ಬೆಂಗಳೂರಿನ ಪಕ್ಕದಲ್ಲೇ ಮತ್ತೊಂದು ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಲು ತಮಿಳುನಾಡು ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ. ಹೊಸೂರಿನಲ್ಲಿ 2,000 ಎಕರೆ ವಿಸ್ತಾರ ಪ್ರದೇಶದಲ್ಲಿ ಹೊಸ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ಮಿಸಲಾಗುವುದು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ವಿಧಾನಸಭೆಯಲ್ಲಿ ಘೋಷಣೆಯನ್ನು ಮಾಡಿದ್ದರು.ತದನಂತರ ಈಗಾಗಲೇ ವಿಮಾಣ ನಿಲ್ದಾಣ ಮಾಡಲು ಸ್ಥಳ ನಿಗದಿಯನ್ನು ಶಾಟ್ಟ್ ಲಿಸ್ಟ್ ಸಹ ಮಾಡಿದೆ. ಆದ್ದರೆ ಎರಡು ಶಾಟ್ಟ್ ಲಿಸ್ಟ್ ಮಾಡಿದ ಸ್ಥಳಗಳ ವಿವರವಾದ ಅಧ್ಯಯನ ಯಾವಗ ಪೂರ್ಣಗೊತ್ತದೆ? ಎಲ್ಲಿ ವಿಮಾನ ನಿಲ್ದಾಣ ರೆಡಿಯಾಗುತ್ತದೆ ಎಂಬ ದೊಡ್ಡ ಅಪ್ಡೇಟ್ಸ್ ವೊಂದು ಸಿಕ್ಕಿದೆ.
ಹೌದು,ಬೆಂಗಳೂರಿನ ಪಕ್ಕದಲ್ಲಿರುವ ಕೈಗಾರಿಕಾ ನಗರ ಹೊಸೂರಿನಲ್ಲಿ ವಿಮಾನ ನಿಲ್ದಾಣವಾಗುತ್ತದೆ. ತಮಿಳುನಾಡು ಸರ್ಕಾರ ಈಗಾಗಲೇ ಗುರುತಿಸಿರುವ ಎರಡು ಸ್ಥಳಗಳು ತನೇಜಾ ಏರೋಸ್ಪೇಸ್ ಮತ್ತು ಏವಿಯೇಷನ್ ಮಾಲೀಕತ್ವದ ಖಾಸಗಿ ವಿಮಾನ ನಿಲ್ದಾಣದಿಂದ 10 ಕಿ.ಮೀ ದೂರದಲ್ಲಿರುವ ಎರಡು ಸೈಟ್‌ಗಳನ್ನು ತಮಿಳುನಾಡು ಸರ್ಕಾರವು ಹೊಸೂರ್‌ಗೆ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣವನ್ನು ನಿರ್ಮಿಸಲು ಸ್ಥಳ ಅಧ್ಯಯನಕ್ಕಾಗಿ ಶಾರ್ಟ್‌ಲಿಸ್ಟ್ ಮಾಡಿತ್ತು.

ಸೆಪ್ಟೆಂಬರ್‌ನಲ್ಲಿ ರಾಜ್ಯ ಸರ್ಕಾರ ಮಾಡಿದ ಮನವಿಯ ಆಧಾರದ ಮೇಲೆ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ಸಮೀಕ್ಷೆ ನಡೆಸಿದ ಐದು ಸ್ಥಳಗಳಿಂದ ಈ ಸೈಟ್‌ಗಳನ್ನು ಆಯ್ಕೆ ಮಾಡಲಾಗಿತ್ತು. ವಿಮಾನ ನಿಲ್ದಾಣ ನಿರ್ಮಿಸಲು ಯೋಜಿಸಲಾಗುತ್ತಿರುವ ಸ್ಥಳವನ್ನು ತಮಿಳುನಾಡು ಸರ್ಕಾರ ಏಪ್ರಿಲ್ ವೇಳೆಗೆ ಅಂತಿಮಗೊಳಿಸುವ ನಿರೀಕ್ಷೆಯಿದೆ.
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಎರಡು ಶಾಟ್ ಲಿಸ್ಟ್ ಮಾಡಿದ ಸ್ಥಳಗಳ ವಿವರವಾದ ಅಧ್ಯಯನವು ಒಂದು ವಾರದೊಳಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ ಎಂದು ವರದಿಗಳು ಆಗಿವೆ.
