ನೀವು ಬೆಂಗಳೂರಿನ ಹೆಬ್ಬಾಳ ಮೇಲ್ಸ್ತುವೆ ಮೇಲೆ ಹೋಗ್ತಿರಾ? ಹಾಗಾದ್ರೆ ಈ ಸ್ಟೋರಿಯನ್ನೊಮ್ಮೆ ಓದಿ. ಹೌದು 17 ರಿಂದ 21 ರವರೆಗೆ ಹೆಬ್ಬಾಳ ಮೇಲ್ವೇತುವೆಯಲ್ಲಿ ರಾತ್ರಿ 12 ರಿಂದ ಮುಂಜಾನೆ 3 ರವರೆಗೆ ವಾಹನ ಸಂಚಾರ ನಿರ್ಬಂಧವನ್ನು ಮಾಡಲಾಗಿದೆ. ಹಾಗಿದ್ರೆ ಪರ್ಯಾಯ ಮಾರ್ಗಗಳು ಯಾವುವು ಎಂಬ ಹೆಚ್ಚಿನ ವಿವರ ಇಲ್ಲಿದೆ ನೋಡಿ.
ಹೆಬ್ಬಾಳ ಮೇಲ್ಸ್ತುವೆಯಲ್ಲಿ ಹೆಚ್ಚುವರಿ ರಾಂಪ್ ನಿರ್ಮಾಣ ಕಾಮಗಾರಿ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಪರ್ಯಾಯ ಮಾರ್ಗ ಬಳಸಲು ಸೂಚಿಸಲಾಗಿದೆ. ಹೀಗಾಗಿ ಏರ್‌ಪೋರ್ಟ್‌ನಿಂದ ಮೇನ್ರಿ ವೃತ್ತದ ಕಡೆಗೆ ಚಲಿಸುವ ವಾಹನಗಳು New BEI ರಸ್ತೆ ಮೂಲಕ ಮೇನ್ರಿ ವೃತ್ತ ತಲಪುಬಹುದು.

ಬಿಡಿಎ ಕಾಮಗಾರಿ (BDA Works) ಹಿನ್ನೆಲೆಯಲ್ಲಿ ನಾಲ್ಕು ದಿನಗಳ ಕಾಲ ಫ್ಲೈಓವರ್ ಬಂದ್ ಆಗಲಿದೆ. ಹೆಬ್ಬಾಳ ಫ್ಲೈಓವರ್‌ನಲ್ಲಿ ನಡೆಯುತ್ತಿರುವ ಗ್ರೀಡ್ ಅಳವಡಿಕೆ ಕಾರ್ಯದ ಹಿನ್ನೆಲೆಯಲ್ಲಿ, ಎಸ್ಟೀಮ್ ಮಾಲ್‌ನಿಂದ ಬಾಪ್ಟಿಸ್ಟ್ ಆಸ್ಪತ್ರೆವರೆಗೆ ಹೋಗುವ ಮಾರ್ಗವನ್ನು ರಾತ್ರಿ 12 ರಿಂದ ಬೆಳಗಿನ 3 ಗಂಟೆಯವರೆಗೆ ನಾಲ್ಕು ದಿನಗಳ ಕಾಲ ಬಂದ್ ಮಾಡಲಾಗಿದೆ. ಈ ಸಮಯದಲ್ಲಿ ಸಂಚಾರಿ ವಾಹನ ಸವಾರರಿಗೆ ಬೆಂಗಳೂರಿನ ಟ್ರಾಫಿಕ್ ಪೊಲೀಸರು ಈ ಕೆಳಗಿನ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸಲಹೆ ನೀಡಿದ್ದಾರೆ.
ಪರ್ಯಾಯ ಮಾರ್ಗಗಳು ಇಲ್ಲಿವೆ
ಈ ವೇಳೆಯಲ್ಲಿ ಹೆಬ್ಬಾಳ ಫ್ಲೈಓವರ್ ಅನ್ನು ರಾತ್ರಿ 3 ಗಂಟೆಗಳ ಕಾಲ ಬಂದ್ ಮಾಡುವ ಸೂಚನೆ ನೀಡಲಾಗಿದೆ. ವಾಹನ ಸವಾರರಿಗೆ ಪರ್ಯಾಯ ಮಾರ್ಗದ ವ್ಯವಸ್ಥೆಯನ್ನು ಮಾಡಲಾಗಿದೆ. ಎಸ್ಟೀಮ್ ಮಾಲ್ ಕಡೆಯಿಂದ ಬರುವ ವಾಹನಗಳು ಬಿಇಎಲ್ ಸರ್ಕಲ್ ಮೂಲಕ ಸರ್ವೀಸ್ ರಸ್ತೆ ಮೂಲಕ ಸಂಚರಿಸಲು ವ್ಯವಸ್ಥೆ ಮಾಡಲಾಗಿದೆ. ನಗರ ಸಂಚಾರ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ.
