ಭಾರತದ ಅತಿದೊಡ್ಡ ಖಾಸಗಿ ವಲಯದ ಬ್ಯಾಂಕ್ ಆಗಿರುವ ಎಚ್‌ಡಿಎಫ್‌ಸಿ ಬ್ಯಾಂಕ್ ಜೊತೆ ಎಚ್‌ಡಿಎಫ್‌ಸಿ ಲಿಮಿಟೆಡ್ ವಿಲೀನವಾದ ಬಳಿಕ ಮೊದಲ ತ್ರೈಮಾಸಿಕ ವರದಿಯನ್ನು ಪ್ರಕಟಿಸಿದೆ. ಜುಲೈ-ಸೆಪ್ಟೆಂಬರ್ 2023 ತ್ರೈಮಾಸಿಕದಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌ನ ನಿವ್ವಳ ಲಾಭವು ವರ್ಷದಿಂದ ವರ್ಷಕ್ಕೆ ಶೇಕಡ 50 ರಷ್ಟು ಏರಿಕೆಯಾಗಿದೆ.
ಎಚ್‌ಡಿಎಫ್‌ಸಿ ಬ್ಯಾಂಕ್ ನಿವ್ವಳ ಲಾಭವು ಏರಿಕೆಯಾಗಿ, 15,976.11 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಹೌಸಿಂಗ್ ಡೆವಲಪ್‌ಮೆಂಟ್ ಫೈನಾನ್ಸ್ ಕಾರ್ಪೊರೇಷನ್ (ಎಚ್‌ಡಿಎಫ್‌ಸಿ) ಜೊತೆ ವಿಲೀನಗೊಂಡ ನಂತರ ಇದು ಮೊದಲ ಆರ್ಥಿಕ ವರದಿಯಾಗಿದೆ. ತ್ರೈಮಾಸಿಕ ಆಧಾರದ ಮೇಲೆ, ನಿವ್ವಳ ಲಾಭವು ಶೇಕಡ 33.7 ರಷ್ಟು ಏರಿಕೆಯಾಗಿದೆ. ಎನ್‌ಪಿಎ ಶೇಕಡ 1.34ಕ್ಕೆ ಕುಸಿತ ಕಂಡೊದೆ.

ಎಚ್‌ಡಿಎಫ್‌ಸಿ ಬ್ಯಾಂಕ್‌ನ ನಿವ್ವಳ ಬಡ್ಡಿ ಆದಾಯ ಸೆಪ್ಟೆಂಬರ್ 30, 2023ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಸುಮಾರು ಶೇಕಡ 30.3 ರಷ್ಟು ಜಿಗಿದು 27,385 ಕೋಟಿ ರೂಪಾಯಿಗೆ ತಲುಪಿದೆ. ಬಿಎಸ್‌ಇ ಫೈಲಿಂಗ್ ಪ್ರಕಾರ ಇದು 21,021 ಕೋಟಿ ರೂಪಾಯಿ ಆಗಿದೆ.
ತ್ರೈಮಾಸಿಕದಲ್ಲಿ ಬ್ಯಾಂಕಿನ ಪ್ರಮುಖ ನಿವ್ವಳ ಬಡ್ಡಿ ಒಟ್ಟು ಸ್ವತ್ತುಗಳ ಮೇಲೆ ಶೇಕಡ 3.65 ಮತ್ತು ಬಡ್ಡಿ ಗಳಿಸುವ ಸ್ವತ್ತುಗಳು ಶೇಕಡ 3.85 ರಷ್ಟು ಏರಿಕೆಯಾಗಿದೆ. ಜುಲೈ-ಸೆಪ್ಟೆಂಬರ್ 2023 ರ ಅವಧಿಯಲ್ಲಿ ನಿರ್ವಹಣಾ ವೆಚ್ಚಗಳು 15,399 ಕೋಟಿ ರೂಪಾಯಿಗಳಷ್ಟಿದೆ. ಇದು ಕಳೆದ ವರ್ಷದ ಇದೇ ಅವಧಿಯಲ್ಲಿದ್ದ 11,225 ಕೋಟಿ ರೂಪಾಯಿಗಳಿಗೆ ಹೋಲಿಸಿದರೆ ಇದು ಶೇಕಡ 37.2 ರಷ್ಟು ಹೆಚ್ಚಾಗಿದೆ.
ತ್ರೈಮಾಸಿಕದಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌ನ ನಿಬಂಧನೆಗಳು 2,904 ಕೋಟಿ ರೂಪಾಯಿಗೆ ಇಳಿಕೆಯಾಗಿದೆ. ಒಂದು ವರ್ಷದ ಹಿಂದೆ 3,240 ಕೋಟಿ ರೂಪಾಯಿ ಆಗಿದೆ. ಎನ್‌ಪಿಎ ನಿವ್ವಳ ಮುಂಗಡ ಸೆಪ್ಟೆಂಬರ್ 30, 2023 ರಂತೆ ಶೇಕಡ 1.34 ಕ್ಕೆ ಏರಿದೆ.
ಸೆಪ್ಟೆಂಬರ್ 30, 2022 ರಂತೆ ಶೇಕಡ 1.23 ಕ್ಕೆ ಹೋಲಿಸಿದರೆ, ಎನ್‌ಪಿಎ ನಿವ್ವಳ ಮುಂಗಡ ಶೇಕಡ 0.35 ರಷ್ಟಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಷೇರುಗಳು ಶೇಕಡ 0.24 ರಷ್ಟು ಇಳಿಕೆಯಾಗಿ 1,532 ರೂಪಾಯಿಗೆ ತಲುಪಿದೆ.
ಮೊದಲ ತ್ರೈಮಾಸಿಕದಲ್ಲಿ ನಿವ್ವಳ ಲಾಭ ಶೇಕಡ 30 ಏರಿಕೆ!
ಜೂನ್‌ನಲ್ಲಿ ಅಂತ್ಯವಾದ ಈ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌ನ ನಿವ್ವಳ ಲಾಭವು ಏರಿಕೆಯಾಗಿದೆ. ಜುಲೈ 17ರಂದು ಎಚ್‌ಡಿಎಫ್‌ಸಿ ಬ್ಯಾಂಕ್‌ನ ನಿವ್ವಳ ಲಾಭವನ್ನು 11,951 ಕೋಟಿ ರೂಪಾಯಿ ಎಂದು ಘೋಷಣೆ ಮಾಡಿದೆ. ಕಳೆದ ವರ್ಷದ ಈ ತ್ರೈಮಾಸಿಕದಲ್ಲಿ ನಿವ್ವಳ ಲಾಭವು 9,196 ಕೋಟಿ ರೂಪಾಯಿ ಆಗಿದೆ. ಅಂದರೆ ಶೇಕಡ 30ರಷ್ಟು ಜಿಗಿತ ಕಂಡಿದೆ.
ಸುಮಾರು ನಾಲ್ಕು ಬ್ರೋಕರೇಜ್ ಸಂಸ್ಥೆಗಳು ಮೊದಲ ತ್ರೈಮಾಸಿಕದಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್ ನಿವ್ವಳ ಲಾಭವು 11,581 ಕೋಟಿ ರೂಪಾಯಿ ಆಗಿರಲಿದೆ ಎಂದು ಅಂದಾಜು ಮಾಡಿತ್ತು. ಆದರೆ ನಿವ್ವಳ ಲಾಭವು ಅಂದಾಜಿಗಿಂತ ಅಧಿಕ ಅಂದರೆ 11,951 ಕೋಟಿ ರೂಪಾಯಿ ಆಗಿದೆ. ಇನ್ನು ದೇಶದ ಅತೀ ದೊಡ್ಡ ಖಾಸಗಿ ಬ್ಯಾಂಕ್‌ನ ನಿವ್ವಳ ಬಡ್ಡಿದರ ಆದಾಯ (ಎನ್‌ಐಐ) ಶೇಕಡ 21ರಷ್ಟು ಜಿಗಿತ ಕಂಡು, 23,599 ಕೋಟಿ ರೂಪಾಯಿ ಆಗಿದೆ.
ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ ನಿವ್ವಳ ಬಡ್ಡಿದರ ಆದಾಯ 19,481 ಕೋಟಿ ರೂಪಾಯಿ ಆಗಿದೆ. ಕೋರ್ ನೆಟ್ ಇಂಟರೆಸ್ಟ್ ಮಾರ್ಜಿನ್ ಶೇಕಡ 4.1ರಷ್ಟು ಆಗಿದೆ. ಅದೇ ರೀತಿ ನಿವ್ವಳ ಎನ್‌ಪಿಎ (ಎನ್‌ಎನ್‌ಪಿಎ) ಕಳೆದ ವರ್ಷ ಶೇಕಡ 0.35 ರಿಂದ ಶೇಕಡ 0.30 ರಷ್ಟಿದೆ. ಷೇರುಗಳು ಸುಮಾರು ಶೇಕಡ 1.5ರಷ್ಟು ಏರಿಕೆ ಕಂಡಿದೆ. ಎನ್‌ಎಸ್‌ಇಯಲ್ಲಿ ಮಧ್ಯಾಹ್ನ 1.25 ಗಂಟೆಗೆ 1,668 ರೂಪಾಯಿ ಆಗಿದೆ.


Click it and Unblock the Notifications