GST: ಶೇ.7.3ರಷ್ಟು ಹೆಚ್ಚು ತೆರಿಗೆ.. 1.77 ಲಕ್ಷ ಕೋಟಿ ಜಿಎಸ್​ಟಿ ಸಂಗ್ರಹ.. ಇಲ್ಲಿದೆ ಮಾಹಿತಿ

ಉತ್ಪಾದಕ ವಸ್ತುಗಳ ಎಲ್ಲಾ ತೆರಿಗೆಯನ್ನು ಒಂದೇ ವ್ಯವಸ್ಥೆಯಡಿ ತರುವ ಸರಕು ಮತ್ತು ಸೇವಾ ತೆರಿಗೆಯು (ಜಿಎಸ್​ಟಿ) ದೇಶಾದ್ಯಂತ ಏಕರೂಪದ ತೆರಿಗೆ ಪದ್ಧತಿಯನ್ನು ಹೊಂದಿದೆ. ಜಿಎಸ್ಟಿ ದೇಶದ ಮೂಲ ಆದಾಯವೂ ಹೌದು,ದೇಶದಲ್ಲಿ ತೆರಿಗೆ ಸಂಗ್ರಹಗಳು ತಿಂಗಳಿಂದ ತಿಂಗಳಗೆ ಬದಲಾಗುತ್ತಲೇ ಇರುತ್ತವೆ. ಹಾಗಿದ್ರೆ, ವ‍ರ್ಷಾಂತ್ಯ ಡಿಸೆಂಬರ್ 2024ರಲ್ಲಿ ತೆರಿಗೆ ಸಂಗ್ರಹ ಎಷ್ಟಿದೆ? ಎಂಬ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

ಜನವರಿ 1ರಂದು ಅಧಿಕೃತವಾಗಿ ಬಿಡುಗಡೆಯಾದ ದತ್ತಾಂಶದ ಪ್ರಕಾರ ಡಿಸೆಂಬರ್ ತಿಂಗಳಲ್ಲಿ ಜಿಎಸ್​ಟಿ ಸಂಗ್ರಹ 1,76,857 ಕೋಟಿ ರೂ ಆಗಿದೆ. ಜ 2023ರ ಡಿಸೆಂಬರ್ ತಿಂಗಳಿಗೆ ಹೋಲಿಸಿದರೆ ತೆರಿಗೆ ಸಂಗ್ರಹದಲ್ಲಿ ಶೇ. 7.3ರಷ್ಟು ಹೆಚ್ಚಾಗಿದೆ. ಇನ್ನೂ 1,76,857 ಕೋಟಿ ರೂ ಒಟ್ಟು ಜಿಎಸ್​ಟಿ ಸಂಗ್ರಹದಲ್ಲಿ ಕೇಂದ್ರದ ಜಿಎಸ್​ಟಿ 32,836 ಕೋಟಿ ರೂ ಇದೆ. ರಾಜ್ಯ ಜಿಎಸ್​ಟಿ 40,499 ಕೋಟಿ ರೂ ಇದೆ. ಐಜಿಎಸ್​ಟಿ 47,783 ಕೋಟಿ ರೂ, ಹಾಗೂ ಸೆಸ್ 11,471 ಕೋಟಿ ರೂ ತೆರಿಗೆ ಸಂಗ್ರಹವಿದೆ.

GST: 1.77 ಲಕ್ಷ ಕೋಟಿ ಜಿಎಸ್​ಟಿ ಸಂಗ್ರಹ; ಯಾವ ತಿಂಗಳು ಎಷ್ಟು?

ಜಿಎಸ್​ಟಿ ರೀಫಂಡ್ ಗಳ ಪ್ರಮಾಣ ಹೆಚ್ಚಳ

ವರದಿ ಪ್ರಕಾರ ಡಿಸೆಂಬರ್ ತಿಂಗಳಲ್ಲಿ ರೀಫಂಡ್​ಗಳಾಗಿರುವ ಪ್ರಮಾಣ ಹೆಚ್ಚಿಗೆ ಇದೆ. 22,490 ಕೋಟಿ ರೂ ಮೊತ್ತದ ರೀಫಂಡ್​ಗಳಾಗಿವೆ. ಕಳೆದ ವರ್ಷದ ದತಾಂಶಗಳಿಗೆ ಹೋಲಿಕೆ ಮಾಡಿದ್ದರೆ,ಶೇ. 31ರಷ್ಟು ಹೆಚ್ಚು ರೀಫಂಡ್​ಗಳಾಗಿವೆ. ಇದನ್ನು ಕಳೆದು ಉಳಿದ ನಿವ್ವಳ ಜಿಎಸ್​ಟಿ 1.54 ಲಕ್ಷ ಕೋಟಿ ರೂ ಇದೆ. 2023ರ ಡಿಸೆಂಬರ್​ನಲ್ಲಿ ಆದುದಕ್ಕಿಂತ ಶೇ. 3.3ರಷ್ಟು ಹೆಚ್ಚು ನಿವ್ವಳ ಜಿಎಸ್​ಟಿ ಇದೆ.

ಆಂತರಿಕ ವಹಿವಾಟುಗಳ ಸಂಗ್ರಹ ಜಿಎಸ್​ಟಿ

2024ರ ಡಿಸೆಂಬರ್ ತಿಂಗಳಲ್ಲಿ ಆಂತರಿಕ ವಹಿವಾಟುಗಳ ಮೂಲಕ 1.32 ಲಕ್ಷ ಕೋಟಿ ಜಿಎಸ್​ಟಿ ಸಂಗ್ರಹವಾಗಿದೆ. ಹಿಂದಿನ ವರ್ಷದಕ್ಕಿಂತ ಇದರಲ್ಲಿ ಶೇ. 8.4ರಷ್ಟು ಹೆಚ್ಚಳವಾಗಿದೆ. ಆಮದುಗಳಿಂದ ಬಂದಿರುವ ತೆರಿಗೆ 44,268 ಕೋಟಿಯಷ್ಟು ಜಿಎಸ್​ಟಿ ಸಂಗ್ರಹವಾಗಿದೆ.

2024 ನವೆಂಬರ್​ನಲ್ಲಿ ಸಂಗ್ರಹವಾದ ಜಿಎಸ್​ಟಿ

ನವೆಂಬರ್​ 2024 ರಲ್ಲಿ 1. 82 ಲಕ್ಷ ಕೋಟಿ ರೂ ಜಿಎಸ್​ಟಿ ಬಂದಿತ್ತು. ಡಿಸೆಂಬರ್​ನಲ್ಲಿ ಜಿಎಸ್​ಟಿ ಸಂಗ್ರಹ ಕಡಿಮೆ ಆಗಿರುವುದು ಅನಿರೀಕ್ಷಿತವಲ್ಲ. ಕಳೆದ ಕ್ವಾರ್ಟರ್​ನಲ್ಲಿ ಜಿಡಿಪಿ ದರ ಕಡಿಮೆ ಆಗಿರುವುದು ಆರ್ಥಿಕ ಚಟುವಟಿಕೆ ಮಂದಗೊಂಡಿರುವ ಸಂಕೇತವಾಗಿದೆ. ಅದಕ್ಕೆ ಅನುಗುಣವಾಗಿ ಜಿಎಸ್​ಟಿ ಸಂಗ್ರಹ ಕೂಡ ಕಡಿಮೆಯಾಗಿದೆ. ಈ ಕ್ವಾರ್ಟರ್​ನಲ್ಲಿ ಜಿಡಿಪಿ ಹೆಚ್ಚು ಬೆಳವಣಿಗೆ ಹೊಂದುವ ಸಾಧ್ಯತೆ ಇರುವುದರಿಂದ ಮಾಸಿಕ ಜಿಎಸ್​ಟಿ ಸಂಗ್ರಹದಲ್ಲೂ ಹೆಚ್ಚಳವಾಗುವ ನಿರೀಕ್ಷೆ ಇದೆ ಎಂದು ತಜ್ಞರು ಹೇಳುತ್ತಾರೆ.

2024ರಲ್ಲಿ ಕೊನೆಯ ನಾಲ್ಕು ತಿಂಗಳ ಜಿಎಸ್​ಟಿ ಸಂಗ್ರಹದ ವಿವರದ ಪಟ್ಟಿ

  • ಸೆಪ್ಟೆಂಬರ್ ತಿಂಗಳ ಜಿಎಸ್​ಟಿ ಸಂಗ್ರಹ: 1,73,240 ಕೋಟಿ
  • ಅಕ್ಟೋಬರ್ ತಿಂಗಳ ಜಿಎಸ್​ಟಿ ಸಂಗ್ರಹ: 1,87,346 ಕೋಟಿ
  • ನವೆಂಬರ್ ತಿಂಗಳ ಜಿಎಸ್​ಟಿ ಸಂಗ್ರಹ: 1,82,269 ಕೋಟಿ
  • ಡಿಸೆಂಬರ್ ತಿಂಗಳ ಜಿಎಸ್​ಟಿ ಸಂಗ್ರಹ: 1,76,857 ಕೋಟಿ

ಪಾಪ್ ಕಾರ್ನ್‌ಗೂ GST: ನಿರ್ಮಲಾ ಸೀತಾರಾಮನ್ ಸಖತ್ ಟ್ರೋಲ್! ನೆಟ್ಟಿಗರ ಕಮೆಂಟ್ ನೋಡಿ

ಕೇಂದ್ರದ ಜಿಎಸ್‌ಟಿ ಸಂಗ್ರಹ 32,836 ಕೋಟಿ ರೂಪಾಯಿಯಾಗಳಷ್ಟು ಇದೆ. ಹಾಗೂ ರಾಜ್ಯ ಜಿಎಸ್‌ಟಿ 40,499 ಕೋಟಿ ರೂ., ಇಂಟಿಗ್ರೇಟೆಡ್ ಐಜಿಎಸ್‌ಟಿ ರೂ.47,783 ಕೋಟಿ ಮತ್ತು ಸೆಸ್ 11,471 ಕೋಟಿ ರೂ.ಗಳಷ್ಟಿದೆ ತೆರಿಗೆ ಸಂಗ್ರಹವಿದೆ ಎಂದು ಬುಧವಾರ ಬಿಡುಗಡೆಯಾದ ಸರ್ಕಾರದ ಅಂಕಿ-ಅಂಶಗಳು ತಿಳಿಸಿವೆ.

ಈ ಹಣಕಾಸು ವರ್ಷದಲ್ಲಿ ಇಲ್ಲಿಯವರೆಗೆ (ಏಪ್ರಿಲ್​ನಿಂದ ಡಿಸೆಂಬರ್) 16,33,569 ಕೋಟಿ ರೂ ಜಿಎಸ್​ಟಿ ಸಂಗ್ರಹವಾಗಿದೆ. ಕಳೆದ ವರ್ಷದಕ್ಕಿಂತ ಶೇ. 9.10ರಷ್ಟು ಹೆಚ್ಚು ತೆರಿಗೆ ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+