ಆಗಸ್ಟ್ ತಿಂಗಳ ಸರಕು ಹಾಗೂ ಸೇವಾ ತೆರಿಗೆ (GST) ಸಂಗ್ರಹವು 86,449 ಕೋಟಿ ರುಪಾಯಿ ಆಗಿದೆ ಎಂದು ಹಣಕಾಸು ಸಚಿವಾಲಯವು ಮಂಗಳವಾರ ಹೇಳಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 98,202 ಕೋಟಿ ಸಂಗ್ರಹ ಆಗಿತ್ತು. ಈ ಬಾರಿ ಅದಕ್ಕಿಂತ 12% ಆದಾಯ ಕಡಿಮೆ ಆಗಿದೆ. ಇನ್ನು 2020ರ ಜುಲೈಗೆ ಹೋಲಿಸಿದಲ್ಲಿ 1%ಗೂ ಹೆಚ್ಚು ಇಳಿಕೆ ಆಗಿದೆ.
ಒಟ್ಟಾರೆ ಮೊತ್ತದಲ್ಲಿ ಕೇಂದ್ರ ಜಿಎಸ್ ಟಿ 15,906 ಕೋಟಿ ರುಪಾಯಿ, ರಾಜ್ಯ ಜಿಎಸ್ ಟಿ 21,604 ಕೋಟಿ ರುಪಾಯಿ. ಸರಕು ಆಮದು ಮೇಲಿನ 19,179 ಕೋಟಿ ರುಪಾಯಿ ಸೇರಿದಂತೆ ಇಂಟಿಗ್ರೇಟೆಡ್ ಜಿಎಸ್ ಟಿ 42,264 ಕೋಟಿ ರುಪಾಯಿ ಆಗಿದೆ. ಆಗಸ್ಟ್ ತಿಂಗಳಲ್ಲಿ ಸಂಗ್ರಹವಾದ ಸೆಸ್ ಮೊತ್ತ 7215 ಕೋಟಿ ರುಪಾಯಿ. ಅದರಲ್ಲಿ ಸರಕು ಆಮದು ಮಾಡಿಕೊಂಡಿದ್ದರೆ ಮೇಲೆ ಸಂಗ್ರಹವಾದ 673 ಕೋಟಿ ಒಳಗೊಂಡಿದೆ.

ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಸಿದಲ್ಲಿ ಆಮದು ಮೇಲಿನ ಆದಾಯ 77% ಆದಲ್ಲಿ, ದೇಶೀಯ ವ್ಯವಹಾರದ ಮೇಲೆ ಆದಾಯ 92%. ಯಾವ ತೆರಿಗೆದಾರರ ವಹಿವಾಟು ಐದು ಕೋಟಿಗಿಂತ ಕಡಿಮೆ ಇದೆಯೋ ಅಂಥವರಿಗೆ ರಿಟರ್ನ್ಸ್ ಫೈಲ್ ಮಾಡುವುದಕ್ಕೆ ಸೆಪ್ಟೆಂಬರ್ ಕೊನೆ ತನಕ ಅವಕಾಶ ಇದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?



Click it and Unblock the Notifications