For Quick Alerts
ALLOW NOTIFICATIONS  
For Daily Alerts

ಹಾರ್ಲಿಕ್ಸ್, ಬೂಸ್ಟ್ ಇನ್ಮುಂದೆ ಹಿಂದೂಸ್ತಾನ್ ಯುನಿಲಿವರ್ ಪಾಲು

|

ಹಾರ್ಲಿಕ್ಸ್, ಬೂಸ್ಟ್ ಗಳನ್ನು ಇನ್ನು ಮುಂದೆ ಹಿಂದೂಸ್ತಾನ್ ಯುನಿಲಿವರ್ ಕಂಪೆನಿ ಹೊರ ತರಲಿದೆ. ಗ್ಲಾಕ್ಸೋಸ್ಮಿತ್ ಕ್ಲೈನ್ ಕನ್ಸ್ಯೂಮರ್ ಹೆಲ್ತ್ ಕೇರ್ ಈಗ ಹಿಂದೂಸ್ತಾನ್ ಯುನಿಲಿವರ್ ಜತೆಗೆ ವಿಲೀನವಾಗಿದೆ. ಈ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಎಚ್ ಯುಎಲ್ ಬುಧವಾರ ಘೋಷಣೆ ಮಾಡಿದೆ. ಈ ವಿಲೀನದ ಬಗ್ಗೆ 2018ರ ಡಿಸೆಂಬರ್ ನಲ್ಲಿ ಘೋಷಣೆ ಮಾಡಲಾಗಿತ್ತು.

 

ಇತ್ತೀಚೆಗೆ ಎಫ್ ಎಂಸಿಜಿ ವಲಯದಲ್ಲಿ ನಡೆದ ಅತಿ ದೊಡ್ಡ ವಿಲೀನ ಇದು. ಇದರಿಂದ ಎಲ್ಲರಿಗೂ ಅನುಕೂಲ ಆಗಲಿದೆ ಎಂದು ಎಚ್ ಯುಎಲ್ ಹೇಳಿದೆ. ಭಾರತದ ಹಾರ್ಲಿಕ್ಸ್ ಬ್ರ್ಯಾಂಡ್ ಅನ್ನು ಗ್ಲಾಕ್ಸೋಸ್ಮಿತ್ ಕ್ಲೈನ್ ಕನ್ಸ್ಯೂಮರ್ ಹೆಲ್ತ್ ಕೇರ್ ನಿಂದ 3045 ಕೋಟಿ ರುಪಾಯಿಗೆ ಖರೀದಿಸಿದೆ ಎಚ್ ಯುಎಲ್. ಅಂದ ಹಾಗೆ ಇದರ ಜತೆಗೆ ಬೂಸ್ಟ್, ಮಾಲ್ಟೋವಾ, ವಿವಾ ಕೂಡ ಇನ್ನು ಮುಂದೆ ಎಚ್ ಯುಎಲ್ ನಿಂದ ಹೊರಬರಲಿದೆ.

 
ಹಾರ್ಲಿಕ್ಸ್, ಬೂಸ್ಟ್ ಇನ್ಮುಂದೆ ಹಿಂದೂಸ್ತಾನ್ ಯುನಿಲಿವರ್ ಪಾಲು

ಗ್ಲಾಕ್ಸೋಸ್ಮಿತ್ ಕ್ಲೈನ್ ಕನ್ಸ್ಯೂಮರ್ ಹೆಲ್ತ್ ಕೇರ್ ಕಳೆದ ಆರ್ಥಿಕ ವರ್ಷದಲ್ಲಿ 4500 ಕೋಟಿ ರುಪಾಯಿಯ ವಹಿವಾಟು ನಡೆಸಿದೆ. ಇದರಲ್ಲಿ ಮುಖ್ಯ ಪಾಲು ಬಂದಿರುವುದು ಹಾರ್ಲಿಕ್ಸ್, ಬೂಸ್ಟ್ ಬ್ರ್ಯಾಂಡ್ ಗಳಿಂದ. ಇನ್ನು ಷೇರುದಾರರಿಗೆ ಗ್ಲಾಕ್ಸೋಸ್ಮಿತ್ ಕ್ಲೈನ್ ಕನ್ಸ್ಯೂಮರ್ ಹೆಲ್ತ್ ಕೇರ್ ನ ಒಂದು ಷೇರಿಗೆ ಪ್ರತಿಯಾಗಿ 4.39 ಹಿಂದೂಸ್ತಾನ್ ಯುನಿಲಿವರ್ ಕಂಪೆನಿಯ ಷೇರುಗಳು ದೊರೆಯಲಿವೆ.

Read more about: business ವಾಣಿಜ್ಯ
English summary

Horlicks, Boost Brand Will Come Under HUL

GlaxoSmithKline Health care merged with HUL. Here is the complete details of the merger.
Story first published: Wednesday, April 1, 2020, 17:58 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X