ರಾಷ್ಟ್ರೀಯ ಪಿಂಚಣಿ ಯೋಜನೆಯ (ಎನ್‌ಪಿಎಸ್) ನಿಯಮವನ್ನು ಬದಲಾವಣೆ ಮಾಡಲು ಕೇಂದ್ರ ಸರ್ಕಾರವು ಸಜ್ಜಾಗಿದೆ. ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಕನಿಷ್ಠ ಶೇಕಡ 40ರಿಂದ ಶೇಕಡ 45ರಷ್ಟು ಪಿಂಚಣಿಯನ್ನು ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಎನ್‌ಪಿಎಸ್ ಯೋಜನೆಯ ನಿಯಮ ಬದಲಾವಣೆ ಮಾಡಲು ಸಜ್ಜಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ರಾಷ್ಟ್ರೀಯ ಪಿಂಚಣಿ ಯೋಜನೆ ನಿಯಮಗಳಲ್ಲಿ ಈಗಿರುವ ತಿದ್ದುಪಡಿ ಸರ್ಕಾರಿ ನೌಕರರಿಗೆ ಮಾತ್ರ ಎಂಬುದು ಗಮನಾರ್ಹವಾಗಿದೆ. ಪಿಂಚಣಿ ವ್ಯವಸ್ಥೆಯನ್ನು ಮೌಲ್ಯಮಾಪನ ಮಾಡಲು ಕೇಂದ್ರ ಸರ್ಕಾರವು ಈ ವರ್ಷದ ಆರಂಭದಲ್ಲಿ ಅಂದರೆ ಏಪ್ರಿಲ್‌ನಲ್ಲಿ ಸಮಿತಿಯನ್ನು ರಚಿಸಿದ ನಂತರ ಹೊಸ ನಿಯಮವನ್ನು ತರುವ ಕ್ರಮವನ್ನು ಕೈಗೊಳ್ಳಲಾಗುತ್ತಿದೆ. 2004 ರಲ್ಲಿ ಹಣಕಾಸಿನ ಸುಧಾರಣೆ ಉಂಟಾಗಿದೆ. ಕೆಲವು ರಾಜ್ಯಗಳು ಹಳೆಯ ನಿಯಮವನ್ನು ಪಾಲಿಸಲು ಆರಂಭಿಸಿದೆ. ಆದರಿಂದಾಗಿ ಸ್ತುತ ಪಿಂಚಣಿ ವ್ಯವಸ್ಥೆಯನ್ನು ಮರುಪರಿಶೀಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ಒತ್ತಾಯಿಸಿದ್ದಾರೆ.

ಪ್ರಸ್ತುತ ಜಾರಿಯಲ್ಲಿರುವ ನಿಯಮದ ಪ್ರಕಾರ ರಾಷ್ಟ್ರೀಯ ಪಿಂಚಣಿಯ ಯೋಜನೆಗೆ ಉದ್ಯೋಗಿಗಳು ತಮ್ಮ ಮೂಲ ವೇತನದ ಶೇಕಡ 10ರಷ್ಟು ಕೊಡುಗೆಯನ್ನು ನೀಡಬೇಕಾಗುತ್ತದೆ. ಸರ್ಕಾರವು ಶೇಕಡ 14ರಷ್ಟು ಕೊಡುಗೆಯನ್ನು ನೀಡಬೇಕಾಗುತ್ತದೆ. ಸಾಮಾನ್ಯವಾಗಿ ಕಾರ್ಪಸ್‌ಗೆ ಮಾರುಕಟ್ಟೆ ರಿಟರ್ನ್ ಆದಾರದಲ್ಲಿ ಅಂತಿಮವಾಗಿ ನೀಡಲಾಗುವ ರಿಟರ್ನ್ ಅನ್ನು ನಿರ್ಧಾರ ಮಾಡಲಾಗುತ್ತದೆ.
ಎಷ್ಟು ಎನ್‌ಪಿಎಸ್ ಕೊಡುಗೆ ನೀಡಲಾಗುತ್ತದೆ?
