For Quick Alerts
ALLOW NOTIFICATIONS  
For Daily Alerts

ಉತ್ತಮ ಬೆಲೆಗೆ ಚಿನ್ನ ಮಾರುವುದಕ್ಕೆ ಇಲ್ಲಿವೆ ಆಯ್ಕೆ

|

ಭಾರತದಲ್ಲಿ ಚಿನ್ನದ ಬೆಲೆ ಹೊಸ ಎತ್ತರಕ್ಕೆ ಏರಿಕೆ. 22 ಕ್ಯಾರೆಟ್ ನ 1 ಗ್ರಾಂ ಚಿನ್ನದ ಬೆಲೆ 4790 ರುಪಾಯಿ ಇದ್ದರೆ, 24 ಕ್ಯಾರೆಟ್ ಚಿನ್ನದ ಬೆಲೆ ಒಂದು ಗ್ರಾಮ್ ಗೆ 4891 ರುಪಾಯಿ ಇದೆ. ಭಾರತದಲ್ಲಿ ಐತಿಹಾಸಿಕ ಗರಿಷ್ಠ ಮಟ್ಟವನ್ನು ತಲುಪಿದೆ ಚಿನ್ನದ ದರ. ಒಂದು ವೇಳೆ ಹಣದ ಅಗತ್ಯ ಇರುವವರು ಚಿನ್ನವನ್ನು ಮಾರುವುದಕ್ಕೆ ಇದು ಸೂಕ್ತ ಸಮಯ.

ಚಿನ್ನದ ಆಭರಣ ಮಳಿಗೆಗಳಲ್ಲಿ ಮಾರಾಟ ಮಾಡಬಹುದು. ಆದರೆ ಒಳ್ಳೆ ಬೆಲೆ ಸಿಗುವುದು ಕಷ್ಟ. ಆದರೆ ಕೆಲವು ಕಂಪೆನಿಗಳಿವೆ, ಭಾರತದ ಪ್ರಮುಖ ನಗರಗಳಲ್ಲಿ ಕಾರ್ಯ ನಿರ್ವಹಿಸುತ್ತವೆ. ಚಿನ್ನ ಖರೀದಿಯೇ ಅವುಗಳ ಮುಖ್ಯ ವ್ಯವಹಾರ. ಈ ಲೇಖನದಲ್ಲಿ ಕೆಲವು ಅಂಥ ಸ್ಥಳಗಳ ಮಾಹಿತಿ ಇದೆ. ನೀವು ಅಷ್ಟಾಗಿ ಬಳಸದ ಚಿನ್ನದ ಆಭರಣಗಳನ್ನು ಇಲ್ಲಿ ಮಾರಬಹುದು.

ಅಟ್ಟಿಕಾ ಗೋಲ್ಡ್ ಕಂಪೆನಿ

ಅಟ್ಟಿಕಾ ಗೋಲ್ಡ್ ಕಂಪೆನಿ

ನೀವು ದಕ್ಷಿಣ ಭಾರತೀಯರಾದಲ್ಲಿ ಅಟ್ಟಿಕಾ ಗೋಲ್ಡ್ ಕಂಪೆನಿಯ ಯಾವುದಾದರೂ ಒಂದು ಶಾಖೆಯಲ್ಲಿ ಚಿನ್ನ ಮಾರಾಟ ಮಾಡಬಹುದು. ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ತೆಲಂಗಾಣ, ಆಂಧ್ರ, ತಮಿಳುನಾಡು, ಪುದುಚೆರಿ ಮುಂತಾದ ಕಡೆಗಳಲ್ಲಿ ಶಾಖೆಗಳಿವೆ. ಇಲ್ಲಿ ಚಿನ್ನವನ್ನು ಖರೀದಿ ಮಾಡುವುದಕ್ಕೆ ಅಂತಲೇ ಪರಿಣತಿ ಪಡೆಯಲಾಗಿದೆ. ಚಿನ್ನದ ಮೌಲ್ಯಮಾಪನಕ್ಕಾಗಿ ಜರ್ಮನಿ ಯಂತ್ರವನ್ನು ಬಳಸಲಾಗುತ್ತದೆ. ಚಿನ್ನದ ಮಾರಾಟ ಪ್ರಕ್ರಿಯೆಗೆ ಮೂವತ್ತು ನಿಮಿಷ ಸಮಯ ಹಿಡಿಯುತ್ತದೆ. ನಗದು ಅಥವಾ NEFT ವರ್ಗಾವಣೆ ಮಾಡಲಾಗುತ್ತದೆ. ವ್ಯವಹಾರ ಕೂಡ ಪಾರದರ್ಶಕವಾಗಿರುತ್ತದೆ.

ಡಿ ಗೋಲ್ಡ್ ಎಕ್ಸ್ ಚೇಂಜ್

ಡಿ ಗೋಲ್ಡ್ ಎಕ್ಸ್ ಚೇಂಜ್

ಡಿ ಗೋಲ್ಡ್ ಎಕ್ಸ್ ಚೇಂಜ್ ನಲ್ಲಿ ಕೂಡ ನಿಮ್ಮ ಚಿನ್ನದ ಆಭರಣ, ಚಿನ್ನದ ಗಟ್ಟಿ ಮತ್ತು ನಾಣ್ಯಗಳನ್ನು ಮಾರಾಟ ಮಾಡಬಹುದು. ದಕ್ಷಿಣ ಭಾರತದ ರಾಜ್ಯಗಳಲ್ಲಿ ಉತ್ತಮ ಜಾಲವನ್ನು ಹೊಂದಿದೆ. ಈ ಕಂಪೆನಿಯಲ್ಲಿ ಕೂಡ ಚಿನ್ನದ ಶುದ್ಧತೆ ಮೌಲ್ಯಮಾಪನ ಮಾಡುವ ಉತ್ತಮ ಯಂತ್ರಗಳಿದ್ದು, ಚಿನ್ನಕ್ಕೆ ಅತ್ಯುತ್ತಮ ದರ ಸಿಗುತ್ತದೆ. ಒಂದು ವಾಟ್ಸಾಪ್ ಮೆಸೇಜ್ ಕಳಿಸಿ ತಕ್ಷಣವೇ ಎಷ್ಟು ದರ ಸಿಗಬಹುದು ಎಂದು ತಿಳಿದುಕೊಳ್ಳಬಹುದು. ಆ ಮೂಲಕ ಚಿನ್ನವನ್ನು ಮಾರಾಟ ಮಾಡಬಹುದೋ ಅಥವಾ ಬೇಡವೋ ಎಂದು ನಿರ್ಧಾರ ತೆಗೆದುಕೊಳ್ಳುವುದು ಸಲೀಸು.

ಏನೆಲ್ಲ ದಾಖಲೆ, ಅಗತ್ಯಗಳನ್ನು ಇಟ್ಟುಕೊಂಡಿರಬೇಕು?

ಏನೆಲ್ಲ ದಾಖಲೆ, ಅಗತ್ಯಗಳನ್ನು ಇಟ್ಟುಕೊಂಡಿರಬೇಕು?

