ಎಚ್‌ಸಿಎಲ್ ಗ್ರೂಪ್ ಔಟ್‌ಸೋರ್ಸ್‌ಡ್ ಸೆಮಿಕಂಡಕ್ಟರ್ ಅಸೆಂಬ್ಲಿ ಆಂಡ್ ಟೆಸ್ಟ್ (ಒಎಸ್‌ಎಟಿ) ಸೌಲಭ್ಯವನ್ನು ಸ್ಥಾಪಿಸುವ ಯೋಜನೆಯನ್ನು ತನ್ನ ಮುಷ್ಟಿಗೆ ಪಡೆಯಲು ಸಜ್ಜಾಗಿದೆ. ಅಂದರೆ ಎಚ್‌ಸಿಎಲ್ ಕರ್ನಾಟಕದಲ್ಲಿ ಚಿಪ್ ಪ್ಯಾಕೇಜಿಂಗ್ ಘಟಕವನ್ನು ಆರಂಭಿಸಲು ಮುಂದಾಗುತ್ತಿದೆ ಎಂದು ವರದಿಯಾಗಿದೆ.
ಈ ಸೌಲಭ್ಯವು ಸುಮಾರು 400 ಮಿಲಿಯನ್ ಡಾಲರ್ ಹೂಡಿಕೆಯದ್ದಾಗಿದ್ದು, ಸಣ್ಣದಿಂದ ಮಧ್ಯಮ ಗಾತ್ರದ ಬಂಡವಾಳದ ಸೌಲಭ್ಯ ಇದಾಗಲಿದೆ. 12.6 ಬಿಲಿಯನ್ ಡಾಲರ್ ಐಟಿ ಆರ್ಮ್ ಎಚ್‌ಸಿಎಲ್‌ಟೆಕ್‌ಗೆ ಹೆಸರುವಾಸಿಯಾದ ಗ್ರೂಪ್ ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದೊಂದಿಗೆ ಸಕ್ರಿಯ ಮಾತುಕತೆ ನಡೆಸುತ್ತಿದೆ.

ಈ ಚಿಪ್ ಘಟಕಗಳು ಬೆಂಗಳೂರು ಮತ್ತು ಮೈಸೂರಿನಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರುವ ನಿರೀಕ್ಷೆಯಿದೆ. ಈ ಯೋಜನೆಯ ಬಗ್ಗೆ, ಕರ್ನಾಟಕದಲ್ಲಿ ಚಿಪ್ ಘಟಕಕ್ಕೆ ಇತರೆ ಸಂಸ್ತೆಗಳ ಹೂಡಿಕೆಯ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...
ಹೆಚ್ಚಿನ ಮಾತುಕತೆಗೆ ರಾಜ್ಯ ಸಿದ್ಧ
ನದಿ ತೀರದ ಜಿಲ್ಲೆಯಲ್ಲಿ ನೀರಿನ ಲಭ್ಯತೆ ಇರುವ ಕಾರಣದಿಂದಾಗಿ ಫ್ಯಾಬ್ ತಯಾರಿಕೆಗೆ ಮತ್ತು ಒಎಸ್‌ಎಟಿಗೆ ಮೈಸೂರು ಸೂಕ್ತವಾಗಿದೆ ಎಂದು ಮಾತುಕತೆ ನಡೆಸಲಾಗುತ್ತಿದೆ ಎಂದು ವರದಿ ಉಲ್ಲೇಖಿಸಿದೆ. ರಾಜ್ಯ ಸರ್ಕಾರವು ಸೌಲಭ್ಯ ನಿರ್ಮಾಣಕ್ಕಾಗಿ ಪ್ರೋತ್ಸಾಹವನ್ನು ಕೂಡಾ ನೀಡುತ್ತಾ ಬರುತ್ತಿದೆ.
"ಹೂಡಿಕೆದಾರರು ಕೆಲವು ಒಪ್ಪಂದಗಳನ್ನು ಬಯಸಿದರೆ ಪ್ರೋತ್ಸಾಹಕಗಳ ಕುರಿತು ಹೆಚ್ಚಿನ ಚರ್ಚೆಗಳಿಗೆ ಸರ್ಕಾರವು ಎಂದಿಗೂ ಮುಕ್ತವಾಗಿರುತ್ತದೆ," ಎಂದು ಅಧಿಕಾರಿಗಳ ಹೇಳಿಕೆ ಉಲ್ಲೇಖಿಸಿ ವರದಿಯಾಗಿದೆ. ಈ ಮಾತುಕತೆಯು ಯಶಸ್ವಿಯಾದರೆ ಎಚ್‌ಸಿಎಲ್ ಮೈಕ್ರಾನ್, ಟಾಟಾ ಗ್ರೂಪ್, ಮುರುಗಪ್ಪ ಗ್ರೂಪ್ ಮತ್ತು ಕೇನ್ಸ್ ಟೆಕ್ನಾಲಜಿಯಂತೆ ಕರ್ನಾಟಕದಲ್ಲಿ ಹೂಡಿಕೆ ಮಾಡುವ ಸಂಸ್ಥೆಗಳಿಗೆ ಸೇರುತ್ತದೆ. ಇವೆಲ್ಲವೂ ಇತ್ತೀಚೆಗೆ ಚಿಪ್ ಓಎಸ್ಎಟಿ ಮತ್ತು ಎಟಿಎಂಪಿಗೆ ಎಂಟ್ರಿ ನೀಡಿದೆ.
"ಎಚ್‌ಸಿಎಲ್ ಗ್ರೂಪ್ ಕಾಲಕಾಲಕ್ಕೆ ಹೂಡಿಕೆ ಅವಕಾಶಗಳನ್ನು ಸ್ವೀಕರಿಸುತ್ತದೆ ಮತ್ತು ಮೌಲ್ಯಮಾಪನ ಮಾಡುತ್ತದೆ. ಅರ್ಥಪೂರ್ಣ ಪ್ರಗತಿಯ ಆಧಾರದ ಮೇಲೆ ನಾವು ಇವುಗಳನ್ನು ಸೂಕ್ತ ಸಮಯದಲ್ಲಿ ವರದಿ ಮಾಡುತ್ತೇವೆ," ಎಂದು ಎಚ್‌ಸಿಎಲ್ ಗ್ರೂಪ್ ವಕ್ತಾರರು ಇಕಾನಮಿಕ್ ಟೈಮ್ಸ್‌ನ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದರು.
ಜುಲೈನಲ್ಲಿ ಎಚ್‌ಸಿಎಲ್ ಗ್ರೂಪ್ ಚಿಪ್ ಅಸೆಂಬ್ಲಿ ಘಟಕವನ್ನು ಸ್ಥಾಪಿಸಲು 300 ಮಿಲಿಯನ್ ಡಾಲರ್ ಪ್ರಸ್ತಾವನೆಯನ್ನು ಸಿದ್ಧಪಡಿಸುತ್ತಿದೆ ಎಂದು ಇಟಿ ವರದಿಯಾಗಿತ್ತು. ಗ್ರೂಪ್ ಈಗ ಸ್ವಲ್ಪ ಸಮಯದವರೆಗೆ ಸೆಮಿಕಂಡಕ್ಟರ್ ಜಾಗಕ್ಕೆ ಪ್ರವೇಶಿಸುವ ಮಹತ್ವಾಕಾಂಕ್ಷೆಗಳನ್ನು ಹೊಂದಿದೆ.
ಕರ್ನಾಟಕದಲ್ಲಿ ಕೇನ್ಸ್ ಹೂಡಿಕೆ
ಕೇನ್ಸ್ ಟೆಕ್ನಾಲಜಿಯ ಶೇಕಡ 100 ರಷ್ಟು ಸಂಪೂರ್ಣ ಪಾಲುದಾರಿಕೆಯ ಅಂಗಸಂಸ್ಥೆಯಾದ ಕೇನ್ಸ್ ಸೆಮಿಕಾನ್ ಬೇರೆ ಬೇರೆ ರಾಜ್ಯಗಳಲ್ಲಿ ಹೂಡಿಕೆ ಮಾಡುತ್ತಿದೆ. ಕರ್ನಾಟಕದಲ್ಲಿಯೂ ಹೂಡಿಕೆಗೆ ಮುಂದಾಗಿದ್ದು, ಮೈಸೂರಿನ ಚಿಪ್ ಯುನಿಟ್ ಮೇಲೆ ಹೂಡಿಕೆಗೆ ಕೇನ್ಸ್ ಸಜ್ಜಾಗಿದೆ ಎಂದು ಇತ್ತೀಚೆಗೆ ವರದಿಯಾಗಿದೆ.
ಕೇನ್ಸ್ ಸೆಮಿಕಾನ್ ಔಟ್‌ಸೋರ್ಸ್ಡ್ ಸೆಮಿಕಂಡಕ್ಟರ್ ಅಸೆಂಬ್ಲಿ ಆಂಡ್ ಟೆಸ್ಟಿಂಗ್ (ಒಎಸ್‌ಎಟಿ) ಗಾಗಿ ಹೈದರಾಬಾದ್‌ನಲ್ಲಿರುವ ಸೌಲಭ್ಯದಲ್ಲಿ ಸ್ವಯಂಚಾಲಿತ ಪರೀಕ್ಷಾ ಸಾಧನ (ಎಟಿಇ) ಮತ್ತು ವಿಶ್ವಾಸಾರ್ಹತೆ ಪರೀಕ್ಷಾ ಮಾರ್ಗದೊಂದಿಗೆ 2,850 ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ರಘು ಪಣಿಕ್ಕರ್ ಹೇಳಿದ್ದಾರೆ.


Click it and Unblock the Notifications