ವಿಶ್ವವಿಖ್ಯಾತ ಈ ಕಂಪೆನಿಯಲ್ಲಿ ಶೇ 50ರಷ್ಟು ಮ್ಯಾನೇಜರ್ ಗಳು ಮಹಿಳೆಯರು

ಡೌವ್, ಫೇರ್ ಅಂಡ್ ಲವ್ಲಿ, ಲೈಫ್ ಬಾಯ್, ಲಕ್ಸ್, ಲಿಪ್ಟನ್ ಮತ್ತು ಕಾರ್ನೆಟ್ಟೊದಂಥ ಬ್ರ್ಯಾಂಡ್ ಗಳ ಹಿಂದಿರುವ ಕಂಪೆನಿ ಯುನಿಲಿವರ್. ಯು.ಕೆ. ಮೂಲದ ಈ ಕಂಪೆನಿ ಈಗ ಜಾಗತಿಕ ಮಟ್ಟದಲ್ಲಿ ಮ್ಯಾನೇಜ್ ಮೆಂಟ್ ಹಂತದಲ್ಲಿ ಲಿಂಗ ಸಮಾನತೆಯಲ್ಲಿ ಮಹತ್ವದ ಮೈಲುಗಲ್ಲು ದಾಖಲಿಸಿದೆ.

ಹೀಗೆ ಯುನಿಲಿವರ್ ಅಂದುಕೊಂಡಿದ್ದ ಗುರಿಯನ್ನು ಒಂದು ವರ್ಷದ ಮುಂಚೆಯೇ ಮುಟ್ಟಿದ್ದು, ಜಾಗತಿಕ ಮಟ್ಟದಲ್ಲಿ ಮ್ಯಾನೇಜ್ ಮೆಂಟ್ ಹುದ್ದೆಗಳಲ್ಲಿ ಅರ್ಧದಷ್ಟನ್ನು ಮಹಿಳೆಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಮಂಗಳವಾರ ಈ ಬಗ್ಗೆ ಕಂಪೆನಿ ಹೇಳಿಕೆಯೊಂದನ್ನು ನೀಡಿದೆ. ಕಂಪೆನಿಯ 14 ಸಾವಿರ ಮ್ಯಾನೇಜರ್ ಗಳಲ್ಲಿ ಅರ್ಧದಷ್ಟು ಮಹಿಳೆಯರೇ ಇದ್ದಾರೆ ಎಂದು ಹೇಳಿಕೊಂಡಿದೆ.

2010ರಲ್ಲಿ ಈ ಪ್ರಮಾಣ ಶೇಕಡಾ 38ರಷ್ಟಿತ್ತು. ಹಣಕಾಸು ವಿಭಾಗದಲ್ಲಿ ಕೂಡ ಮಹಿಳೆಯರ ಪ್ರಾತಿನಿಧ್ಯ ಐತಿಹಾಸಿಕವಾಗಿ ಕಡಿಮೆ ಮಟ್ಟದಲ್ಲಿತ್ತು. ಆದರೆ ಕಂಪೆನಿ 50ರಷ್ಟು ಮಹಿಳಾ ಮ್ಯಾನೇಜರ್ ಗಳ ನೇಮಕ ಮಾಡಿದೆ. ಯುನಿಲಿವರ್ ನ ಆಡಳಿತಮಂಡಳಿಯಲ್ಲಿ ಶೇಕಡಾ ಐವತ್ತರಷ್ಟು ಮಹಿಳೆಯರಿದ್ದಾರೆ.

ವಿಶ್ವವಿಖ್ಯಾತ ಈ ಕಂಪೆನಿಯಲ್ಲಿ ಶೇ 50ರಷ್ಟು ಮ್ಯಾನೇಜರ್ ಗಳು ಮಹಿಳೆಯರು

"ನಮ್ಮ ವಸ್ತುಗಳನ್ನು ಖರೀದಿಸುವುದರಲ್ಲಿ ಮಹಿಳೆಯರೇ ಹೆಚ್ಚು. ಮತ್ತು ನಮ್ಮ ಯಶಸ್ಸಿಗೆ ಬಹುತೇಕ ಅವರೇ ಕಾರಣರು" ಎಂದಿದ್ದಾರೆ ಯುನಿಲಿವರ್ ನ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥೆ ಲೀನಾ ನಾಯರ್. 2025ರ ಹೊತ್ತಿಗೆ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಹ ಕಡಿಮೆ ಮಾಡುವ ಉದ್ದೇಶವನ್ನು ಕಂಪೆನಿ ಹೊಂದಿದೆ. 1 ಲಕ್ಷ ಟನ್ ನಷ್ಟು ಪ್ಲಾಸ್ಟಿಂಗ್ ತ್ಯಾಜ್ಯ ನಿವಾರಿಸುವುದಾಗಿ ಹೇಳಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+