ಸರ್ಕಾರಿ ಉದ್ಯೋಗಿಗಳ ಎನ್‌ಪಿಎಸ್‌ಗೆ ಕನಿಷ್ಠ ಕೊಡುಗೆಯು ಮೂಲ ವೇತನದ ಶೇಕಡ 14ರಷ್ಟು ಆಗಿರುತ್ತದೆ. ಉದ್ಯೋಗದಾತ ಸಂಸ್ಥೆ (ಸರ್ಕಾರ) ಶೇಕಡ 14ರಷ್ಟು ಹೆಚ್ಚುವರಿ ಕೊಡುಗೆಯನ್ನು ನೀಡಬೇಕಾಗುತ್ತದೆ. ಖಾಸಗಿ ಉದ್ಯೋಗಿಗಳಿಗೆ ಎನ್‌ಪಿಎಸ್‌ಗೆ ಕನಿಷ್ಠ ಕೊಡುಗೆಯು ಮೂಲ ವೇತನದ ಶೇಕಡ 10ರಷ್ಟು ಆಗಿರುತ್ತದೆ. ಕನಿಷ್ಠ ಕೊಡುಗೆಯು ಮೂಲ ವೇತನದ ಶೇಕಡ 10ರಷ್ಟು ಆಗಿರುತ್ತದೆ.
ಈ ನಡುವೆ ಹಳೆಯ ಪಿಂಚಣಿ ವ್ಯವಸ್ಥೆಯ ನಿಯಮ ಪ್ರಕಾರ ಈ ಯೋಜನೆಯು ಉದ್ಯೋಗಿಗಳ ಕೊನೆಯ ವೇತನದ ಶೇಕಡ 50ರಷ್ಟು ಸ್ಥಿರ ಪಿಂಚಣಿಯನ್ನು ನೀಡುತ್ತದೆ. ಹಾಗೆಯೇ ಉದ್ಯೋಗಿಗಳು ತಮ್ಮ ಕೆಲಸದ ಅವಧಿಯಲ್ಲಿ ಏನನ್ನೂ ಕೊಡುಗೆ ನೀಡಬೇಕಾಗಿಲ್ಲ. ಈಗ ಸರ್ಕಾರವು ಪ್ರಸ್ತುತ ಯೋಜನೆಯ ನಿಯಮವನ್ನು ಬದಲಾವಣೆ ಮಾಡಲು ಮುಂದಾಗಿದೆ.
ಹೊಸ ನಿಯಮದಂತೆ ನೌಕರರು ತಮ್ಮ ಕೊನೆಯ ಸಂಬಳದ ಶೇಕಡ 40-45ರಷ್ಟು ಮೊತ್ತವನ್ನು ಪಿಂಚಣಿಯಾಗಿ ಪಡೆಯುತ್ತಾರೆ ಎಂದು ಅಧಿಕಾರಿಗಳು ರಾಯಿಟರ್ಸ್‌ಗೆ ತಿಳಿಸಿದ್ದಾರೆ. ರಾಯಿಟರ್ಸ್ ವರದಿಯ ಪ್ರಕಾರ, ಸರ್ಕಾರಿ ಅಧಿಕಾರಿಗಳು ಮತ್ತೆ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಜಾರಿ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಎನ್‌ಪಿಎಸ್ ಎಂದರೇನು?
ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು (NPS) ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ನಿಯಂತ್ರಿಸುತ್ತದೆ. ಇದನ್ನು ಪಿಎಫ್‌ಆರ್‌ಡಿಎ ಕಾಯಿದೆ, 2013 ರ ಅಡಿಯಲ್ಲಿ ಸ್ಥಾಪಿಸಲಾಗಿದೆ. ಎನ್‌ಪಿಎಸ್ ಒಂದು ಹೂಡಿಕೆ ಆಯ್ಕೆಯಾಗಿದೆ. ಪಿಪಿಎಫ್ ಹಾಗೂ ಇಪಿಎಫ್‌ನಂತೆಯೇ ಎನ್‌ಪಿಎಸ್‌ನಲ್ಲಿ ಮೆಚ್ಯೂರಿಟಿಯಾಗುವ ಮೊತ್ತವು ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿರುತ್ತದೆ.
