ಇತ್ತೀಚೆಗೆ ಮಲೇಷ್ಯಾದ 14 ವರ್ಷದ ಬಾಲಕ ಹಾಜಿಕ್ ನಸ್ರಿ ಸೋಷಿಯಲ್ ಮೀಡಿಯಾದಲ್ಲಿ ಬಹಳ ಸದ್ದು ಮಾಡುತ್ತಿದ್ದಾನೆ. ಈತ ಪ್ರೌಢ ವಯಸ್ಸಿಗೆ ಬರುವ ಮುನ್ನವೇ ಕೋಟ್ಯಾಧಿಪತಿ ಪಟ್ಟ ಕಟ್ಟಿಕೊಂಡವ. ಲಂಬೋರ್ಗಿನಿ, ರೇಂಜ್ ರೋವರ್ ಸೇರಿದಂತೆ ಹಲವಾರು ದುಬಾರಿ ಕಾರುಗಳು ತನ್ನ ಬಳಿ ಇವೆ ಎಂದು ಈತ ಸೋಷಿಯಲ್ ಮೀಡಿಯಾದಲ್ಲಿ ತೋರಿಸಿ ತೋರಿಸಿ ನೋಡುಗರ ಗಮನ ಸೆಳೆಯುವ ಕೆಲಸ ಮಾಡುತ್ತಿರುತ್ತಾನೆ.
ಬಿಟ್‌ಕಾಯಿನ್ ಸೇರಿದಂತೆ ಹಲವು ಕ್ರಿಪ್ಟೋಕರೆನ್ಸಿಗಳ ಬೂಮ್ ಇದ್ದ ಕಾಲದಲ್ಲಿ ಹಲವಾರು ಮಂದಿ ದಿಢೀರ್ ಶ್ರೀಮಂತಿಕೆ ಪಡೆದಿದ್ದರು. ಅಂಥವರಲ್ಲಿ ಈ 14 ವರ್ಷದ ಬಾಲಕನೂ ಒಬ್ಬ ಎಂದು ಹೇಳಲಾಗುತ್ತಿದೆ. ಡೈಲಿ ಸ್ಟಾರ್ ಪತ್ರಿಕೆಯ ವರದಿ ಪ್ರಕಾರ, ಮಲೇಷ್ಯಾ ಪ್ರಜೆ ಹಾಜಿಕ್ ನಸ್ರಿ ಕ್ರಿಪ್ಟೋ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ, ಅದರಿಂದ ಬಹಳಷ್ಟು ಲಾಭ ಮಾಡಿಕೊಂಡಿದ್ದಾನಂತೆ.
ಕ್ರಿಪ್ಟೋಕರೆನ್ಸಿ ಎರಡು ವರ್ಷಗಳ ಮುಂಚಿನವರೆಗೂ ಬಹಳ ಉಬ್ಬಿ ನಿಂತಿದ್ದು ಹೌದು. ಎಲ್ಲೋ ಯಾವಾಗಲೋ ಬಿಟ್‌ಕಾಯಿನ್ ತೆಗೆದಿಟ್ಟುಕೊಂಡಿದ್ದವರು ರಾತ್ರೋರಾತ್ರಿ ಕೋಟ್ಯಾಧಿಪತಿಗಳಾಗಿ ಹೋಗಿದ್ದು ಹೌದು. ಆದರೆ, ಇತ್ತೀಚಿನ ಒಂದೆರಡು ವರ್ಷದಿಂದ ಕ್ರಿಪ್ಟೋ ಮಾರುಕಟ್ಟೆ ಅಲುಗಾಡುತ್ತಿದೆ. ದಿಢೀರ್ ಶ್ರೀಮಂತರಾದವರು ರಾತ್ರೋರಾತ್ರಿ ಎಲ್ಲವನ್ನೂ ಕಳೆದುಕೊಂಡಿದ್ದೂ ಆಗಿದೆ. ದೊಡ್ಡ ಬಲೂನಿನಂತೆ ಊದಿಕೊಂಡಿದ್ದ ಕ್ರಿಪ್ಟೋ ಜಗತ್ತು ಠುಸ್ ಎಂದು ಒಡೆದುಹೋಗಿರುವುದು ನಿಜ. ಇಂಥ ಸಂದರ್ಭದಲ್ಲಿ 14 ವರ್ಷದ ಹಾಜಿಕ್ ನಸ್ರಿ ಕ್ರಿಪ್ಟೋ ಮಾರುಕಟ್ಟೆಯಿಂದ ಕೋಟಿ ಕೋಟಿ ಹಣ ಮಾಡಿಕೊಂಡ ಕಥೆ ಕೇಳಲು ಸೋಜಿಗ ಎನಿಸುತ್ತದೆ.

ಅಪ್ಪನ ಅಸ್ತಿ ತೋರಿಸುತ್ತಿದ್ದಾನಾ ಪೋರ?
