ಪ್ರಮುಖ ಖಾಸಗಿ ಬ್ಯಾಂಕ್ ಎಚ್‌ಡಿಎಫ್‌ಸಿ ಲಿಮಿಟೆಡ್ ತನ್ನ ಎಎಎ-ರೇಟೆಡ್ ನಿಶ್ಚಿತ ಠೇವಣಿಗಳ (ಎಫ್‌ಡಿ) ದರಗಳನ್ನು ಮಾರ್ಚ್ 30ರಿಂದಲೇ ಜಾರಿಗೆ ಬರುವಂತೆ 25 ಬೇಸಿಸ್ ಪಾಯಿಂಟ್‌ಗಳನ್ನು ಹೆಚ್ಚಿಸಿದೆ.
33 ರಿಂದ 99 ತಿಂಗಳು ಜಾರಿಗೆ ಬರುವಂತೆ 25 ಬೇಸಿಸ್ ಪಾಯಿಂಟ್ ಹೆಚ್ಚಿಸಲಾಗಿದ್ದು, 33 ತಿಂಗಳ ನಿಶ್ಚಿತ ಠೇವಣಿಗೆ ಈಗ 6.2% ವಾರ್ಷಿಕ ಆದಾಯವನ್ನು ಪಡೆಯುತ್ತದೆ. ಆದರೆ 66 ಮತ್ತು 99 ತಿಂಗಳ ಎಫ್‌ಡಿಗಳು ಕ್ರಮವಾಗಿ 6.5% ಮತ್ತು 6.65% ವಾರ್ಷಿಕ ಆದಾಯವನ್ನು ನೀಡುತ್ತವೆ. ಹಿರಿಯ ನಾಗರಿಕರಿಗೆ ಚಾಲ್ತಿಯಲ್ಲಿರುವ ದರಗಳಿಗಿಂತ 25 ಬಿಪಿಎಸ್ ಹೆಚ್ಚುವರಿ ಬಡ್ಡಿ ಸಿಗುತ್ತದೆ.

ಎಚ್‌ಡಿಎಫ್‌ಸಿ ಸತತ 25 ವರ್ಷಗಳಿಂದ ಕ್ರಿಸಿಲ್ ಮತ್ತು ಐಸಿಆರ್‌ಎ ಎರಡರಿಂದಲೂ ಎಎಎ ರೇಟಿಂಗ್ ಹೊಂದಿದೆ. ಹಣಕಾಸು ಯೋಜಕರ ಪ್ರಕಾರ, ಯಾವುದೇ ಸಾಲ ಉತ್ಪನ್ನಗಳಲ್ಲಿ ಹೂಡಿಕೆ ಮಾಡುವಾಗ ಹೂಡಿಕೆದಾರರು ಅನುಸರಿಸಬೇಕಾದ ಸಾಮಾನ್ಯ ವಿಧಾನವೆಂದರೆ ದ್ರವ್ಯತೆ ಮತ್ತು ಆದಾಯದ ಮೇಲೆ ಸುರಕ್ಷತೆಗೆ ಆದ್ಯತೆ ನೀಡುವುದಾಗಿದೆ.
ಕೆಲ ವಾರಗಳ ಹಿಂದಷ್ಟೇ ಹೆಚ್‌ಡಿಎಫ್‌ಸಿ ಬ್ಯಾಂಕ್ ಗೃಹಸಾಲದ ದರ 5 ಬೇಸಿಸ್ ಅಂಶ ತಗ್ಗಿಸುತ್ತಿದೆ. ಎಸ್‌ಬಿಐ, ಎಚ್‌ಡಿಎಫ್‌ಸಿ ಗೃಹ ಸಾಲ ದರವನ್ನು ಶೇ 6.7 ಮತ್ತು ಶೇ 6.75 ಕ್ಕೆ ಇಳಿಸಿದೆ.
ಸಾಲದ ಮೊತ್ತ ಹಾಗೂ ಸಿಬಿಲ್ ಸ್ಕೋರ್ ಮೇಲೆ ಬಡ್ಡಿದರವು ಅವಲಂಬಿತವಾಗಿರುತ್ತದೆ. ಉತ್ತಮ ರಿಪೇಮೆಂಟ್ ಇತಿಹಾಸ ಹೊಂದಿರುವ ಗ್ರಾಹಕರಿಗೆ ಉತ್ತಮ ದರದಲ್ಲಿ ಸೌಲಭ್ಯ ನೀಡುವುದು ಉದ್ದೇಶ ಎಂದು ಸಂಸ್ಥೆ ಹೇಳಿದೆ. 75 ಲಕ್ಷ ರು ತನಕದ ಸಾಲಕ್ಕೆ ಶೇ 6.7 ರಿಂದ ಬಡ್ಡಿದರ ಹಾಗೂ 75 ಲಕ್ಷ ರು ಗೂ ಅಧಿಕ ಮೊತ್ತಕ್ಕೆ ಶೇ 6.75 ರಂತೆ ಬಡ್ಡಿದರ ವಿಧಿಸಲಾಗುತ್ತಿದೆ.


Click it and Unblock the Notifications