For Quick Alerts
ALLOW NOTIFICATIONS  
For Daily Alerts

28 ಸರ್ಕಾರಿ ಸಂಸ್ಥೆಗಳ ಕಾರ್ಯತಂತ್ರದ ಪಾಲನ್ನು ಮಾರಾಟ ಮಾಡಲಿರುವ ಸರ್ಕಾರ

|

28 ಸರ್ಕಾರಿ ಸಂಸ್ಥೆಗಳ ಕಾರ್ಯತಂತ್ರದ ಪಾಲನ್ನು ಮಾರಾಟ ಮಾಡಲು ಕ್ಯಾಬಿನೆಟ್ ತಾತ್ವಿಕ ಅನುಮೋದನೆ ನೀಡಿದೆ.

ಹಣಕಾಸು ರಾಜ್ಯ ಸಚಿವ (Mos) ಅನುರಾಗ್ ಸಿಂಗ್ ಠಾಕೂರ್ 'ಏರ್ ಇಂಡಿಯಾ ಸೇರಿದಂತೆ ಒಟ್ಟು 28 ಸರ್ಕಾರಿ ಸಂಸ್ಥೆಗಳಲ್ಲಿನ ಕಾರ್ಯತಂತ್ರದ ಪಾಲನ್ನು ಮಾರಾಟ ಮಾಡಲು ಕ್ಯಾಬಿನೆಟ್ ತಾತ್ವಿಕವಾಗಿ ಅನುಮೋದನೆ ನೀಡಿದೆ ಎಂದು ತಿಳಿಸಿದರು.

28 ಸರ್ಕಾರಿ ಸಂಸ್ಥೆಗಳ ಪಾಲು ಮಾರಾಟ ಮಾಡಲಿರುವ ಸರ್ಕಾರ

ಮಾರ್ಚ್‌ನಲ್ಲಿ ಕೊನೆಗೊಳ್ಳುವ 2019-20ರ ಹಣಕಾಸಿನ ವರ್ಷದಲ್ಲಿ ಸರ್ಕಾರ ಇದುವರೆಗೂ 173.64 ಬಿಲಿಯನ್ ರುಪಾಯಿಗಳನ್ನು(17,449 ಕೋಟಿ 70 ಲಕ್ಷದ 85 ಸಾವಿರ ರುಪಾಯಿಗಳು) ಸಂಗ್ರಹಿಸಿದೆ. ಪೂರ್ಣ ವರ್ಷದ ಗುರಿ 1.05 ಟ್ರಿಲಿಯನ್ ರುಪಾಯಿ (1 ಲಕ್ಷ ಕೋಟಿ ರುಪಾಯಿ) ಆಗಿದೆ ಎಂದು ಸಂಸತ್ತಿನ ಕೆಳಮನೆಯಲ್ಲಿ ಲಿಖಿತ ಉತ್ತರ ನೀಡಿದ್ದಾರೆ.

'2020ರ ಮಾರ್ಚ್ ನೊಳಗೆ ಏರ್ ಇಂಡಿಯಾ, ಭಾರತ್ ಪೆಟ್ರೋಲಿಯಮ್ ಮಾರಾಟ''2020ರ ಮಾರ್ಚ್ ನೊಳಗೆ ಏರ್ ಇಂಡಿಯಾ, ಭಾರತ್ ಪೆಟ್ರೋಲಿಯಮ್ ಮಾರಾಟ'

ಶನಿವಾರ (ನವೆಂಬರ್ 16) ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, 2020ರ ಗುರಿಯನ್ನು ಮುಟ್ಟಲು ಏರ್ ಇಂಡಿಯಾ ಹಾಗೂ ಬಿಪಿಸಿಎಲ್ (ಭಾರತ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್) ಮಾರಾಟ ಮಾಡಲು ಸರ್ಕಾರ ಯೋಚಿಸುತ್ತಿದೆ ಎಂದು ಹೇಳಿದ್ದರು.

English summary

Govt Plans Strategic Stake Sale In 28 Companies

India's cabinet has given 'in-principle' approval for the sale of strategic stakes in 28 state-run companies including state carrier Air India
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X