ಈ ಅಣಬೆಯ ಬೆಲೆ ಕೇಜಿಗೆ 30 ಸಾವಿರ: ಇದು ಯಾಕಿಷ್ಟು ದುಬಾರಿ ಗೊತ್ತಾ?

ದುಬಾರಿ ಆಹಾರ ಪದಾರ್ಥಗಳು ಎಂದಾಕ್ಷಣ ನಿಮ್ಮ ಕಣ್ಣ ಮುಂದೆ ಕೇಸರಿ, ಡಾರ್ಜಿಲಿಂಗ್ ಚಹಾ ಬರಬಹುದು. ಆದರೆ ಇದೊಂದು ಬಗೆಯ ಅಣಬೆ ಇದೆ. ಇದು ಹಿಮಾಲಯದಲ್ಲಿ ಬೆಳೆಯುತ್ತದೆ. ಒಳ್ಳೆ ಬೆಲೆ ಬಂದಾಗ ಮಾರಾಟಕ್ಕೆ ತರಲಾಗುತ್ತದೆ. ಗುಚ್ಚಿ ಎಂಬುದು ಒಂದು ಬಗೆಯ ಕಾಡು ಅಣಬೆ. ಹಿಮಾಲಯ ತಪ್ಪಲಿನ ಬುಡದಲ್ಲಿ ಬೆಳೆಯುತ್ತದೆ. ಇದು ಒಂದು ಕೇಜಿಗೆ 30 ಸಾವಿರ ರುಪಾಯಿ ಬಾಳುತ್ತದೆ. ಹಿಮಾಲಯದ ತಪ್ಪಲಿನಲ್ಲಿ ಮಾತ್ರ ಕಂಡುಬರುವ ಅಣಬೆ ಪ್ರಭೇದ ಇದು.

ಹಿಮಾಚಲ ಪ್ರದೇಶ, ಉತ್ತರಾಂಚಲ್, ಜಮ್ಮು- ಕಾಶ್ಮೀರದ ಭಾಗಗಳಲ್ಲಿ ಈ ಅಣಬೆಯನ್ನು ಕಾಣಬಹುದು. ಇದು ದೊರುಕುವುದು ಅಪರೂಪ ಆದ್ದರಿಂದ ಬೇಡಿಕೆ ಹೆಚ್ಚು. ಇನ್ನು ಆ ಬೇಡಿಕೆ ಕಾರಣಕ್ಕೆ ಬೆಲೆ ಕೂಡ ಹೆಚ್ಚು. ಬೇರೆ ಪ್ರಭೇದದ ಅಣಬೆ ರೀತಿಯಲ್ಲಿ ಇದನ್ನು ಬೆಳೆಯಲು ಸಾಧ್ಯವಿಲ್ಲ. ಕಾಡಿನಿಂದಲೇ ಸಂಗ್ರಹಿಸಬೇಕು.

ಕೇಜಿಗೆ ಇಪ್ಪತ್ತೈದರಿಂದ ಮೂವತ್ತು ಸಾವಿರ

ಕೇಜಿಗೆ ಇಪ್ಪತ್ತೈದರಿಂದ ಮೂವತ್ತು ಸಾವಿರ

ಮಾರುಕಟ್ಟೆಯಲ್ಲಿ ಇದರ ಬೆಲೆ ಕೇಜಿಗೆ ಇಪ್ಪತ್ತೈದರಿಂದ ಮೂವತ್ತು ಸಾವಿರ ರುಪಾಯಿ ಇದೆ. ಇದಕ್ಕೆ ವಿದೇಶಗಳಲ್ಲೂ ಬೇಡಿಕೆ ಹೆಚ್ಚು. ಕಾಂಗರಾ ಕಣಿವೆ, ಜಮ್ಮು- ಕಾಶ್ಮೀರ, ಮನಾಲಿ ಹಾಗೂ ಹಿಮಾಚಲ ಪ್ರದೇಶದ ಮತ್ತಿತರ ಭಾಗಗಗಳಲ್ಲಿ ಮಂಜು ಬೀಳುವ ಅವಧಿ ಮುಗಿದ ಮೇಲೆ ದೊರೆಯುತ್ತದೆ.

ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗೆ ಉತ್ತಮ ಪರಿಹಾರವಂತೆ

ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗೆ ಉತ್ತಮ ಪರಿಹಾರವಂತೆ

ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗೆ ಇದರಲ್ಲಿ ಔಷಧೀಯ ಗುಣ ಇದೆಯಂತೆ. ಜತೆಗೆ ದೇಹಕ್ಕೆ ಅಗತ್ಯವಾದ ಪೌಷ್ಟಿಕಾಂಶವನ್ನು ಸಹ ನೀಡುತ್ತದೆ. ಯುಎಸ್, ಫ್ರಾನ್ಸ್, ಯುರೋಪ್, ಸ್ವಿಟ್ಜರ್ಲೆಂಡ್ ಹಾಗೂ ಇಟಲಿಯ ಜನ ಇದನ್ನು ತಿನ್ನಲು ಬಯಸುತ್ತಾರೆ. ಈ ಅಣಬೆಯನ್ನು ಸಂಗ್ರಹಿಸುವವರು ತಮ್ಮ ಜೀವವನ್ನು ಪಣಕ್ಕಿಟ್ಟು ಎತ್ತರದ ಪ್ರದೇಶಕ್ಕೆ ತೆರಳಬೇಕಾಗುತ್ತದೆ.

ಬಿಸಿ ನೀರಿನಲ್ಲಿ ಚೆನ್ನಾಗಿ ತೊಳೆಯಬೇಕು

ಬಿಸಿ ನೀರಿನಲ್ಲಿ ಚೆನ್ನಾಗಿ ತೊಳೆಯಬೇಕು

ಇದನ್ನು ಸಂಗ್ರಹಿಸಿ, ಮಳೆಗಾಲದಲ್ಲಿ ಒಣಗಿಸಲಾಗುತ್ತದೆ. ಆ ನಂತರ ಬಳಸಲಾಗುತ್ತದೆ. ಈ ಗುಚ್ಚಿ ಅಣಬೆಯನ್ನು ಕನಿಷ್ಠ ಒಂದು ಗಂಟೆ ಕಾಲ ಬಿಸಿ ನೀರಲ್ಲಿ ತೊಳೆಯಬೇಕು. ಇದರೊಳಗಿನ ಕಸ ಮತ್ತು ಮರಳಿನ ವಸ್ತುಗಳು ತೆಗೆಯಲು ಅಷ್ಟು ಸಮಯ ತೆಗೆದುಕೊಳ್ಳುತ್ತದೆ. ಈ ಅಣಬೆ ಕುರಿತು ನಾನಾ ಮಿಥ್ಯೆಗಳಿವೆ. ಗುಡುಗು ಸಿಡಿಲು ಬಂದಾಗ ಇವು ಒಂದಕ್ಕೆ ಹಲವಾಗುತ್ತವೆ. ಕಾಳ್ಗಿಚ್ಚು ಇರುವೆಡೆ ಚೆನ್ನಾಗಿ ಬೆಳೆಯುತ್ತದೆ ಎಂದೆಲ್ಲ ಹೇಳಲಾಗುತ್ತದೆ. ಆದರೆ ಅವು ಯಾವುದೂ ಸಾಬೀತಾಗಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+