ಉತ್ತರ ಭಾರತದಲ್ಲಿ ಗುಟ್ಕಾ ನಿಷೇಧ: ರಾಜ್ಯದ ಅಡಿಕೆ ಬೆಳೆಗಾರರು ಕಂಗಾಲು

ಉತ್ತರ ಭಾರತದ ಹಲವು ರಾಜ್ಯಗಳು ಕೊರೊನಾವೈರಸ್ ಕಾರಣದಿಂದಾಗಿ ಗುಟ್ಕಾ, ಪಾನ್‌ಮಸಾಲ ಉತ್ಪಾದನೆ ಹಾಗೂ ಮಾರಾಟವನ್ನು ನಿಷೇಧಿಸಿದೆ. ಇದು ಅಡಿಕೆ ಮಾರುಕಟ್ಟೆಯನ್ನು ತಲ್ಲಣಗೊಳಿಸಿದ್ದು, ರಾಜ್ಯದ ಅಡಿಕೆ ಬೆಳೆಗಾರರನ್ನು ಕಂಗಾಲಾಗುವಂತೆ ಮಾಡಿದೆ.

ಗುಟ್ಕಾ ಹಾಕಿಕೊಳ್ಳುವ ಜನರು ಎಲ್ಲೆಂದರಲ್ಲಿ ಉಗುಳುವ ಪರಿಣಾಮ ಕೊರೊನಾವೈರಸ್ ವೇಗವಾಗಿ ಹರಡುವ ಸಾಧ್ಯತೆ ಇರುತ್ತದೆ. ಹೀಗಾಗಿ ತಾತ್ಕಾಲಿಕವಾಗಿ ಅಡಿಕೆ ಮಾರುಕಟ್ಟೆಯು ಸ್ಥಗಿತಗೊಂಡಿದೆ. 21 ದಿನಗಳ ಲಾಕ್‌ಡೌನ್ ಮುಗಿದ ಬಳಿಕ ಏಪ್ರಿಲ್ 14ರ ನಂತರ ಮತ್ತೆ ವ್ಯಾಪಾರ-ವಹಿವಾಟು ಆರಂಭಗೊಳ್ಳುವ ಸಾಧ್ಯತೆ ಇದೆ.

ಉತ್ತರ ಭಾರತದಲ್ಲಿ ಗುಟ್ಕಾ ನಿಷೇಧ: ರಾಜ್ಯದ ಅಡಿಕೆ ಬೆಳೆಗಾರರು ಕಂಗಾಲು

ರಾಜ್ಯದ ಅಡಿಕೆಗೆ ಉತ್ತರ ಭಾರತದ ರಾಜ್ಯಗಳೇ ಪ್ರಮುಖ ಮಾರುಕಟ್ಟೆಯಾಗಿದೆ. ದೇಶದಲ್ಲಿ 90 ಪರ್ಸೆಂಟ್‌ನಷ್ಟು ಗುಟ್ಕಾ, ಪಾನ್ ಮಸಾಲ ಕಾರ್ಖಾನೆಗಳು ಉತ್ತರ ಭಾರತದ ರಾಜ್ಯಗಳಲ್ಲಿವೆ. ಕೊರೊನಾ ಕಾರಣ ಉತ್ತರಪ್ರದೇಶ, ಹರಿಯಾಣ ಮೊದಲಾದ ರಾಜ್ಯಗಳು ದೀರ್ಘಾವಧಿಯವರೆಗೆ ನಿಷೇಧ ಹೇರಿವೆ.

ದೇಶದಲ್ಲಿ ಬೆಳೆಯುವ ಒಟ್ಟು ಅಡಿಕೆ ಉತ್ಪಾದನೆಯಲ್ಲಿ ರಾಜ್ಯದ ಪ್ರಮಾಣ 60 ಪರ್ಸೆಂಟ್. ಕರ್ನಾಟದಲ್ಲಿ ಪ್ರತಿವರ್ಷ ಸುಮಾರು 4 ಲಕ್ಷದಿಂದ 5 ಲಕ್ಷ ಅಡಿಕೆ ಉತ್ಪಾದನೆ ಮಾಡಲಾಗುತ್ತದೆ. ರಾಜ್ಯದಲ್ಲಿ ಬೆಳೆಯುವ 70 ಪರ್ಸೆಂಟ್ ಅಡಿಕೆಯನ್ನು ದಾವಣಗೆರೆ, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಬೆಳೆಯಲಾಗುತ್ತದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+