14 ವರ್ಷದ ಹಾಜಿಕ್ ನಸ್ರಿಗೆ ಸೋಷಿಯಲ್ ಮೀಡಿಯಾದಲ್ಲಿ 44 ಸಾವಿರಕ್ಕೂ ಹೆಚ್ಚು ಫಾಲೋಯರ್ಸ್ ಇದ್ದಾರೆ. ಅದರಲ್ಲಿ ತನ್ನ ದುಬಾರಿ ಕಾರುಗಳು ಮತ್ತಿತರ ವಸ್ತುಗಳ ಫೋಟೋ, ವಿಡಿಯೋ ಹಾಕುತ್ತಾ ತಾನು ಕ್ರಿಪ್ಟೋದಿಂದ ಗಳಿಸಿದ ಆಸ್ತಿಗಳಿವು ಎಂದು ಜಂಬ ಕೊಚ್ಚಿಕೊಳ್ಳುತ್ತಿರುತ್ತಾನೆ.
ಆದರೆ, ಹಾಜಿಕ್ ನಸ್ರಿ ತನ್ನ ಅಪ್ಪನ ಆಸ್ತಿಗಳನ್ನು ತನ್ನವೇ ಎಂದು ತೋರಿಸಿಕೊಳ್ಳುತ್ತಾ ಸುದ್ದಿ ಮಾಡುತ್ತಿದ್ದಾನೆ ಎಂದು ಟಿಕ್ ಟಾಕ್ ಸೋಷಿಯಲ್ ಮೀಡಿಯಾದಲ್ಲೇ ಕೆಲವರು ಲೇವಡಿ ಮಾಡುತ್ತಿರುವುದುಂಟು. ಈ ವಾದ ಸುಳ್ಳು ಎಂದು ತಳ್ಳಿಹಾಕಲು ಸಾಧ್ಯವಿಲ್ಲ.
ಹಾಜಿಕ್ ನಸ್ರಿ ಬಹಳ ಸಣ್ಣ ವಯಸ್ಸಿಗೇ ಕ್ರಿಪ್ಟೋ ವ್ಯವಹಾರಕ್ಕೆ ಧುಮುಕಿದಂತೆ ಕಾಣುತ್ತದೆ. ಕೇವಲ 10 ವರ್ಷ ವಯಸ್ಸಿನಲ್ಲಿ ನಸ್ರಿ ತನ್ನ ಮೊದಲ ವಾಹನ ಖರೀದಿಸಿದ್ದನಂತೆ. ಟೊಯೋಟಾ ಐಕ್ಯೂ ಕಾರು ತಾನು ಕ್ರಿಪ್ಟೋ ಹಣದಿಂದ ಕೊಂಡಿದ್ದು ಎಂದು ಈತ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾನೆ.
ಇನ್ನು, 12 ವರ್ಷದ ವಯಸ್ಸಿನಲ್ಲಿ ರೇಂಜ್ ರೋವರ್ ಸ್ಪೋರ್ಟ್ ಆಟೊಬಯೋಗ್ರಫಿ ಕಾರನ್ನು ಖರೀದಿ ಮಾಡಿದ್ದಾನೆ. ಈ ಕಾರಿನ ಬೆಲೆ 1.8 ಕೋಟಿ ರೂ. ಹಾಗೆಯೇ, ಲಂಬೋರ್ಗಿನಿ ಆವೆಂಟಡೋರ್, ಫೆರಾರಿ ಎಫ್‌ಎಫ್ ಮೊದಲಾದ ಕಾರುಗಳು ಈತನ ಬಳಿ ಇವೆಯಂತೆ.
ನಾಲ್ಕು ವರ್ಷಗಳ ಅಂತರದಲ್ಲಿ ತಾನು ಈ ಎಲ್ಲಾ ಕಾರುಗಳನ್ನು ಖರೀದಿ ಮಾಡಿದ್ದಾಗಿ ಈತ ವಿಡಿಯೋಗಳಲ್ಲಿ ತಿಳಿಸಿದ್ದಾನೆ. ಸದ್ಯಕ್ಕೆ ಈತ ಶೆವ್ರೋಲೆ ಕೆಮರೋ ಕಾರು ಕೊಳ್ಳುತ್ತಿರುವುದಾಗಿ ಹೇಳಿದ್ದಾನೆ. ಇವೆಲ್ಲವೂ 1-3 ಕೋಟಿ ರೂ ಬೆಲೆ ಬಾಳುವಂಥವು.
14 ವರ್ಷದ ಹಾಜಿಕ್ ನಸ್ರಿ ಅಷ್ಟು ಸಣ್ಣ ವಯಸ್ಸಿನಲ್ಲಿ ಕಾರು ಡ್ರೈವ್ ಮಾಡುವಂತಿಲ್ಲ. ಡ್ರೈವಿಂಗ್ ಲೈಸೆನ್ಸ್ ಸಿಗುವುದಿಲ್ಲ. ಆದರೂ ಕಾರಿನ ಕಲೆಕ್ಷನ್ಸ್ ತೋರಿಸುತ್ತಿದ್ದಾನೆ. ಪೊಲೀಸರು ಈತನ ಮೇಲೆ ಕೇಸ್ ಹಾಕಿದರೆ ಆಶ್ಚರ್ಯ ಇಲ್ಲ.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications