ಬ್ಯಾಂಕ್ ಗಳಿಗೆ 2021ನೇ ಇಸವಿಯಲ್ಲಿ 40ಕ್ಕೂ ಹೆಚ್ಚು ದಿನ ರಜಾ ಇದ್ದು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ರಜಾ ದಿನದ ಪಟ್ಟಿ ಬಿಡುಗಡೆ ಮಾಡಲಾಗಿದೆ. ಭಾರತದಲ್ಲಿ ಬ್ಯಾಂಕ್ ರಜಾ ದಿನಗಳು ಆಯಾ ರಾಜ್ಯಗಳ ಮೇಲೂ ಅವಲಂಬನೆ ಆಗಿರುತ್ತದೆ. ಇನ್ನು ಭಾರತದ ವಿವಿಧ ಭಾಗಗಳಲ್ಲಿ ನಿರ್ಬಂಧಿತ ರಜಾಗಳು ಹಾಗೂ ಗೆಜೆಟೆಡ್ ರಜಾ ದಿನಗಳಿವೆ.
ಗೆಜೆಟೆಡ್ ಅಥವಾ ಸಾರ್ವಜನಿಕ ರಜಾ ದಿನಗಳು ದೇಶದಾದ್ಯಂತ ಅನ್ವಯಿಸುತ್ತದೆ. ಇದರಲ್ಲಿ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ ಮತ್ತು ಗಾಂಧೀಜಯಂತಿ ಒಳಗೊಂಡಿರುತ್ತದೆ. ಇನ್ನು ಬ್ಯಾಂಕ್ ಗಳು ಪ್ರತಿ ತಿಂಗಳ ಎರಡು ಮತ್ತು ನಾಲ್ಕನೇ ಶನಿವಾರ ಹಾಗೂ ಎಲ್ಲ ಭಾನುವಾರಗಳಲ್ಲಿ ಮುಚ್ಚಿರುತ್ತವೆ.
ಇಲ್ಲಿ 2021ನೇ ಸಾಲಿನ ಪ್ರಮುಖ ಬ್ಯಾಂಕ್ ರಜಾ ದಿನಗಳ ಪಟ್ಟಿಯಿದೆ.
ಜನವರಿ
26 (ಮಂಗಳವಾರ) - ಗಣರಾಜ್ಯೋತ್ಸವ
ಮಾರ್ಚ್
11 (ಗುರುವಾರ) - ಶಿವರಾತ್ರಿ
29 (ಸೋಮವಾರ)- ಕಾಮನ ಹುಣ್ಣಿಮೆ
ಏಪ್ರಿಲ್
1 (ಗುರುವಾರ) - ಲೆಕ್ಕಾಚಾರ ಮುಕ್ತಾಯದ ದಿನ (Closing accounts)
2 (ಶುಕ್ರವಾರ) - ಗುಡ್ ಫ್ರೈಡೇ
14 (ಬುಧವಾರ) - ಅಂಬೇಡ್ಕರ್ ಜಯಂತಿ
25 (ಭಾನುವಾರ)- ಮಹಾವೀರ್ ಜಯಂತಿ

ಮೇ
13 (ಗುರುವಾರ) - ರಮ್ಜಾನ್/ಈದ್- ಉಲ್- ಫಿತ್ರ್
ಜುಲೈ
20 (ಮಂಗಳವಾರ) - ಬಕ್ರೀದ್/ಈದ್ ಉಲ್- ಅಧಾ
ಆಗಸ್ಟ್
15 (ಭಾನುವಾರ) - ಸ್ವಾತಂತ್ರ್ಯ ದಿನಾಚರಣೆ
19 (ಗುರುವಾರ) - ಮೊಹರಂ
30 (ಸೋಮವಾರ) - ಜನ್ಮಾಷ್ಟಮಿ
ಸೆಪ್ಟೆಂಬರ್
10 (ಶುಕ್ರವಾರ) - ಗಣೇಶ ಚತುರ್ಥಿ
ಅಕ್ಟೋಬರ್
2 (ಶನಿವಾರ) - ಮಹಾತ್ಮ ಗಾಂಧಿ ಜಯಂತಿ
15 (ಶುಕ್ರವಾರ) - ದಸರಾ
ನವೆಂಬರ್
4 (ಗುರುವಾರ) - ದೀಪಾವಳಿ
19 (ಶುಕ್ರವಾರ) - ಗುರು ನಾನಕ್ ಜಯಂತಿ
ಡಿಸೆಂಬರ್
25 (ಶನಿವಾರ) - ಕ್ರಿಸ್ ಮಸ್


Click it and Unblock the Notifications