ಕೇಂದ್ರ ಸರ್ಕಾರವು ದೇಶದಲ್ಲಿ ಮಾರಾಟವಾಗುವ ಎಲ್ಲಾ ಚಿನ್ನಾಭರಣಗಳಿಗೆ 2021ರಿಂದ ಹಾಲ್‌ಮಾರ್ಕ್ ಕಡ್ಡಾಯಗೊಳಿಸಿದೆ. 2021 ಜನವರಿ 15ರಿಂದ ಚಿನ್ನದ ಆಭರಣಗಳು ಮತ್ತು ಕಲಾಕೃತಿಗಳಿಗೆ ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್ (ಬಿಐಎಸ್) ಹಾಲ್‌ಮಾರ್ಕ್ ಕಡ್ಡಾಯವಾಗಲಿದೆ.
ಚಿನ್ನಾಭರಣ ಶುದ್ಧತೆ ಬಗ್ಗೆ ತಲೆಕೆಡಿಸಿಕೊಳ್ಳುವ ಗ್ರಾಹಕರಿಗೆ ಇದು ನೆಮ್ಮದಿ ತರುವ ವಿಚಾರವಾಗಿದೆ. ಗ್ರಾಹಕರು ತಾವು ಖರೀದಿಸುವ ಚಿನ್ನಾಭರಣ ಶುದ್ಧತೆಯ ಪ್ರಮಾಣವು ಹಾಲ್‌ಮಾರ್ಕ್‌ನಿಂದ ಖಚಿತವಾಗಲಿದೆ. ಚಿನ್ನಾಭರಣ ಮಾರಾಟಗಾರರು ಮತ್ತು ಚಿಲ್ಲರೆ ವ್ಯಾಪಾರಿಗಳು ಭಾರತೀಯ ಮಾನದಂಡ ಅಡಿಯಲ್ಲಿ (ಬಿಐಎಎಸ್) ನೋಂದಾಯಿಸಿಕೊಳ್ಳಬೇಕು. ಹಾಲ್‌ಮಾರ್ಕ್ ಇರುವ ಚಿನ್ನವನ್ನು ಮಾತ್ರ ಮಾರಾಟ ಮಾಡಬೇಕು ಇಲ್ಲದೆ ಹೋದಲ್ಲಿ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ತಿಳಿಸಿದ್ದಾರೆ.

ಈ ಅಧಿಸೂಚನೆಯನ್ನು ಹಂತ ಹಂತವಾಗಿ ಜಾರಿಗೆ ತರಲಿದ್ದು, ಮೆಟ್ರೋ ನಗರಗಳಿಂದ ಪ್ರಾರಂಭಿಸಿ ನಾಲ್ಕು ಹಂತಗಳಲ್ಲಿ ಚಿನ್ನದ ಹಾಲ್‌ಮಾರ್ಕ್ ಅನ್ನು ಜಾರಿಗೆ ತರಲು ಸರ್ಕಾರ ಯೋಜಿಸಿದೆ. ಹಾಲ್‌ಮಾರ್ಕ್ ಅಧಿಸೂಚನೆಯನ್ನು ಉಲ್ಲಂಘಿಸಿದರೆ ಕನಿಷ್ಠ 1 ಲಕ್ಷ ರುಪಾಯಿಗಳಿಂದ ಗರಿಷ್ಠ ಚಿನ್ನದ ಮೌಲ್ಯದ 5 ಪಟ್ಟು ಮತ್ತು ಒಂದು ವರ್ಷ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ ಎಂದು ಬಿಐಎಸ್ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
2016ರ ಬಿಐಎಸ್ ಕಾಯ್ದೆ ಪ್ರಕಾರ ಆಭರಣಕಾರರು 14 ಕ್ಯಾರೆಟ್, 18 ಕ್ಯಾರೆಟ್ ಮತ್ತು 22 ಕ್ಯಾರೆಟ್ ಎಂಬ ಮೂರು ಅಳತೆಗಳ ಅಡಿಯಲ್ಲಿ ಚಿನ್ನವನ್ನು ಗುರುತಿಸಬೇಕಾಗಿದೆ. ಕ್ಯಾರೆಟ್ ಎನ್ನುವುದು ಚಿನ್ನದ ಪ್ರಮಾಣವನ್ನು 24 ಭಾಗಗಳಲ್ಲಿ ಮಿಶ್ರಲೋಹದಲ್ಲಿ ಸೂಚಿಸುವ ಅಳತೆಯಾಗಿದೆ. ಆದ್ದರಿಂದ 18 ಕ್ಯಾರೆಟ್ ಚಿನ್ನವು 18/24 ಭಾಗಗಳ ಚಿನ್ನವಾಗಿದೆ.
ಪ್ರಸ್ತುತ ದೇಶಾದ್ಯಂತ ಕೇವಲ 26,019 ಆಭರಣ ವ್ಯಾಪಾರಿಗಳು ಬಿಎಸ್ಐನಲ್ಲಿ ನೋಂದಾಯಿಸಿಕೊಂಡಿದ್ದಾರೆ. ಸದ್ಯ ಬಳಕೆಯಲ್ಲಿರುವ ಚಿನ್ನಾಭರಣಗಳಲ್ಲಿ ಶೇಕಡಾ 40ರಷ್ಟು ಹಾಲ್‌ಮಾರ್ಕ್ ಒಳಗೊಂಡಿವೆ.
More From GoodReturns

ICC T20 World Cup: ವಿಶ್ವಕಪ್ ಗೆದ್ದ ಭಾರತಕ್ಕೆ ಬಿಸಿಸಿಐನಿಂದ ಗುಡ್ ನ್ಯೂಸ್; 131 ಕೋಟಿ ಬಹುಮಾನ ಘೋಷಣೆ

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications