HAL ಉದ್ಯೋಗಿಗಳಿಂದ ಏಪ್ರಿಲ್ 20ರಿಂದ ಕೆಲಸ ಆರಂಭ: ಷರತ್ತು ಅನ್ವಯ

ಬೆಂಗಳೂರು ಮೂಲದ ರಕ್ಷಣಾ ಸಾರ್ವಜನಿಕ ಸಂಸ್ಥೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ ಎಎಲ್) ಏಪ್ರಿಲ್ 20ರಿಂದ ಮತ್ತೆ ಕಾರ್ಯಾರಂಭ ಮಾಡಲಿದೆ. ದೇಶದಾದ್ಯಂತ ಕೊರೊನಾ ವ್ಯಾಪಿಸಿದ್ದರಿಂದ ಮಾರ್ಚ್ 24ರಿಂದ ಕೆಲಸಗಳನ್ನು ನಿಲ್ಲಿಸಲಾಗಿತ್ತು. ಇನ್ನು ಗುತ್ತಿಗೆ ನೌಕರರು ಸೇರಿದಂತೆ ಬೆಂಗಳೂರು ಒಳಗೊಂಡ ದೇಶದ ವಿವಿಧ ಘಟಕದ ಸಿಬ್ಬಂದಿ ವಿಭಿನ್ನ ಪಾಳಿಗಳಲ್ಲಿ ಕೆಲಸ ಆರಂಭಿಸಲಿದ್ದಾರೆ.

ಇನ್ನೂ ಕೆಲ ದಿನ ಕಾರ್ಯ ನಿರ್ವಹಣೆ ನಿಲ್ಲಿಸಿದರೆ ದೇಶದ ಸೈನ್ಯ ಪಡೆಯ ಸಾಮರ್ಥ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂಬ ಕಾರಣಕ್ಕೆ ಈ ತೀರ್ಮಾನ ಮಾಡಲಾಗಿದೆ. ಏಪ್ರಿಲ್ 20ರಿಂದ ಮೇ 3ನೇ ತಾರೀಕಿನ ಮಧ್ಯೆ ಎಚ್ ಎಎಲ್ ಸಿಬ್ಬಂದಿ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸಿಜರ್ (ಎಸ್ ಒಪಿ) ಅನುಸರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಂಡು ಎರಡರಿಂದ ಮೂರು ಪಾಳಿಯಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಲಾಗಿದೆ.

HAL ಉದ್ಯೋಗಿಗಳಿಂದ ಏಪ್ರಿಲ್ 20ರಿಂದ ಕೆಲಸ ಆರಂಭ: ಷರತ್ತು ಅನ್ವಯ

ಪ್ರತಿ ಪಾಳಿಯು ಐದು ಗಂಟೆಯದಾಗಿರುತ್ತದೆ. ಎರಡು ಶಿಫ್ಟ್ ಮಧ್ಯೆ ಅರ್ಧ ಗಂಟೆಗಳ ಅಂತರ ಇರುತ್ತದೆ. ಈ ಅವಧಿಯಲ್ಲಿ ಕ್ಯಾಂಟೀನ್ ಸೌಕರ್ಯ ಇರುವುದಿಲ್ಲ. ಎಲ್ಲ ಸಿಬ್ಬಂದಿಗೂ ಗೇಟ್ ನಲ್ಲಿ ಕಡ್ಡಾಯವಾದ ಥರ್ಮಲ್ ಸ್ಕ್ರೀನಿಂಗ್ ಮಾಡಿಯೇ ಒಳಗೆ ಬಿಡಲಾಗುತ್ತದೆ. ಇನ್ನು ಮನೆಯಿಂದ ಕಚೇರಿಗೆ ಹಾಗೂ ಕಚೇರಿಯಿಂದ ಮನೆಗೆ ಸಿಬ್ಬಂದಿಯು ತಮ್ಮ ಸ್ವಂತ ವಾಹನವನ್ನೇ ಬಳಸಲು ಸೂಚಿಸಲಾಗಿದೆ.

ಯಾರು ಪಟ್ಟಣದಿಂದ ಹೊರಭಾಗದಲ್ಲಿ ಇರುತ್ತಾರೋ ಹಾಗೂ ಆಯಾ ರಾಜ್ಯ ಸರ್ಕಾರವು ಹಾಟ್ ಸ್ಪಾಟ್ ಎಂದು ಗುರುತಿಸಿದ ಸ್ಥಳಗಳಲ್ಲಿ ಇರುತ್ತಾರೋ ಅಂಥವರಿಗೆ ಕೆಲಸಕ್ಕೆ ಬರುವುದರಿಂದ ವಿನಾಯಿತಿ ನೀಡಲಾಗುವುದು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+