ಭಾರತದ ಅತೀ ದೊಡ್ಡ ಖಾಸಗಿ ಬ್ಯಾಂಕ್ ಆದ ಎಚ್‌ಡಿಎಫ್‌ಸಿ ಬ್ಯಾಂಕ್ ಶನಿವಾರ ಜನವರಿಯಿಂದ ಮಾರ್ಚ್‌ನಲ್ಲಿ ಅಂತ್ಯವಾಗುವ 4ನೇ ತ್ರೈಮಾಸಿಕದ ನಿವ್ವಳ ಲಾಭವನ್ನು ಘೋಷಿಸಿದೆ. ಮಾರ್ಚ್ 31ಕ್ಕೆ ಅಂತ್ಯವಾದ ತ್ರೈಮಾಸಿಕದಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್ ನಿವ್ವಳ ಲಾಭವು ಶೇಕಡ 20.6ರಷ್ಟು ಏರಿಕೆಯಾಗಿ 12,047 ಕೋಟಿ ರೂಪಾಯಿಗೆ ತಲುಪಿದೆ. ಇನ್ನು ನಿವ್ವಳ ಬಡ್ಡಿ ಆದಾಯವು ಕೂಡಾ ಶೇಕಡ 23.7ರಷ್ಟು ಏರಿಕೆಯಾಗಿದೆ.
ಎಚ್‌ಡಿಎಫ್‌ಸಿ ಬ್ಯಾಂಕ್‌ನ ನಿವ್ವಳ ಬಡ್ಡಿ ಆದಾಯವು ಕಳೆದ ವರ್ಷದಲ್ಲಿ ಇದೇ ತ್ರೈಮಾಸಿಕದಲ್ಲಿ 18,872.7 ಕೋಟಿ ರೂಪಾಯಿ ಆಗಿತ್ತು. ಆದರೆ ಈ ವರ್ಷದ ಈ ಆದಾಯವು ಶೇಕಡ 23.7ರಷ್ಟು ಏರಿಕೆಯಾಗಿ, 23,351.8 ಕೋಟಿ ರೂಪಾಯಿಗೆ ತಲುಪಿದೆ. ಇನ್ನು ಬಿಎಸ್‌ಇ ಫೈಲಿಂಗ್ ಪ್ರಕಾರ 2022ರಲ್ಲಿ ಇದೇ ತ್ರೈಮಾಸಿಕದಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್ ನಿವ್ವಳ ಲಾಭವು ಶೇಕಡ 20.6ಷ್ಟು ಏರಿಕೆಯಾಗಿ 12,594.47 ಕೋಟಿ ರೂಪಾಯಿ ಆಗಿತ್ತು.

"ಏಪ್ರಿಲ್ 15ರಂದು ನಡೆದ ಬೋರ್ಡ್ ಸಭೆಯಲ್ಲಿ ಪ್ರತಿ ಷೇರಿಗೆ 19 ರೂಪಾಯಿ ಡಿವಿಡೆಂಟ್ ಘೋಷಣೆ ಮಾಡುವ ನಿರ್ಧಾರ ಮಾಡಲಾಗಿದೆ. ಇದು ಲಾಭದಲ್ಲಿ ಬಂದ ಆದಾಯಕ್ಕೆ ಅನುಗುಣವಾಗಿ ನೀಡುವ ಡಿವಿಡೆಂಟ್ ಆಗಿದೆ. ಆದರೆ ಈ ನಿರ್ಧಾರಕ್ಕೆ ಷೇರುದಾರರ ವಾರ್ಷಿಕ ಸಭೆಯಲ್ಲಿ ಅನುಮೋದನೆಯೊಂದು ಲಭ್ಯವಾಗುವುದು ಬಾಕಿ ಉಳಿದಿದೆ," ಎಂದು ಎಚ್‌ಡಿಎಫ್‌ಸಿ ಬ್ಯಾಂಕ್ ನೀಡಿದ ಫೈಲಿಂಗ್ಸ್‌ನಲ್ಲಿ ಉಲ್ಲೇಖ ಮಾಡಲಾಗಿದೆ.
ನಿವ್ವಳ ಆದಾಯ ಎಷ್ಟು ಏರಿಕೆ?
ಎಚ್‌ಡಿಎಫ್‌ಸಿ ಬ್ಯಾಂಕ್‌ನ ನಿವ್ವಳ ಆದಾಯವು ಶೇಕಡ 21ರಷ್ಟು ಏರಿಕೆಯಾಗಿ, ಈ ತ್ರೈಮಾಸಿಕದಲ್ಲಿ 32,083 ಕೋಟಿ ರೂಪಾಯಿಗೆ ತಲುಪಿದೆ. ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್ ನಿವ್ವಳ ಆದಾಯವು 26,509.8 ಕೋಟಿ ರೂಪಾಯಿ ಆಗಿತ್ತು. "ಇನ್ನು ಕಾರ್ಯನಿರ್ವಹಣೆ ವೆಚ್ಚವು ಶೇಕಡ 32.6ರಷ್ಟು ಏರಿಕೆಯಾಗಿದೆ. ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ ನಿರ್ವಹಣಾ ವೆಚ್ಚ 10,152.8 ಕೋಟಿ ರೂಪಾಯಿ ಆಗಿತ್ತು. ಆದರೆ ಈ ವರ್ಷ ಮೊತ್ತವು 13,462.1 ಕೋಟಿ ರೂಪಾಯಿಗೆ ಜಿಗಿದಿದೆ," ಎಂದು ಬ್ಯಾಂಕ್ ಹೇಳಿಕೆಯಲ್ಲಿ ಉಲ್ಲೇಖಿಸಿದೆ.
ಎಚ್‌ಡಿಎಫ್‌ಸಿ ಬ್ಯಾಂಕ್ ಮಾರ್ಚ್ 31, 2023ರ ವೇಳೆಗೆ ನೀಡಿದ ಬ್ಯಾಂಕ್‌ನ ಬ್ಯಾಲೆನ್ಸ್ ಶೀಟ್ ಶೇಕಡ 19ರಷ್ಟು ಏರಿಕೆ ಕಂಡಿದ್ದು 24,66,081 ಕೋಟಿ ರೂಪಾಯಿ ಆಗಿದೆ. ಕಳೆದ ವರ್ಷ ಅಂದರೆ ಮಾರ್ಚ್ 31, 2022ರಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಬ್ಯಾಲೆನ್ಸ್ ಶೀಟ್ 20,68,535 ಕೋಟಿ ರೂಪಾಯಿ ಆಗಿತ್ತು. ಇನ್ನು ಕರೆಂಟ್ ಅಕೌಂಟ್ ಸೇವಿಂಗ್ಸ್ ಅಕೌಂಟ್ (ಸಿಎಎಸ್‌ಎ) ಡೆಪಾಸಿಟ್ ಶೇಕಡ 11.3ರಷ್ಟು ಏರಿಕೆ ಕಂಡಿದೆ.
ಉಳಿತಾಯ ಖಾತೆಯ ಡೆಪಾಸಿಟ್ 5,62,493 ಕೋಟಿ ರೂಪಾಯಿ ಆಗಿದ್ದರೆ, ಕರೆಂಟ್ ಅಕೌಂಟ್ ಡೆಪಾಸಿಟ್ 2,73,496 ಕೋಟಿ ರೂಪಾಯಿ ಆಗಿದೆ. ಇನ್ನು ಒಟ್ಟು ಅನುತ್ಪಾದಕ ಆಸ್ತಿಗಳು (GNPAs) ಶೇಕಡ 1.12ರಷ್ಟು ಏರಿಕೆಯಾಗಿದೆ. ಕಳೆದ ತ್ರೈಮಾಸಿಕದಲ್ಲಿ ಶೇಕಡ 1.23ರಷ್ಟು ಏರಿಕೆ ಕಂಡಿತ್ತು.
ಡಿಸೆಂಬರ್ 2022ರಲ್ಲಿ ಅಂತ್ಯವಾದ ತ್ರೈಮಾಸಿಕದಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್ ನಿವ್ವಳ ಆದಾಯವು ಶೇಕಡ 18.5ರಷ್ಟು ಏರಿಕೆಯಾಗಿ 12,260ಕ್ಕೆ ತಲುಪಿದೆ. ಈ ಹಿಂದಿನ ವರ್ಷದಲ್ಲಿ ಮೂರನೇ ತ್ರೈಮಾಸಿಕದಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್ ನಿವ್ವಳ ಆದಾಯವು 10,342.2 ಕೋಟಿ ರೂಪಾಯಿ ಆಗಿತ್ತು. ಡಿಸೆಂಬರ್ 2022ರಲ್ಲಿ ಅಂತ್ಯವಾದ ತ್ರೈಮಾಸಿಕದಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್ ನಿವ್ವಳ ಆದಾಯವು ಶೇಕಡ 18.5ರಷ್ಟು ಏರಿಕೆಯಾಗಿ 12,260ಕ್ಕೆ ತಲುಪಿದೆ. ಈ ಹಿಂದಿನ ವರ್ಷದಲ್ಲಿ ಮೂರನೇ ತ್ರೈಮಾಸಿಕದಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್ ನಿವ್ವಳ ಆದಾಯವು 10,342.2 ಕೋಟಿ ರೂಪಾಯಿ ಆಗಿತ್ತು.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?



Click it and Unblock the Notifications