ಎನ್‌ಪಿಎಸ್ ಅಡಿಯಲ್ಲಿ ಎರಡು ಖಾತೆಗಳು
ಎನ್‌ಪಿಎಸ್ ಅಡಿಯಲ್ಲಿ ನಾವು ಎರಡು ರೀತಿಯ ಖಾತೆಗಳನ್ನು ತೆರಯಲು ಸಾಧ್ಯವಾಗುತ್ತದೆ. ಅದನ್ನು ಟೈರ್ -I ಮತ್ತು ಟೈರ್-II ಎಂದು (ಶ್ರೇಣಿ-I ಮತ್ತು ಶ್ರೇಣಿ II) ಪರಿಗಣಿಸಲಾಗುತ್ತದೆ. ಟೈರ್ -I ಖಾತೆಯಲ್ಲಿ ವಿತ್‌ಡ್ರಾ ಮಾಡಲು ನಿರ್ಬಂಧಗಳು ಇರುತ್ತದೆ. ಟೈರ್ -II ರಲ್ಲಿ ಹೂಡಿಕೆ ಹಾಗೂ ವಿತ್‌ಡ್‌ರಾ ಮಾಡುವುದಕ್ಕೆ ಹೆಚ್ಚಿನ ನಿರ್ಬಂಧಗಳು ಇರುವುದಿಲ್ಲ. ಚಂದಾದಾರರ ಹೆಸರಿನಲ್ಲಿ ಸಕ್ರಿಯವಾದ ಟೈರ್-I ಖಾತೆ ಇದ್ದಾಗ ಮಾತ್ರ ಟೈರ್-II ರಲ್ಲಿ ನಿರ್ಬಂಧ ಸಡಿಲಿಕೆ ಇರುತ್ತದೆ.
ವಿಭಿನ್ನ ಮಾದರಿಗಳ ಎನ್‌ಪಿಎಸ್
ಎನ್‌ಪಿಎಸ್ ಬಳಕೆದಾರರ ವಿವಿಧ ವಿಭಾಗಗಳಿಗೆ ಸರಿಹೊಂದುವಂತೆ ವಿಭಿನ್ನ ಮಾದರಿಗಳನ್ನು ನೀಡುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರಿಗೆ ಸರ್ಕಾರಿ ಮಾದರಿ ಇರುತ್ತದೆ. 01.01.2004 ರಂದು ಅಥವಾ ನಂತರ ನೇಮಕಗೊಂಡ ಕೇಂದ್ರ ಸರ್ಕಾರಿ ನೌಕರರಿಗೆ (ಸಶಸ್ತ್ರ ಪಡೆಗಳನ್ನು ಹೊರತುಪಡಿಸಿ) ಎನ್‌ಪಿಎಸ್ ಕಡ್ಡಾಯವಾಗಿದೆ.
ಪಶ್ಚಿಮ ಬಂಗಾಳ ರಾಜ್ಯವನ್ನು ಹೊರತುಪಡಿಸಿ ಎಲ್ಲಾ ರಾಜ್ಯ ಸರ್ಕಾರಗಳು ತಮ್ಮ ಉದ್ಯೋಗಿಗಳಿಗೆ ಎನ್‌ಪಿಎಸ್ ಅಳವಡಿಸಿಕೊಂಡಿದೆ. ಸರ್ಕಾರಿ ನೌಕರರು ತಮ್ಮ ವೇತನದ ಶೇಕಡ 10ರಷ್ಟು ಮಾಸಿಕ ಕೊಡುಗೆಯನ್ನು ನೀಡಿದರೆ, ಅಷ್ಟೇ ಪ್ರಮಾಣದ ಕೊಡುಗೆಯನ್ನು ಸರ್ಕಾರವು ನೀಡುತ್ತದೆ. ಇನ್ನು ಕೇಂದ್ರ ಸರ್ಕಾರಿ ನೌಕರರಿಗೆ 01.04.2019ರಿಂದ ಜಾರಿಗೆ ಬರುವಂತೆ ಸರ್ಕಾರ ನೀಡುವ ದರವನ್ನು ಶೇಕಡ 14ಕ್ಕೆ ಏರಿಕೆ ಮಾಡಲಾಗಿದೆ.
ಕಾರ್ಪೊರೇಟ್ ಮಾದರಿ: ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಉದ್ಯೋಗದ ಪರಿಸ್ಥಿತಿಗಳ ಪ್ರಕಾರವಾಗಿ ಎನ್‌ಪಿಎಸ್ ಅನ್ನು ಅಳವಡಿಸಿಕೊಳ್ಳಬಹುದು.
ಎಲ್ಲಾ ನಾಗರಿಕರ ಮಾದರಿ: ಎನ್‌ಪಿಎಸ್‌ನ ಎಲ್ಲಾ ನಾಗರಿಕರ ಮಾದರಿ ಅಡಿಯಲ್ಲಿ 18 - 65 ವರ್ಷಗಳ ನಡುವಿನ ಭಾರತದ ಎಲ್ಲಾ ನಾಗರಿಕರು ಸ್ವಯಂಪ್ರೇರಿಯವಾಗಿ ಎನ್‌ಪಿಎಸ್‌ಗೆ ಸೇರ್ಪಡೆಯಾಗಬಹುದಾಗಿದೆ.


Click it and Unblock the Notifications