ಭಾರತದ ಅತಿ ದೊಡ್ಡ ಮದ್ಯದ ಕಂಪೆನಿ ಯುನೈಟೆಡ್ ಸ್ಪಿರಿಟ್ಸ್ ಅನ್ನು ಮಹಿಳೆಯೊಬ್ಬರು ಮುನ್ನಡೆಸಲಿದ್ದಾರೆ. ಸದ್ಯಕ್ಕೆ ಆಫ್ರಿಕಾ ಮಾರುಕಟ್ಟೆಯ ಕಾರ್ಯನಿರ್ವಾಹಕ ನಿರ್ದೇಶಕಿ ಆಗಿರುವ ಹಿನಾ ನಾಗರಾಜನ್ ಅವರು, ಸಿಇಒ ಮತ್ತು ಎಂ.ಡಿ. ಆನಂದ್ ಕ್ಟಪಾಳು ಅವರಿಂದ ಮುಂದಿನ ಜುಲೈನಲ್ಲಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಅಂದ ಹಾಗೆ ಯುನೈಟೆಡ್ ಸ್ಪಿರಿಟ್ಸ್ ಅನ್ನು ಡಿಯಾಜಿಯೋದಿಂದ ಖರೀದಿ ಮಾಡಲಾಗಿದೆ.
ಮದ್ಯದ ಉತ್ಪಾದನೆ ಕ್ಷೇತ್ರದಲ್ಲಿ ಪುರುಷರದೇ ಪಾರಮ್ಯವಾದರೆ, ಅದನ್ನು ಸೇವಿಸುವವರಲ್ಲಿ ಮಹಿಳೆಯರಿಗಿಂತ ಪುರುಷರೇ ಹೆಚ್ಚು. ಭಾರತದಲ್ಲಿ ಮಹಿಳೆಯರು, ಅದರದಲ್ಲೂ ಬಡ ಮಹಿಳೆಯರು ಮದ್ಯ ಸೇವನೆಯನ್ನು ವಿರೋಧಿಸುತ್ತಾ ಬಂದಿದ್ದಾರೆ. ಹಿನಾ ನಾಗರಾಜನ್ ಅವರು ಈ ಹಿಂದೆ ರೆಂಕಿಂಟ್ ಬೆಂಕೈಸರ್ ಜತೆಗಿದ್ದರು.
ಭಾರತದಲ್ಲಿ ಸ್ಪಿರಿಟ್ ಕಂಪೆನಿ ಮುನ್ನಡೆಸುತ್ತಿರುವ ಮೊದಲ ಮಹಿಳೆ ಹಿನಾ ಅವರೇ ಎಂದೇನಲ್ಲ. ಆದರೆ ಅತಿ ದೊಡ್ಡ ಮದ್ಯದ ಕಂಪೆನಿ ಮುನ್ನಡೆಸಲಿರುವ ಮೊದಲನೆಯವರು ಆಕೆ.

ಅಬಂತಿ ಶಂಕರ್ ನಾರಾಯಣನ್ ಸದ್ಯಕ್ಕೆ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ನಲ್ಲಿ ಚೀಫ್ ಸ್ಟ್ರಾಟೆಜಿ ಮತ್ತು ಕಾರ್ಪೊರೇಟ್ ವ್ಯವಹಾರಗಳ ಅಧಿಕಾರಿ ಆಗಿದ್ದಾರೆ. ಅವರು 2010ರಿಂದ 2015ರ ಮಧ್ಯೆ ಡಿಯಾಜಿಯೋ ಎಂ.ಡಿ. ಆಗಿದ್ದರು. ಆಗ ಡಿಯಾಜಿಯೋ ಕಂಪೆನಿ ಅಸ್ತಿತ್ವ ಸ್ವಲ್ಪ ಪ್ರಮಾಣದಲ್ಲಿದೆ. ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಖರೀದಿ ಮಾಡಿದ ಮೇಲೆ ನಂಬರ್ ಒನ್ ಸ್ಥಾನಕ್ಕೆ ಮೇಲೇರಿತು.
ಒಪ್ಪಂದ ಮುಗಿಯುವ ಒಂದು ವರ್ಷದ ಮೊದಲು, ಮುಂದಿನ ವರ್ಷದ ಜೂನ್ ನಲ್ಲಿ ತಮ್ಮ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ ಕೃಪಾಳು. ಅವರು ಕಂಪೆನಿಗೆ ಸೇರಿದ್ದು 2013ರಲ್ಲಿ. ಕಂಪೆನಿಯ ಅತ್ಯುನ್ನತ ಸ್ಥಾನಕ್ಕೆ ಏರಿದ್ದು ಅದರ ಮರುವರ್ಷದ ಮೇ ತಿಂಗಳಲ್ಲಿ. ಆದರೆ ಈ ಅವಧಿಯಲ್ಲಿ ಕೊರೊನಾ ಸೇರಿದಂತೆ ನಾನಾ ಸವಾಲುಗಳನ್ನು ಅವರು ಎದುರಿಸಿದ್ದಾರೆ.
ಕಳೆದ ವರ್ಷ ಕಂಪೆನಿಯೇನೋ ಅವರ ಅವಧಿಯನ್ನು 2022ರ ತನಕ ವಿಸ್ತರಿಸಿತ್ತು. ಆದರೆ ಬೇರೆ ಅವಕಾಶಗಳಿಗಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ತಿಳಿಸಲಾಗಿದೆ.


Click it and Unblock the Notifications