ಬೆಳಗೊಂಡಪಲ್ಲಿಯಲ್ಲಿರುವ ತನೇಜಾ ಏವಿಯೇಷನ್ ಮತ್ತು ಏರೋಸ್ಪೇಸ್ ಲಿಮಿಟೆಡ್ (ಟಿಎಎಎಲ್) ಒಡೆತನದ ಖಾಸಗಿ ವಿಮಾನ ನಿಲ್ದಾಣದ ಸಮೀಪವಿರುವ ಹಳ್ಳಿಗಳು ಸೇರಿದಂತೆ ಎರಡು ಸ್ಥಳಗಳ ವಿವರವಾದ ಸಮೀಕ್ಷೆಯನ್ನು ಎಎಐ ಪ್ರಸ್ತುತ ಕೈಗೊಳ್ಳುತ್ತಿದೆ. ಎಎಐ ವರದಿಯನ್ನು ಸಲ್ಲಿಸಿದ ನಂತರ, ತಮಿಳುನಾಡಿನ ಡಿಎಂಕೆ ಸರ್ಕಾರವು ಈ ಬಗ್ಗೆ ಚರ್ಚಿಸಿ ಸಂಪರ್ಕ, ಭೂಮಿಯ ಸೌಲಭ್ಯ ಎಲ್ಲಾ ವಿಷಯಗಳನ್ನು ಅಧ್ಯಾಯ ಮಾಡಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಉತ್ತಮ ಸ್ಥಳ ವನ್ನು ಅಂತಿಮಗೊಳಿಸುತ್ತದೆ ಎಂದು ಅಭಿವೃದ್ಧಿಯ ಬಗ್ಗೆ ಮಾಹಿತಿಯನ್ನು ತಿಳಿಸಿದೆ ಎಂದು ಡೆಕನ್ ಹೆರಾಲ್ಡ್ ವದರಿ ಮಾಡಿದೆ.
ವಿಮಾಣ ನಿಲ್ದಾಣ ನಿರ್ಮಾಣ ಮಾಡಲು ಕಡಿಮೆ ಜನವಸತಿ,ಸುತ್ತಮುತ್ತಲ ಪ್ರದೇಶಗಳಲ್ಲಿ ಪ್ರಮುಖ ಜಲಮೂಲಗಳಿಲ್ಲದಿರುವುದು ಮತ್ತು ಸರ್ಕಾರಿ ಭೂಮಿಯ ಪ್ರಮಾಣವು ಸ್ಥಳವನ್ನು ಅಂತಿಮಗೊಳಿಸಲು ಸಹಾಯ ಮಾಡುವ ಕೆಲವು ಪ್ರಮುಖ ಅಂಶಗಳನ್ನು ಗಮನವರಿಸುತ್ತದೆ ಎಂದು ಎಎಐ ವರದಿಯು ನಮಗೆ ನಿರ್ಧಾರ ತೆಗೆದುಕೊಳ್ಳುವಷ್ಟು ವಿವರವಾಗಿರುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಮೂಲವೊಂದು ಮಾಹಿತಿಯನ್ನು ತಿಳಿಸಿದೆ.
ತಮಿಳುನಾಡು ಸರ್ಕಾರ ಸೂಚಿಸಿದ ಐದು ಸ್ಥಳಗಳ ಸಮೀಕ್ಷೆಯ ನಂತರ AAI ನಡೆಸಿದ ನಂತರ ಅಧ್ಯಯನ ಮಾಡಲಾಗುತ್ತಿರುವ ಎರಡು ಸ್ಥಳಗಳನ್ನು ಶಾಟ್ ಲಿಸ್ಟ್ ಮಾಡಲಾಗಿದೆ.ನಾವು ಏಪ್ರಿಲ್ ವೇಳೆಗೆ ಸ್ಥಳವನ್ನು ನಿರ್ಧರಿಸುತ್ತೇವೆ ಎಂದು ಮತ್ತೊಂದು ಮೂಲ ಮಾಹಿತಿಯನ್ನು ತಿಳಿಸಿದೆ.
ಎಚ್ ಎಎಲ್ ವಿಮಾನ ನಿಲ್ದಾಣವನ್ನು ಪುನರ್ ನಿರ್ಮಾಣ ಪ್ರಯತ್ನದ ಜೊತೆಗೆ, ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣಕ್ಕಾಗಿ ಭೂಮಿಯನ್ನು ಹುಡುಕುತ್ತಿರುವ ಕರ್ನಾಟಕ ಸರ್ಕಾರಕ್ಕೆ ಈ ಬೆಳವಣೆಗೆ ಪ್ರಮುಖ ಕಾರಣವಾಗಬಹುದು.
ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾದರೂ, ತಮಿಳುನಾಡಿಗೆ ಹತ್ತಿರವಿರುವ ಕಾರಣ ದಕ್ಷಿಣ ಬೆಂಗಳೂರಿನ ಜನರ ಅಗತ್ಯಗಳನ್ನು ಪೂರೈಸುವ ಸಾಧ್ಯತೆಯಿದೆ. ಫೆಬ್ರವರಿ 21 ರಂದು ನಡೆದ ಬೆಂಗಳೂರು 2040 ಶೃಂಗಸಭೆಯಲ್ಲಿ, ಏರ್ ಡೆಕ್ಕನ್ ಸಂಸ್ಥಾಪಕ ಕ್ಯಾಪ್ಟನ್ ಜಿ.ಆರ್. ಗೋಪಿನಾಥ್, ಕರ್ನಾಟಕವು ಹೊಸೂರಿನಲ್ಲಿ ವಿಮಾನ ನಿಲ್ದಾಣವನ್ನು ನಿರ್ಮಿಸಲು ಆಕ್ಷೇಪಿಸಬಾರದು ಎಂದು ಹೇಳಿದರು, ಏಕೆಂದರೆ ಅವರ ಆರ್ಥಿಕತೆಯು ಬೆಂಗಳೂರನ್ನು ಆಧರಿಸಿದೆ ಎಂದು ಅವರು ಹೇಳಿದರು.
ಸ್ಥಳ ನಿರ್ಧಾರವಾದ ನಂತರ, ಸರ್ಕಾರವು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಮತ್ತು ಸ್ಥಳ ತೆರವು ಮತ್ತು ಕೇಂದ್ರ ಸರ್ಕಾರದಿಂದ ತಾತ್ವಿಕ ಅನುಮೋದನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತದೆ ಎಂದು ಮೂಲಗಳು ತಿಳಿಸಿವೆ ಇದಕ್ಕಾಗಿ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (BIAL) ನಿರಾಕ್ಷೇಪಣಾ ಪ್ರಮಾಣಪತ್ರವನ್ನು (NOC) ಸಹ ನೀಡಲಾಗುತ್ತದೆ.
ಬಿಐಎಎಲ್ ವಿಮಾನ ನಿಲ್ದಾಣ 2030 ರವರೆಗೆ 150 ಕಿ.ಮೀ ಒಳಗೆ ಯಾವುದೇ ವಿಮಾನ ನಿಲ್ದಾಣದ ಯಾವುದೇ ಸೌಲಭ್ಯ ಬರಬಾರದು ಎಂಬ ರಿಯಾಯಿತಿ ಒಪ್ಪಂದಕ್ಕೆ ವಿಮಾನ ನಿಲ್ದಾಣ ನಿರ್ವಾಹಕರು ಮತ್ತು ಕೇಂದ್ರ ಸರ್ಕಾರ ಸಹಿ ಹಾಕಿರುವುದರಿಂದ ಹೊಸೂರಿನಲ್ಲಿ ವಿಮಾನ ನಿಲ್ದಾಣವನ್ನು ನಿರ್ಮಿಸಲು ಬಿಐಎಎಲ್‌ನಿಂದ ಹಸಿರು ನಿಶಾನೆ ಅಗತ್ಯವಾಗಿದೆ.
ಸದ್ಯಕ್ಕೆ ಒಂದೇ ರನ್ ಹೊಂದಿರುವ ಹೊಸ ವಿಮಾನ ನಿಲ್ದಾಣವು 2,000 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಲಿದೆ. ಫೆಬ್ರವರಿಯಲ್ಲಿ, ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಅವರು, ತಮಿಳುನಾಡು ಸರ್ಕಾರ, ಬಿಐಎಎಲ್ ಮತ್ತು ಕೇಂದ್ರ ಸರ್ಕಾರವು ಹೊಸೂರು ವಿಮಾನ ನಿಲ್ದಾಣದ ವಿಷಯದ ಬಗ್ಗೆ ಕುಳಿತು ನಿರ್ಧಾರ ತೆಗೆದುಕೊಳ್ಳಬೇಕೆಂದು ಪ್ರಸ್ತಾಪಿಸಿದರು.


Click it and Unblock the Notifications