ಸಂಚಾರ ನಿರ್ಬಂಧ ವಿವರಗಳು
ಸ್ಥಳ: ಹೆಬ್ಬಾಳ ಫ್ಲೈಓವರ್ (Esteem Mall ಕಡೆಯಿಂದ ನಗರ ಪ್ರವೇಶದ ದಾರಿ)
ಕಾಲಾವಧಿ: ಇಂದಿನಿಂದ ಮುಂದಿನ 4 ದಿನಗಳವರೆಗೆ
ಸಮಯ: ರಾತ್ರಿ 12 ಗಂಟೆಯಿಂದ ಬೆಳಗಿನ ಜಾವ 3 ಗಂಟೆಯವರೆಗೆ
ಪ್ರಭಾವಿತ ಮಾರ್ಗ: Esteem Mall ಕಡೆಯಿಂದ ನಗರಕ್ಕೆ ಬರುವ ಮುಖ್ಯ ರಸ್ತೆಯ ಸಂಚಾರ ಬಂದ್
ಪರ್ಯಾಯ ಮಾರ್ಗಗಳು
ಹೆಬ್ಬಾಳ ಫ್ಲೈಓವರ್ ಗ್ರೀಡ್ ಅಳವಡಿಕೆ ಹಿನ್ನೆಲೆಯಲ್ಲಿ ನಾಲ್ಕು ದಿನಗಳ ಕಾಲ ರಾತ್ರಿ ವೇಳೆ ವಾಹನ ಸಂಚಾರ ಬಂದ್ ಮಾಡಲಾಗಿದೆ. ರಾತ್ರಿ 12 ಗಂಟೆಯಿಂದ ಬೆಳಗಿನ ಜಾವ 3 ಗಂಟೆಯವರೆಗೆ ಈ ಬಂದ್ ಜಾರಿಯಲ್ಲಿ ಇರುತ್ತದೆ. ಎಸ್ಟೀಮ್ ಮಾಲ್ ಕಡೆಯಿಂದ ನಗರಕ್ಕೆ ಬರುವ ಮಾರ್ಗವನ್ನು ನಿಷೇಧವನ್ನು ಮಾಡಲಾಗಿದೆ. ಬಿಡಿಎ ವತಿಯಿಂದ ಈ ಗ್ರೀಡ್ ಅಳವಡಿಕೆ ಕಾರ್ಯವನ್ನು ನಡೆಯುತ್ತಿದೆ. ಈ ಅಳವಡಿಕೆ ಕಾರ್ಯ ಇಂದಿನಿಂದ ನಾಲ್ಕು ದಿನಗಳವರೆಗೆ ನಡೆಯಲಿದ್ದು, ರಾತ್ರಿ 12 ರಿಂದ 3 ಗಂಟೆಯವರೆಗೆ ಮುಂದುವರಿಯಲಿದೆ.
ಕಂಪ್ಲೆಕ್ಸ್ ರಸ್ತೆಯಿಂದ ವಿಮಾನ ನಿಲ್ದಾಣಕ್ಕೆ ಹೋಗುವವರು: ಹೆನ್ನೂರು,ಬಾಗಲೂರು,ಕರ್ನಾಟಕ ಯುನಿವರ್ಸಿಟಿ ರಸ್ತೆ ಅಥವಾ ನಾಗವರೆ ಕೆಂಪೇಗೌಡ ವಿಮಾನ ನಿಲ್ದಾಣ ಮಾರ್ಗ ಬಳಸುವುದು ಉತ್ತಮವಾಗಿದೆ.
ಟ್ರಾಫಿಕ್ ಪೊಲೀಸ್ ಸೂಚನೆ
ಪ್ರಯಾಣಿಕರು ಈ ಅವಧಿಯಲ್ಲಿ ತಮ್ಮ ಪ್ರಯಾಣವನ್ನು ಮುಂಚಿತವಾಗಿ ಯೋಜಿಸಬೇಕು.
ವಾಹನ ಸವಾರರು ಪರ್ಯಾಯ ಮಾರ್ಗಗಳನ್ನು ಉಪಯೋಗಿಸಿ ದಟ್ಟಣೆ ಮತ್ತು ವಿಳಂಬ ತಪ್ಪಿಸಿಕೊಳ್ಳಲು ಸೂಚಿಸಲಾಗಿದೆ.
ಪರ್ಯಾಯ ಮಾರ್ಗ (Alternative Route)
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೇಖ್ರಿ ವೃತ್ತ: ಎಸ್ಟೀಮ್ ಮಾಲ್ ಬಳಿ ಇರುವ ಸರ್ವಿಸ್ ರಸ್ತೆಗೆ ಪ್ರವೇಶಿಸಬೇಕು. ನಂತರ ಹೆಬ್ಬಾಳ ವೃತ್ತದಲ್ಲಿ ಹೊರ ವರ್ತುಲ (Outer Ring Road) ದಿಂದ ಬಲ ತಿರುಗಿ ತುಮಕೂರು ರಸ್ತೆಯ (Tumkur Road) ಕಡೆಗೆ ಸಾಗಬೇಕು.
ಕುವೆಂಪು ವೃತ್ತ (Kuvempu Circle) ತಲುಪಿದ ನಂತರ ಎಡ ತಿರುಗಿ New BEL Road ಮೂಲಕ ಮುಂದುವರಿಯಬೇಕು.
ಕೊನೆಗೆ ಮೇಖ್ರಿ ವೃತ್ತವನ್ನು ತಲುಪಬಹುದು.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (BDA) ಹೆಬ್ಬಾಳ ಫ್ಲೈಓವರ್‌ನಲ್ಲಿ ನಡೆಯುತ್ತಿರುವ ಗ್ರೀಡ್ ಅಳವಡಿಕೆ ಕಾರ್ಯದ ಕುರಿತು ಬೆಂಗಳೂರು ಸಂಚಾರ ಪೊಲೀಸ್‌ವರು ಪ್ರಕಟಿಸಿದ ಸೂಚನೆಗಳಲ್ಲಿ ಪ್ರಮುಖ ಅಂಶಗಳು ಈ ಕೆಳಗಿನಂತಿವೆ.
ಹೆಬ್ಬಾಳ ಫ್ಲೈಓವರ್ ಗ್ರೀಡ್ ಅಳವಡಿಕೆ ಹಿನ್ನೆಲೆಯಲ್ಲಿ ನಾಲ್ಕು ದಿನಗಳ ಕಾಲ ರಾತ್ರಿ ವೇಳೆ ವಾಹನ ಸಂಚಾರ ನಿಷೇಧವನ್ನು ಮಾಡಲಾಗಿದೆ. ಇನ್ನೂ ರಾತ್ರಿ 12 ಗಂಟೆಯಿಂದ ಬೆಳಗಿನ ಜಾವ 3 ಗಂಟೆಯವರೆಗೆ ಈ ಬಂದ್ ಜಾರಿಯಲ್ಲಿ ಇದೆ.
ಇನ್ನೂ ಎಸ್ಟೀಮ್ ಮಾಲ್ ಕಡೆಯಿಂದ ನಗರಕ್ಕೆ ಬರುವ ಮಾರ್ಗ ನಿಷೇಧ ಮಾಡಲಾಗಿದೆ. ಬಿಡಿಎ ವತಿಯಿಂದ ಈ ಗ್ರೀಡ್ ಅಳವಡಿಕೆಯನ್ನು ಕಾರ್ಯನಡೆಸುತ್ತಿದೆ.ಈ ಅಳವಡಿಕೆ ಕಾರ್ಯ ಇಂದಿನಿಂದ ನಾಲ್ಕು ದಿನಗಳವರೆಗೆ ನಡೆಯಲಿದೆ ರಾತ್ರಿ 12 ರಿಂದ 3 ಗಂಟೆಯವರೆಗೆ ಮುಂದುವರಿಯಲಿದೆ.
ಸೂಚನೆಗಳು
ಪ್ರಯಾಣಿಕರು ತಮ್ಮ ಪ್ರಯಾಣವನ್ನು ಕನಿಷ್ಠ 2 ಗಂಟೆಗಳ ಮುಂಚಿತವಾಗಿ ಯೋಜಿಸಬೇಕು, ವಿಶೇಷವಾಗಿ ವಿಮಾನ ನಿಲ್ದಾಣಕ್ಕೆ ಹೋಗುವವರು.
ಪರ್ಯಾಯ ಮಾರ್ಗಗಳಲ್ಲಿ ಸಂಚಾರ ಹೆಚ್ಚಾಗಬಹುದು; ಆದ್ದರಿಂದ ಮುಂಚಿತವಾಗಿ ಯೋಜನೆ ಮಾಡಿ ಪ್ರಯಾಣಿಸಲು ಸೂಚಿಸಲಾಗಿದೆ.


Click it and Unblock the Notifications