ನೀವು ಮಾರಾಟ ಮಾಡಬೇಕು ಅಂತಿರುವ ಚಿನ್ನವನ್ನು ಸಿದ್ಧ ಮಾಡಿಟ್ಟುಕೊಳ್ಳಬೇಕು. ಒಂದು ವೇಳೆ ಚಿನ್ನ ಖರೀದಿಯ ಬಿಲ್ ಇದ್ದರೆ ಉತ್ತಮ. ಏಕೆಂದರೆ ಅದರಲ್ಲಿ ಶುದ್ಧತೆ ಮತ್ತು ತೂಕದ ಬಗ್ಗೆ ಮಾಹಿತಿ ಇರುತ್ತದೆ. ರಸೀದಿ ಇಟ್ಟುಕೊಳ್ಳದಿದ್ದರೂ ಅಡ್ಡಿಯಿಲ್ಲ. ಮಾರಾಟ ಮಾಡಬಹುದು. ಆದರೆ ಗುರುತಿನ ಚೀಟಿ ಕಡ್ಡಾಯ. ಶುದ್ಧತೆ ಅಳೆಯುವ ಯಂತ್ರ ಬಳಸಿ ಮೌಲ್ಯಮಾಪನ ಮಾಡಲಾಗುತ್ತದೆ. ಇನ್ನು ಯಾವುದೇ ಹರಳು, ರತ್ನಗಳಿಗೆ ಬೆಲೆ ಸಿಗುವುದಿಲ್ಲ. ತೂಕ, ಶುದ್ಧತೆ ಎಲ್ಲದರ ಪರಿಶೀಲನೆ ಆದ ಮೇಲೆ ಕಂಪೆನಿಯ ಎಕ್ಸ್ ಕ್ಯೂಟಿವ್ ಲಾಗ್ ಇನ್ ಆಗಿ ವರದಿ ಸಿದ್ಧಪಡಿಸುತ್ತಾರೆ. ಅದರಲ್ಲಿ ಚಿನ್ನದ ಆಭರಣದ ಎಲ್ಲ ಮಾಹಿತಿ ಇರುತ್ತದೆ. ಯಾವುದೇ ಹಂತದಲ್ಲಿ ಚಿನ್ನ ಮಾರಾಟ ಮಾಡುವುದ ಬೇಡ ಎಂದೆನಿಸಿದಲ್ಲಿ ಮಾರದೇ ಇರಬಹುದು. ಅಂದಾಜು ಎಷ್ಟು ಹಣ ಬರುತ್ತದೆ ಮತ್ತು ಮೌಲ್ಯಮಾಪನವನ್ನು ಒಪ್ಪಿಕೊಂಡ ಮೇಲೆ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಅಥವಾ ನಗದು ನೀಡಲಾಗುತ್ತದೆ.

ಈಗ ಚಿನ್ನವನ್ನು ಮಾರಬೇಕಾ?

ಈಗ ಚಿನ್ನವನ್ನು ಮಾರಬೇಕಾ?

ಚಿನ್ನವು ಗರಿಷ್ಠ ಮಟ್ಟವನ್ನು ಮುಟ್ಟಿದೆಯಲ್ಲಾ, ನಮ್ಮ ಬಳಿ ಇರುವ ಚಿನ್ನವನ್ನು ಮಾರಬಹುದಾ ಎಂಬುದು ಹಲವು ಓದುಗರ ಪ್ರಶ್ನೆ. ಆದರೆ ಇದನ್ನು ಹೀಗೇ ಎಂದು ಹೇಳುವುದು ಬಹಳ ಕಷ್ಟ. ನಮ್ಮ ಸಲಹೆ ಏನೆಂದರೆ, ತುರ್ತು ಸಂದರ್ಭ ಇದ್ದು, ಹಣದ ಅಗತ್ಯ ಇದ್ದಲ್ಲಿ ನಿಮ್ಮ ಚಿನ್ನವನ್ನು ಮಾರಬಹುದು. ಇನ್ನು ಬಳಕೆಯೇ ಮಾಡದ ಆಭರಣ ಇದ್ದಲ್ಲಿ ಮಾರಬಹುದು. ಕೆಲವು ಸಲ ಮುರಿದ ಆಭರಣಗಳು ಸಹ ಕೆಲವರ ಬಳಿ ಇರುತ್ತವೆ. ಒಂದು ವೇಳೆ ತಾತ್ಕಾಲಿಕ ನಗದು ಸಮಸ್ಯೆ ಇದ್ದಲ್ಲಿ ಚಿನ್ನದ ಮೇಲೆ ಸಾಲ ಪಡೆಯಬಹುದು. ಪರ್ಸನಲ್ ಲೋನ್ ಬದಲು ಇದು ಉತ್ತಮ. ಚಿನ್ನವನ್ನು ಮಾರುವುದಕ್ಕಿಂತ ಅದರ ಮೇಲೆ ಸಾಲ ಮಾಡಿ, ಆ ನಂತರ ಪಾವತಿಸುವುದು ಉತ್ತಮ.

English summary

Best Places To Sell Your Gold And Get Good Price In Indian Cities

Gold price in India at all time high. If you wish to sell your unused ornaments, here are the best places.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X