For Quick Alerts
ALLOW NOTIFICATIONS  
For Daily Alerts

ಸರ್ಕಾರದಿಂದ 16 ಕೋಟಿ ಫಲಾನುಭವಿಗಳಿಗೆ 36,659 ಕೋಟಿ ರುಪಾಯಿ ವರ್ಗಾವಣೆ

|

ಕೊರೊನಾವೈರಸ್‌ ರಾಷ್ಟ್ರವ್ಯಾಪಿ ಲಾಕ್‌ಡೌನ್ ಅವಧಿಯಲ್ಲಿ 16.01 ಕೋಟಿ ಫಲಾನುಭವಿಗಳಿಗೆ 36,659 ಕೋಟಿ ನೀಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.

ಮಾರ್ಚ್‌ 24 ರಿಂದ ಏಪ್ರಿಲ್ 17ರವರೆಗೆ ಪ್ರಧಾನ ಮಂತ್ರಿ ಕಿಸಾನ್, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ, ಮಾತೃ ವಂದನಾ ಯೋಜನೆ, ರಾಷ್ಟ್ರೀಯ ಆರೋಗ್ಯ ಮಿಷನ್‌ನಂತಹ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಅವರ ಖಾತೆಗೆ ನೇರವಾಗಿ ಹಣ ವರ್ಗಾಯಿಸಲಾಗಿದೆ ಎಂದು ಸರ್ಕಾರ ಹೇಳಿದೆ.

ಸರ್ಕಾರದಿಂದ 16 ಕೋಟಿ ಫಲಾನುಭವಿಗಳಿಗೆ 36,659 ಕೋಟಿ ರುಪಾಯಿ ವರ್ಗಾವಣೆ

ರಾಜ್ಯ ಸರ್ಕಾರಗಳು 180 ಕಲ್ಯಾಣ ಯೋಜನೆಗಳ ಮೂಲಕ 9,217 ಕೋಟಿಯನ್ನು 4.50 ಕೋಟಿ ಫಲಾನುಭವಿಗಳಿಗೆ ವಿತರಿಸಲು ಪಿಎಫ್‌ಎಂಎಸ್(ಸಾರ್ವಜನಿಕ ಹಣಕಾಸು ನಿರ್ವಹಣಾ ವ್ಯವಸ್ಥೆ) ಅನ್ನು ಬಳಸಿಕೊಂಡಿವೆ. ಉತ್ತರ ಪ್ರದೇಶ (ಯುಪಿ), ಬಿಹಾರ, ಮಧ್ಯಪ್ರದೇಶ, ತ್ರಿಪುರ, ಮಹಾರಾಷ್ಟ್ರ ಮುಂತಾದ ಹಲವು ರಾಜ್ಯ ಸರ್ಕಾರಗಳು ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾಯಿಸಲು ಡಿಬಿಟಿಯನ್ನು ಬಳಸಿಕೊಂಡಿವೆ. ಇದರಲ್ಲಿ ಬಿಹಾರ ಶಿಕ್ಷಣ ಇಲಾಖೆಗೆ 1,884.66 ಕೋಟಿ, ಉತ್ತರ ಪ್ರದೇಶದ ರಾಷ್ಟ್ರೀಯ ವಿಧವೆ ಪಿಂಚಣಿ ಯೋಜನೆಯಡಿ 272.14 ಕೋಟಿ, ದೆಹಲಿಯ ಹಿರಿಯ ನಾಗರಿಕರಿಗೆ 433.61 ಕೋಟಿ ರುಪಾಯಿ ವರ್ಗಾವಣೆಯಾಗಿದೆ.

2018-19ರಲ್ಲಿ 22 ಪರ್ಸೆಂಟ್‌ರಷ್ಟಿದ್ದ ಡಿಬಿಟಿ ಪ್ರಮಾಣ 2019-20ರಲ್ಲಿ 45 ಪರ್ಸೆಂಟ್ ಏರಿಕೆಯಾಗಿದೆ.

English summary

Govt Transfers 36659 Crore Via DBT To 16 Crore Accounts

Central Government Transfers 36,659 Crore Via DBT To 16 Crore Accounts During 24 Mar to 17 Apr
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X