ಹೀರೋ ಎಲೆಕ್ಟ್ರಿಕ್ ನಿಂದ 3 ದಿನಗಳ ರಿಟರ್ನ್ ಆಫರ್ ಘೋಷಣೆ ಮಾಡಲಾಗಿದೆ. ಈ ಆಫರ್ ಭಾರತದಾದ್ಯಂತ ಇರುವ ಗ್ರಾಹಕರಿಗೆ ಅನ್ವಯ ಆಗಲಿದೆ. ಈ ಹೊಸ ಯೋಜನೆ ಅನ್ವಯ, ಗ್ರಾಹಕರು ಖರೀದಿ ಮಾಡಿದ ಮೂರು ದಿನಗಳೊಳಗೆ ಉತ್ಪನ್ನವನ್ನು ಹಿಂತಿರುಗಿಸಿದರೆ ಪೂರ್ತಿ ಹಣ ರೀಫಂಡ್ ಆಗುತ್ತದೆ.
ಇನ್ನು ಕಂಪೆನಿಯ ಆನ್ ಲೈನ್ ಆಫರ್ ಗೆ ಬಂದಿರುವ ಅಮೋಘ ಪ್ರತಿಕ್ರಿಯೆಯಿಂದಾಗಿ ಮೇ 31ನೇ ತಾರೀಕಿನ ತನಕ ವಿಸ್ತರಣೆ ಮಾಡಲಾಗಿದೆ. ಫ್ಲ್ಯಾಷ್ ಲೀಡ್- ಆಸಿಡ್ ಕಡಿಮೆ ವೇಗದ ಮಾಡೆಲ್ ಹೊರತುಪಡಿಸಿ ಉಳಿದ ಯಾವುದೇ ಸ್ಕೂಟರ್ ಬುಕ್ ಮಾಡುವವರಿಗೆ ತಕ್ಷಣದ ನಗದು ರಿಯಾಯಿತಿ 4000 ರುಪಾಯಿ ದೊರೆಯುತ್ತದೆ.
ಇನ್ನು ಬುಕ್ಕಿಂಗ್ ಮೊತ್ತವನ್ನು 2999 ರುಪಾಯಿಗೆ ನಿಗದಿ ಮಾಡಲಾಗಿದೆ. ಇನ್ನು ಕಂಪೆನಿಯಲ್ಲಿ ಆಗುವ ಖರೀದಿ ಪೈಕಿ ದೊಡ್ಡ ಮಟ್ಟದ್ದು ರೆಫರಲ್ ಆಗಿರುತ್ತದೆ. ಆದ್ದರಿಂದ ಖರೀದಿದಾರರಿಗೆ 1000 ರುಪಾಯಿ ಮೌಲ್ಯದ ವೋಚರ್ ಸಹ ನೀಡಲಾಗುತ್ತಿದೆ. ಸದ್ಯಕ್ಕೆ ಹೀರೋ ಎಲೆಕ್ಟ್ರಿಕ್ ಸ್ಕೂಟರ್ಸ್ ನಲ್ಲಿ Flash, Nyx, Optima, Photon, Flash, Dash, ಜತೆಗೆ ER (Extended Range) ಇದೆ. ಇನ್ನು Glyde ಲಿಥಿಯಂ ಬ್ಯಾಟರಿ ಸಹಿತ ಬರುತ್ತದೆ.

ಹೀರೋ ಎಲೆಕ್ಟ್ರಿಕ್ ಈಗಾಗಲೇ ಗ್ರೀನ್ ಮತ್ತು ಆಯ್ದ ಆರೆಂಜ್ ಝೋನ್ ನಲ್ಲಿ ಸರ್ಕಾರದ ಮಾರ್ಗದರ್ಶಿ ಸೂತ್ರ ಅನುಸರಿಸಿ, ಕಾರ್ಯಾರಂಭ ಮಾಡಿದೆ. ಇನ್ನು ಡೀಲರ್ಸ್ ಗಳು ಶೋರೂಮ್ ಮತ್ತು ವಾಹನಗಳನ್ನು ಸ್ಯಾನಿಟೈಜ್ ಮಾಡುವುದಕ್ಕೆ ಎಲ್ಲ ಕ್ರಮಗಳನ್ನೂ ಜಾರಿ ಮಾಡಿದ್ದಾರೆ. ಇನ್ನು ಹಲವು ಡೀಲರ್ ಗಳು ವಾಹನಗಳ ಹೋಮ್ ಡೆಲಿವರಿ ಶುರು ಮಾಡಿದ್ದಾರೆ.


Click it and Unblock the Notifications