ಜಿಎಸ್ ಟಿ ಆದಾಯ ಸಂಗ್ರಹವು ಜನವರಿಯಲ್ಲಿ (ಡಿಸೆಂಬರ್ ನಲ್ಲಿನ ವಹಿವಾಟು) 1.2 ಲಕ್ಷ ಕೋಟಿ ರುಪಾಯಿ ಆಗಿದ್ದು, ಈ ವರೆಗಿನ ಅತಿ ಹೆಚ್ಚು ತಿಂಗಳ ಆದಾಯ ಸಂಗ್ರಹ ಇದಾಗಿದೆ ಎಂದು ಭಾನುವಾರ ಸರ್ಕಾರ ಹೇಳಿದೆ.
"ಕಳೆದ ಐದು ತಿಂಗಳಿನ ಜಿಎಸ್ ಟಿ ಆದಾಯದ ಸಂಗ್ರಹದ ಟ್ರೆಂಡ್ ನಂತೆ 2021 ಜನವರಿ ತಿಂಗಳ ಆದಾಯವು ಕಳೆದ ವರ್ಷದ ಇದೇ ಅವಧಿಗಿಂತ 8% ಹೆಚ್ಚಾಗಿದೆ. ಆಗ ಆದಾಯವು 1.1 ಲಕ್ಷ ಕೋಟಿ ರುಪಾಯಿಗಿಂತ ಹೆಚ್ಚಾಗಿತ್ತು," ಎಂದು ಸರ್ಕಾರ ತಿಳಿಸಿದೆ.
ಈ ತಿಂಗಳಲ್ಲಿ ರಫ್ತು- ಆಮದಿನಿಂದ ಬಂದ ಆದಾಯ 16% ಹೆಚ್ಚಿದೆ ಮತ್ತು ದೇಶೀ ವಹಿವಾಟಿನಿಂದ (ಆಮದು ಸೇವೆ ಒಳಗೊಂಡಂತೆ) ಬಂದ ಆದಾಯ ಕಳೆದ ವರ್ಷ ಇದೇ ಅವಧಿಯಲ್ಲಿ ಬಂದಿದ್ದಕ್ಕಿಂತ 6% ಹೆಚ್ಚಿದೆ.
ಸತತ ನಾಲ್ಕನೇ ತಿಂಗಳು ಜಿಎಸ್ ಟಿ ಆದಾಯ ಸಂಗ್ರಹವು ರು. 1 ಲಕ್ಷ ಕೋಟಿಯನ್ನು ದಾಟಿದೆ. ನಕಲಿ ಬಿಲ್ ಗಳ ಮೇಲೆ ನಿಗಾ ಇಟ್ಟಿದ್ದು, ದತ್ತಾಂಶಗಳನ್ನು ವಿವಿಧ ಮೂಲಗಳಿಂದ ವಿಶ್ಲೇಷಣೆ ಮಾಡಿದ್ದು, ಆದಾಯ ತೆರಿಗೆ ಮತ್ತು ಸುಂಕ ವ್ಯವಸ್ಥೆ ಹಾಗೂ ಪರಿಣಾಮಕಾರಿ ತೆರಿಗೆ ಆಡಳಿತ ನಿರ್ವಹಣೆ ಕೂಡ ಕಳೆದ ಕೆಲ ತಿಂಗಳಿಂದ ಸ್ಥಿರವಾದ ತೆರಿಗೆ ಆದಾಯ ಹೆಚ್ಚಳಕ್ಕೆ ಕಾರಣವಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಜಿಎಸ್ ಟಿ ಆದಾಯವು ಹಣಕಾಸು ವರ್ಷದ ಎರಡನೇ ಭಾಗದ ನಾಲ್ಕು ತಿಂಗಳಲ್ಲಿ ಜಿಎಸ್ ಟಿ ಆದಾಯ ಬೆಳವಣಿಗೆ 8% ಆಗಿದೆ. ವರ್ಷದ ಮೊದಲಾರ್ಧದಲ್ಲಿ 24% ಇಳಿಕೆ ಆಗಿತ್ತು.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications