ಬಹುದೊಡ್ಡ ದ್ವಿಚಕ್ರ ವಾಹನ ತಯಾರಕಾ ಕಂಪನಿ ಹೀರೋ ಮೋಟೊಕಾರ್ಪ್ ಗುರುವಾರ ತನ್ನ ಜನಪ್ರಿಯ ಮೋಟಾರ್ ಸೈಕಲ್ ಮಾದರಿಯಾದ ಸೂಪರ್ ಸ್ಪ್ಲೆಂಡರ್ ಬಿಎಸ್-VI ಆವೃತ್ತಿಯನ್ನು ಬಿಡುಗಡೆ ಮಾಡಿದೆ.
ಸೂಪರ್ ಸ್ಪ್ಲೆಂಡರ್ ಬಿಎಸ್-VI ಹೊಸ ಬೈಕ್ 125ಸಿಸಿ ಎಂಜಿನ್ ಹೊಂದಿದ್ದು, ಇದರ ಬೆಲೆಯು 67,300 ರುಪಾಯಿ (ಎಕ್ಸ್ಶೋರೂಂ, ದೆಹಲಿ) ಯಿಂದ ಪ್ರಾರಂಭವಾಗುತ್ತದೆ.

ಸೂಪರ್ ಸ್ಪ್ಲೆಂಡರ್ ಬಿಎಸ್-VI ಎರಡು ರೂಪಾಂತರದಲ್ಲಿ ಇರುತ್ತದೆ. ಸೆಲ್ಫ್ ಸ್ಟಾರ್ಟ್, ಡ್ರಮ್ ಬ್ರೇಕ್ ವಿತ್ ಅಲಾಯ್ ವೀಲ್ 67,300 ರುಪಾಯಿ ಮತ್ತು ಸೆಲ್ಫ್ ಸ್ಟಾರ್ಟ್, ಡಿಸ್ಕ್ ಬ್ರೇಕ್ ವಿತ್ ಅಲಾಯ್ ವೀಲ್ 70,800 ರುಪಾಯಿ (ಎಕ್ಸ್ ಶೋರೂಮ್, ದೆಹಲಿ) ಬೆಲೆಯಿದೆ ಎಂದು ಹೀರೋ ಮೊಟೊಕಾರ್ಪ್ ಹೇಳಿಕೆಯಲ್ಲಿ ತಿಳಿಸಿದೆ.
ಹೊಸ ಬೈಕ್ ಬಿಡುಗಡೆ ಕುರಿತು ಪ್ರತಿಕ್ರಿಯಿಸಿದ ಹೀರೋ ಮೊಟೊಕಾರ್ಪ್ ಮುಖ್ಯಸ್ಥ ಮಾಲೋ ಲೆ ಮಾಸನ್, "ಸೂಪರ್ ಸ್ಪ್ಲೆಂಡರ್ ಭಾರತದ ಅತ್ಯಂತ ಜನಪ್ರಿಯ ಮೋಟರ್ ಸೈಕಲ್ಗಳಲ್ಲಿ ಒಂದಾಗಿದೆ ಮತ್ತು ಹೊಸ ಸೂಪರ್ ಸ್ಪ್ಲೆಂಡರ್ ಬಿಎಸ್-VI ನೊಂದಿಗೆ ಈ ಪ್ರವೃತ್ತಿ ಮತ್ತಷ್ಟು ಬಲಗೊಳ್ಳುತ್ತದೆ ಎಂದು ನಮಗೆ ಖಾತ್ರಿಯಿದೆ. " ಎಂದು ಹೇಳಿದ್ದಾರೆ.
ಸೂಪರ್ ಸ್ಪ್ಲೆಂಡರ್ ಬಿಎಸ್-VI ಹಿಂದಿಗಿಂತಲೂ ಹೆಚ್ಚು ಸಮರ್ಥವಾಗಿಸಲು ಪರಿಷ್ಕರಿಸಲಾಗಿದೆ ಎಂದು ಹೀರೋ ಮೋಟೊಕಾರ್ಪ್ ತಿಳಿಸಿದೆ.
More From GoodReturns

Gold Rate: ಬೆಂಗಳೂರಲ್ಲಿ ಚಿನ್ನದ ಬೆಲೆ ಏರಿಕೆ…24K/100 ಗ್ರಾಂ ಚಿನ್ನದಲ್ಲಿ ಬರೋಬ್ಬರಿ 5,500 ರೂ. ಏರಿಕೆ!

Bengaluru Airport: ಫ್ರಾಂಕ್ಫರ್ಟ್ ಕಾರ್ಗೋ ಜೊತೆ ಕೆಂಪೇಗೌಡ ಏರ್ಪೋರ್ಟ್ ಮೈತ್ರಿ… ಭಾರತ–ಯುರೋಪ್ ವ್ಯಾಪಾರಕ್ಕೆ ಹೊಸ ವೇಗ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Gold Rate: ಅಂತೂ ಇಳಿಕೆ ಹಾದಿಗೆ ಬಂದ ಚಿನ್ನದ ಬೆಲೆ…ಬೆಂಗಳೂರಿನಲ್ಲಿ ಇಂದಿನ ರೇಟ್ ಎಷ್ಟು?

Tata Groups: ಕರ್ನಾಟಕದಲ್ಲಿ ಟಾಟಾ ಸಂಸ್ಥೆ 2.9 ಬಿಲಿಯನ್ ಡಾಲರ್ ಹೂಡಿಕೆ…ಸಾವಿರಾರು ಉದ್ಯೋಗಿಗಳಿಗೆ ಗುಡ್ನ್ಯೂಸ್!

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Bengaluru Gold Rate: ಬೆಂಗಳೂರಿನಲ್ಲಿ ಗಗನಕ್ಕೇರಿದ ಚಿನ್ನದ ಬೆಲೆ! ದಿಢೀರ್ 31,600 ರೂ. ಏರಿಕೆ

Iran-Israel War: ಇಸ್ರೇಲ್-ಅಮೆರಿಕ ವೈಮಾನಿಕ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮರಣ!

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ: ಭಾರತೀಯ ಷೇರು ಮಾರುಕಟ್ಟೆ, ಚಿನ್ನ-ಬೆಳ್ಳಿ ಮತ್ತು ತೈಲ ಬೆಲೆ ಮೇಲೆ ತೀವ್ರ ಪರ

Karnataka: ಕರ್ನಾಟಕ ಕೈಗಾರಿಕೆಯಲ್ಲಿ ಹೊಸ ಕ್ರಾಂತಿ…ಏರೋಸ್ಪೇಸ್, ರಕ್ಷಣಾ, EV ಮತ್ತು ಹಸಿರು ಇಂಧನದಲ್ಲಿ ನೂತನ ದಿಕ್ಕು!



Click it and Unblock the Notifications