ಜೂನ್‌ನಲ್ಲಿ ಅಂತ್ಯವಾದ ಈ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌ನ ನಿವ್ವಳ ಲಾಭವು ಏರಿಕೆಯಾಗಿದೆ. ಜುಲೈ 17ರಂದು ಎಚ್‌ಡಿಎಫ್‌ಸಿ ಬ್ಯಾಂಕ್‌ನ ನಿವ್ವಳ ಲಾಭವನ್ನು 11,951 ಕೋಟಿ ರೂಪಾಯಿ ಎಂದು ಘೋಷಣೆ ಮಾಡಿದೆ. ಕಳೆದ ವರ್ಷದ ಈ ತ್ರೈಮಾಸಿಕದಲ್ಲಿ ನಿವ್ವಳ ಲಾಭವು 9,196 ಕೋಟಿ ರೂಪಾಯಿ ಆಗಿದೆ. ಅಂದರೆ ಶೇಕಡ 30ರಷ್ಟು ಜಿಗಿತ ಕಂಡಿದೆ.
ಸುಮಾರು ನಾಲ್ಕು ಬ್ರೋಕರೇಜ್ ಸಂಸ್ಥೆಗಳು ಮೊದಲ ತ್ರೈಮಾಸಿಕದಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್ ನಿವ್ವಳ ಲಾಭವು 11,581 ಕೋಟಿ ರೂಪಾಯಿ ಆಗಿರಲಿದೆ ಎಂದು ಅಂದಾಜು ಮಾಡಿತ್ತು. ಆದರೆ ನಿವ್ವಳ ಲಾಭವು ಅಂದಾಜಿಗಿಂತ ಅಧಿಕ ಅಂದರೆ 11,951 ಕೋಟಿ ರೂಪಾಯಿ ಆಗಿದೆ. ಇನ್ನು ದೇಶದ ಅತೀ ದೊಡ್ಡ ಖಾಸಗಿ ಬ್ಯಾಂಕ್‌ನ ನಿವ್ವಳ ಬಡ್ಡಿದರ ಆದಾಯ (ಎನ್‌ಐಐ) ಶೇಕಡ 21ರಷ್ಟು ಜಿಗಿತ ಕಂಡು, 23,599 ಕೋಟಿ ರೂಪಾಯಿ ಆಗಿದೆ.

ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ ನಿವ್ವಳ ಬಡ್ಡಿದರ ಆದಾಯ 19,481 ಕೋಟಿ ರೂಪಾಯಿ ಆಗಿದೆ. ಕೋರ್ ನೆಟ್ ಇಂಟರೆಸ್ಟ್ ಮಾರ್ಜಿನ್ ಶೇಕಡ 4.1ರಷ್ಟು ಆಗಿದೆ. ಅದೇ ರೀತಿ ನಿವ್ವಳ ಎನ್‌ಪಿಎ (ಎನ್‌ಎನ್‌ಪಿಎ) ಕಳೆದ ವರ್ಷ ಶೇಕಡ 0.35 ರಿಂದ ಶೇಕಡ 0.30 ರಷ್ಟಿದೆ. ಷೇರುಗಳು ಸುಮಾರು ಶೇಕಡ 1.5ರಷ್ಟು ಏರಿಕೆ ಕಂಡಿದೆ. ಎನ್‌ಎಸ್‌ಇಯಲ್ಲಿ ಮಧ್ಯಾಹ್ನ 1.25 ಗಂಟೆಗೆ 1,668 ರೂಪಾಯಿ ಆಗಿದೆ.
ಡೆಪಾಸಿಟ್ ಕೂಡಾ ಏರಿಕೆ
ಎಚ್‌ಡಿಎಫ್‌ಸಿ ಬ್ಯಾಂಕ್‌ನ ಒಟ್ಟು ಡೆಪಾಸಿಟ್ ಪ್ರಮಾಣ ಕೂಡಾ ಹೆಚ್ಚಳವಾಗಿದೆ. ಎಚ್‌ಡಿಎಫ್‌ಸಿ ಬ್ಯಾಂಕ್‌ನ ಡೆಪಾಸಿಟ್ ಶೇಕಡ 19.2ರಷ್ಟು ಏರಿಕೆಯಾಗಿ, 19.13 ಲಕ್ಷ ಕೋಟಿ ರೂಪಾಯಿ ಆಗಿದೆ. ಇನ್ನು ಕರೆಂಟ್ ಅಕೌಂಟ್ ಮತ್ತು ಸೇವಿಂಗ್ಸ್ ಅಕೌಂಟ್ (ಸಿಎಎಸ್‌ಎ) ಶೇಕಡ 10.7ರಷ್ಟು ಏರಿಕೆಯಾಗಿದೆ. ಕರೆಂಟ್ ಅಕೌಂಟ್ ಡೆಪಾಸಿಟ್ 2.52 ಲಕ್ಷ ಕೋಟಿ ರೂಪಾಯಿ ಮತ್ತು ಸೇವಿಂಗ್ಸ್ ಅಕೌಂಟ್ ಡೆಪಾಸಿಟ್ 5.6 ಲಕ್ಷ ಕೋಟಿ ರೂಪಾಯಿ ಆಗಿದೆ.
ಬ್ಯಾಂಕಿನ ಟೈಮ್ ಡೆಪಾಸಿಟ್‌ಗಳು ಶೇಕಡ 26.4ರಷ್ಟು ಏರಿಕೆಯಾಗಿದ್ದು, 11 ಲಕ್ಷ ಕೋಟಿ ರೂಪಾಯಿ ಆಗಿದೆ. ಬ್ಯಾಂಕಿನ ಒಟ್ಟು ಅಡ್ವಾನ್ಸ್ ವರ್ಷದಿಂದ ವರ್ಷಕ್ಕೆ ಶೇಕಡ 15.8ರಷ್ಟು ಏರಿಕೆಯಾಗಿ 16.15 ಲಕ್ಷ ಕೋಟಿ ರೂಪಾಯಿ ಆಗಿದೆ. ಸ್ಥಳೀಯ ರಿಟೇಲ್ ಸಾಲವು ಶೇಕಡ 20ರಷ್ಟು ಏರಿಕೆಯಾಗಿದೆ. ವಾಣಿಜ್ಯ ಮತ್ತು ಗ್ರಾಮೀಣ ಬ್ಯಾಂಕಿಂಗ್ ಸಾಲವು ಶೇಕಡ 29.1ರಷ್ಟು ಹೆಚ್ಚಳವಾಗಿದೆ. ಸಗಟು ಸಾಲವು ಶೇಕಡ 11.2ರಷ್ಟು ಏರಿಕೆಯಾಗಿದೆ.
ವಿಭಾಗವಾರು ಆದಾಯ
ಎಚ್‌ಡಿಎಫ್‌ಸಿ ಬ್ಯಾಂಕ್‌ನ ಸಾಲವು ಕೂಡಾ ಹೆಚ್ಚಳವಾಗಿದೆ. ಸಾಲದ ಮೂಲಕ ಈ ತ್ರೈಮಾಸಿಕದಲ್ಲಿ 10,537 ಕೋಟಿ ರೂಪಾಯಿ ಆದಾಯವಿದೆ. ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ ಇದೇ ತ್ರೈಮಾಸಿಕದಲ್ಲಿ ಸಾಲದ ಆದಾಯವು 7,379 ಕೋಟಿ ರೂಪಾಯಿ ಆಗಿದೆ. ಬ್ಯಾಂಕಿನ ಪ್ರಮುಖ ಆದಾಯವಾದ ರಿಟೇಲ್ ಬ್ಯಾಂಕಿಂಗ್ ಕಳೆದ ವರ್ಷ 31,685 ಕೋಟಿ ರೂಪಾಯಿ ಆಗಿದೆ. ಆದರೆ ಇದು ಈ ವರ್ಷ 42,939 ಕೋಟಿ ರೂಪಾಯಿ ಆಗಿದೆ. ಸಾಲದಾತರ ಸಗಟು ಬ್ಯಾಂಕಿಂಗ್ 28,332 ಕೋಟಿ ರೂಪಾಯಿಗಳಷ್ಟಿದ್ದರೆ, ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ 18,642 ಕೋಟಿ ರೂಪಾಯಿ ಆಗಿದೆ.


Click it and Unblock the Notifications