿನದಲ್ಲಿ ಉತ್ತರ ನೀಡುವಂತೆ ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ. ಹಾಗೆಯೇ ಸಂಬಂಧಿತ ದಾಖಲೆಗಳನ್ನು ನೀಡುವಂತೆ ತಿಳಿಸಲಾಗಿದೆ.

ಇಬ್ಬರು ಮಾಸ್ಕ್ ಹಾಕಿದ ಯುವಕರು ಹುಡುಗಿಯ ಮೇಲೆ ಬುಧವಾರ ಆಸಿಡ್ ದಾಳಿ ನಡೆಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಮನೆಯಿಂದ ಶಾಲೆಗೆ ಹುಡುಗಿ ಹೋಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಈ ಘಟನೆಗೆ ಸಂಬಂಧಿಸಿ ಪೊಲೀಸರು ಮೂವರನ್ನು ಬಂಧನ ಮಾಡಿದೆ.

English summary

Consumer Protection Authority Seeks Explanation from Flipkart on Acid Sale

The Central Consumer Protection Authority (CCPA) has sought explanation from e-commerce player Flipkart regarding sale of acid on its online platform.
Story first published: Friday, December 16, 2022, 17:42 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X