ಕರ್ನಾಟಕ ರಾಜ್ಯದಲ್ಲಿ ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಶೇಕಡ 26ರಷ್ಟು ಏರಿಕೆಯಾಗಿದೆ. ಹಾಗೆಯೇ ರಾಜ್ಯದಲ್ಲಿ ತೆರಿಗೆ ಸಂಗ್ರಹವು ಶೇಕಡ 20ರಷ್ಟು ಏರಿಕೆಯಾಗಿದೆ ಎಂದು ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಫೆಬ್ರವರಿ 17ರಂದು ಕರ್ನಾಟಕ ಬಜೆಟ್ 2023-24 ಮಂಡನೆ ಆರಂಭಿಸಿದ್ದಾರೆ. ಬಜೆಟ್ ಮಂಡನೆ ವೇಳೆ ಜಿಎಸ್‌ಟಿ ಹಾಗೂ ತೆರಿಗೆ ಸಂಗ್ರಹದ ಬಗ್ಗೆ ಮುಖ್ಯಮಂತ್ರಿ ಮಾಹಿತಿ ನೀಡಿದ್ದಾರೆ.
Karnataka Budget 2023 Live: ಕರ್ನಾಟಕ ಬಜೆಟ್ 2023 ಲೈವ್
ರಾಜ್ಯದ ಹಣಕಾಸು ಪರಿಸ್ಥಿತಿ ಸದೃಢವಾಗಿದೆ. ತೆರಿಗೆ ಸಂಗ್ರಹವು ಅಧಿಕವಾಗಿದೆ. ಜಿಎಸ್‌ಟಿ ಸಂಗ್ರಹವು ಶೇಕಡ 26ರಷ್ಟು ಹೆಚ್ಚಳವಾಗಿದೆ. ತೆರಿಗೆ ಸಂಗ್ರಹ ಶೇಕಡ 20ರಷ್ಟು ಏರಿಕೆಯನ್ನು ಕಂಡಿದೆ. ಈ ವರ್ಷದ ಬಜೆಟ್ ಸರ್‌ಪ್ಲಸ್ ಬಜೆಟ್ ಆಗಿದೆ ಎಂದು ಹೇಳಲು ನಾನು ಸಂತಸ ಪಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ವಿವರಿಸಿದ್ದಾರೆ.

ಇನ್ನು ಮುದ್ರಣ ಹಾಗೂ ನೋಂದಣಿ ಶುಲ್ಕ ಸಂಗ್ರಹವೂ ಕೂಡಾ ಏರಿಕೆಯಾಗಿದೆ. 2023-24ನೇ ಸಾಲಿನಲ್ಲಿ ರಾಜ್ಯಕ್ಕೆ ಕೇಂದ್ರ ಸರ್ಕಾರವು ರಾಜ್ಯದ ತೆರಿಗೆ ಪಾಲನ್ನು ಅಧಿಕಗೊಳಿಸಿದೆ. ಇದು ರಾಜ್ಯದಲ್ಲಿ ಸುಸ್ಥಿರತೆಯನ್ನು ಕಾಯ್ದುಕೊಳ್ಳಲು ನಮಗೆ ಸಹಾಯಕವಾಗಿದೆ ಎಂದು ಮುಖ್ಯಮಂತ್ರಿ ಮಾಹಿತಿ ನೀಡಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಸರ್ಕಾರದ ಆರ್ಥಿಕ ಶಿಸ್ತಿನಲ್ಲಿ ಅಡೆತಡೆ ಉಂಟಾಗಿತ್ತು. ಆದರೆ ಈಗ ಪರಿಸ್ಥಿತಿ ಸುಧಾರಿಸಿದೆ. ಈ ವರ್ಷದ ಬಜೆಟ್ ರೆವೆನ್ಯೂ ಸರ್‌ಪ್ಲಸ್ ಬಜೆಟ್ ಆಗಿದೆ ಎಂದು ಹೇಳಿದ ಮುಖ್ಯಮಂತ್ರಿ ಬೇರೆ ಬೇರೆ ಕೃಷಿ ಯೋಜನೆಗಳಿಗೆ ಮಾಡಿದ ವೆಚ್ಚಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಏನಿದು ರೆವೆನ್ಯೂ ಸರ್‌ಪ್ಲಸ್ (Revenue surplus) ಬಜೆಟ್?
ವೆಚ್ಚಕ್ಕಿಂತ ಅಧಿಕ ಆದಾಯವಿದ್ದಾಗ ಸರ್‌ಪ್ಲಸ್ ಬಜೆಟ್ ಅನ್ನು ಲೆಕ್ಕಾಚಾರ ಮಾಡಲಾಗುತ್ತದೆ. ಸರ್‌ಪ್ಲಸ್ ಬಜೆಟ್ ಸಾಮಾನ್ಯವಾಗಿ ಸರ್ಕಾರದ ಹಣಕಾಸು ಸ್ಥಿತಿಯನ್ನು ತಿಳಿಸುತ್ತದೆ. ಸಾಮಾನ್ಯವಾಗಿ ಬಜೆಟ್ ಸರ್‌ಪ್ಲಸ್‌ಗಿಂತ "ಉಳಿತಾಯ" ಎಂಬ ಶಬ್ಧವನ್ನು ಬಳಸಲಾಗುತ್ತದೆ. ಸರ್ಕಾರವನ್ನು ಸರಿಯಾದ ರೀತಿಯಲ್ಲಿ ನಡೆಸಲಾಗಿದೆ ಎಂಬುವುದಕ್ಕೆ ಈ ಸರ್‌ಪ್ಲಸ್ ಬಜೆಟ್ ಸಾಕ್ಷಿಯಾಗುತ್ತದೆ.


Click it and Unblock the Notifications