ಮೊಬೈಲ್ ಮೆಸೇಜಿಂಗ್ ಪ್ಲಾಟ್ ಫಾರ್ಮ್ ಆದ 'ಹೈಕ್'ನ ಎಲ್ಲ ಸಿಬ್ಬಂದಿ ಈ ವರ್ಷವಿಡೀ ವರ್ಕ್ ಫ್ರಮ್ ಹೋಮ್ ಮಾಡಲಿದ್ದಾರೆ ಎಂದು ಕಂಪೆನಿ ತಿಳಿಸಿದೆ. ಮನೆಯಲ್ಲೇ ಉದ್ಯೋಗ ಸ್ಥಳದ ಅಗತ್ಯವನ್ನು ಪೂರೈಸುವ ಕಾರಣಕ್ಕಾಗಿ ಪ್ರತಿ ಸಿಬ್ಬಂದಿಗೆ 40 ಸಾವಿರ ರುಪಾಯಿ ತನಕ ವೆಚ್ಚ ಮಾಡಲಾಗುವುದು ಎಂದು ತಿಳಿಸಲಾಗಿದೆ.
ಇನ್ನು ಕಂಪೆನಿಯಿಂದ ಕಚೇರಿಯನ್ನು ಸಹ ಸಿಬ್ಬಂದಿಗೆ ಮುಕ್ತವಾಗಿ ತೆರೆಯಲಾಗಿದೆ. ಯಾರು ವಿಶೇಷ ತಂತ್ರಜ್ಞಾನವನ್ನು ಬಳಕೆ ಮಾಡಬೇಕು ಅಂತ ಇರುತ್ತಾರೋ ಅಂಥವರು ಕಚೇರಿ ಆವರಣದೊಳಗೆ ಲಭ್ಯವಿರುವುದನ್ನು ಬಳಸಬಹುದು. ಕೊರೊನಾದ ಹಿನ್ನೆಲೆಯಲ್ಲಿ ಸಿಬ್ಬಂದಿಯ ಸುರಕ್ಷತೆ ಹಾಗೂ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು, 2020ನೇ ಇಸವಿಯ ಬಾಕಿ ಅವಧಿಗೆ ದೂರದಿಂದ ಕೆಲಸ ಮಾಡುವುದಕ್ಕೆ ಮೊದಲ ಆದ್ಯತೆ ಎಂಬ ನಿಲುವು ಅಳವಡಿಕೊಳ್ಳಲಾಗಿದೆ.
'ಹೈಕ್'ಗೆ ಬೆಂಬಲವಾಗಿ ಜಾಗತಿಕ ಹೂಡಿಕೆದಾರರಾದ ಸಾಫ್ಟ್ ಬ್ಯಾಂಕ್, ಟೈಗರ್ ಗ್ಲೋಬಲ್, ಫಾಕ್ಸ್ ಕಾನ್ ಹಾಗೂ ಭಾರ್ತಿ ಎಂಟರ್ ಪ್ರೈಸಸ್ ಇವೆ. ಕಂಪೆನಿಯಲ್ಲಿ ಸದ್ಯಕ್ಕೆ 160ಕ್ಕಿಂತ ಸ್ವಲ್ಪ ಹೆಚ್ಚಿನ ಸಂಖ್ಯೆ ಸಿಬ್ಬಂದಿ ಇದ್ದಾರೆ. ಎಲ್ಲಕ್ಕಿಂತ ಕಂಪೆನಿಯ ಸಿಬ್ಬಂದಿಯ ಸೌಖ್ಯ ಮುಖ್ಯ. ಆದ್ದರಿಂದ ದೂರದಿಂದಲೇ ಕಾರ್ಯ ನಿರ್ವಹಿಸುವುದು ಕಾರ್ಯ ನಿರ್ವಹಣೆ ವಿಧಾನದ ಮೊದಲ ಆದ್ಯತೆ ಮಾಡಿಕೊಂಡಿರುವುದಾಗಿ ಹೇಳಿಕೆ ನೀಡಲಾಗಿದೆ.

ಆದರೂ ಕಚೇರಿಗೆ ಬಂದು ಕೆಲಸ ಮಾಡಬೇಕು ಅನ್ನುವವರಿಗೆ ಅದೊಂದು ಆಯ್ಕೆ ಮುಕ್ತವಾಗಿರುತ್ತದೆ. ಆದರೆ ಅದಕ್ಕೆ ಸಾಮಾಜಿಕ ಅಂತರವೂ ಸೇರಿದಂತೆ ಇತರ ಕಠಿಣ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಲಾಗಿದೆ. ಇನ್ನು ಸಿಬ್ಬಂದಿಗೆ ಮನೆಯಲ್ಲೇ ಕಚೇರಿಗೆ ಬೇಕಾದ ವಾತಾವರಣವನ್ನು ರೂಪಿಸಲು ತಲಾ 40 ಸಾವಿರ ರುಪಾಯಿ ಖರ್ಚು ಮಾಡಲಿದೆ.
ದೆಹಲಿ- ಎನ್ ಸಿಆರ್ ನಲ್ಲಿ ವಾಸ ಇರುವ ಕಂಪೆನಿಯ ಸಿಬ್ಬಂದಿಗೆ ಕಚೇರಿಯಲ್ಲಿ ಬಳಸುವಂಥ ಚೇರ್, ಹೊಸ ಆಫೀಸ್ ಟೇಬಲ್ ನೀಡಲಾಗುತ್ತಿದೆ. ಸಿಬ್ಬಂದಿಯು ತಮ್ಮ ಅಗತ್ಯಕ್ಕೆ ತಕ್ಕಂತೆ ಚೇರ್- ಟೇಬಲ್ ಖರೀದಿಸಿ, ಹತ್ತು ಸಾವಿರ ರುಪಾಯಿ ತನಕ ಹಣವನ್ನು ಕಂಪೆನಿಯಿಂದ ಪಡೆಯಬಹುದು. ಇದರ ಜತೆಗೆ ಇಂಟರ್ನೆಟ್ ಹಾಗೂ ಐ.ಟಿ. ಸಲಕರಣೆ ಅಗತ್ಯಗಳನ್ನು ಸಹ 'ಹೈಕ್'ನಿಂದ ಒದಗಿಸಲಾಗುತ್ತಿದೆ.


Click it and Unblock the Notifications