ವಾವ್..! ಎರಡು ರನ್‌ವೇ.. 2,000 ಎಕರೆಗಳಲ್ಲಿ ಸೊಗಸಾದ ಏರ್ಪೋರ್ಟ್ ನಿರ್ಮಾಣ.. ಎಲ್ಲಿ ಗೊತ್ತಾ?

ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಗ್ಗೆ ಮತ್ತೊಂದು ಅಪ್ಡೇಟ್ ಬಹಿರಂಗ! ಎರಡು ರನ್‌ವೇ.. ಬರೋಬ್ಬರಿ 2,000 ಎಕರೆಗಳಲ್ಲಿ ಸೊಗಸಾದ ಏರ್ಪೋರ್ಟ್ ನಿರ್ಮಾಣ ಖಚಿತ. ಹೌದು, ಹೊಸೂರು ವಿಮಾನ ನಿಲ್ದಾಣ ಎರಡು ರನ್ ವೇ ಹೊಂದಿರುತ್ತದೆ. ಈ ಮೂಲಕ ಎರಡೂ ರನ್‍ವೇಗಳಲ್ಲಿ ಒಂದೇ ಸಮಯದಲ್ಲಿ ವಿಮಾನಗಳು ಮೇಲಕ್ಕೆ ಹಾರುವ, ಕೆಳಕ್ಕೆ ಇಳಿಯುವ ಕಾರ್ಯಾಚರಣೆ ನಡೆಸಲಿವೆ.

ಹೊಸೂರು ವಿಮಾನ ನಿಲ್ದಾಣಕ್ಕೆ ಎರಡು ರನ್‌ವೇ ಎರಡನೇ ಹಂತದ ಅಧ್ಯಯನವು ಸೈಟ್ ಅನ್ನು ಅಂತಿಮಗೊಳಿಸಲು ಪ್ರಾರಂಭಿಸುತ್ತದೆ. ಎರಡು ರನ್‌ವೇಗಳೊಂದಿಗೆ, ಹೊಸೂರು ವಿಮಾನ ನಿಲ್ದಾಣವನ್ನು 2,000 ಎಕರೆಗಳಲ್ಲಿ ನಿರ್ಮಿಸಲಾಗುವುದು ಮತ್ತು ಎರಡು ಶಾರ್ಟ್‌ಲಿಸ್ಟ್ ಸೈಟ್‌ಗಳ ಎರಡನೇ ಹಂತದ ಅಧ್ಯಯನವು ಇದೀಗ ಪ್ರಾರಂಭವಾಗುತ್ತದೆ.

2,000 ಎಕರೆಯಲ್ಲಿ ಹೊಸ ಏರ್ಪೋರ್ಟ್.. ಎಲ್ಲಿ ಗೊತ್ತಾ?

ಮೊದಲ ಸೈಟ್ ತನೇಜಾ ಏರೋಸ್ಪೇಸ್ ಮತ್ತು ಏವಿಯೇಷನ್ ​​ಲಿಮಿಟೆಡ್ (TAAL) ನಿರ್ವಹಿಸುವ ಖಾಸಗಿ ಏರ್‌ಸ್ಟ್ರಿಪ್‌ನಿಂದ 1.5 ಕಿಮೀ ದೂರದಲ್ಲಿದ್ದರೆ, ಎರಡನೆಯದು ಉಲಗಮ್ ಬಳಿ (ಹೊಸೂರಿನ ಪೂರ್ವ ಮತ್ತು ಶೂಲಗಿರಿಯ ಉತ್ತರ) 15.5 ಕಿಮೀ ದೂರದಲ್ಲಿದೆ ಎಂದು ಮೂಲಗಳ ಮೂಲಕ ಮಾಹಿತಿ ತಿಳಿದು ಬಂದಿದೆ.

ವಿಮಾನ ನಿಲ್ದಾಣಕ್ಕೆ ತನೇಜಾ ಏರೋಸ್ಪೇಸ್ ಮತ್ತು ಏವಿಯೇಷನ್' ಮಾಲಿಕತ್ವದ ಖಾಸಗಿ ವಿಮಾನ ನಿಲ್ದಾಣದಿಂದ 10ಕಿ.ಮೀ ದೂರದಲ್ಲಿರುವ ಎರಡು ಸ್ಥಳಗಳನ್ನು ತಮಿಳುನಾಡು ಸರ್ಕಾರವು ಅಧ್ಯಯನಕ್ಕಾಗಿ ಶಾರ್ಟ್ ಲಿಸ್ಟ್ ಮಾಡಿತ್ತು. ವಿಮಾನ ನಿಲ್ದಾಣದ ಸ್ಥಳದ ಆಯ್ಕೆಯ ಬಗ್ಗೆ ರಾಜ್ಯ ಸರ್ಕಾರದ ಮನವಿಯ ಮೇರೆಗೆ ಈ ವರ್ಷದ ಸೆಪ್ಟೆಂಬರ್ ನಲ್ಲಿ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ(ಎಎಐ) ಸಮೀಕ್ಷೆ ನಡೆಸಿದ ಐದು ಸ್ಥಳಗಳಿಂದ ಈ ಸೈಟ್‌ ಗಳಲ್ಲಿ ಇರುವ ಜಾಗವನ್ನು ಆಯ್ಕೆ ಮಾಡಿಕೊಂಡು ಅಧ್ಯಾಯನ ಮಾಡಲಾಗಿತ್ತು.

ಹೊಸೂರು ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಆಯ್ಕೆ ಮಾಡಿದ ಸ್ಥಳಗಳಲ್ಲಿ ತೊಗರೈ ಅಗ್ರಹಾರ, ದಸಪಲ್ಲಿ ಮತ್ತು ಶೂಲಗಿರಿಯ ಸ್ಥಳಗಳು ಸಹ ಸೇರಿಗೊಂಡಿವೆ. ಈ ಸ್ಥಳಗಳು ಬೆಂಗಳೂರಿನಿಂದ ಕೇವಲ 40 ಕಿ.ಮೀ ದೂರದಲ್ಲಿದೆ. ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ಸ್ಥಳಗಳ ಪರಿಶೀಲನೆಯ ವರದಿಯನ್ನು ಸಲ್ಲಿಸಿದ ನಂತರ, ತಮಿಳುನಾಡು ಸರ್ಕಾರವು ಈ ಕುರಿತು ಚರ್ಚೆಗಳನ್ನು ಮಾಡುತ್ತಿವೆ. ಹಲವಾರು ಆಟೋಮೊಬೈಲ್ ಮತ್ತು ಉತ್ಪಾದನಾ ಘಟಕಗಳಿಗೆ ನೆಲೆಯಾಗಿರುವ ಕೃಷ್ಣಗಿರಿ ಜಿಲ್ಲೆಯ ಹೊಸೂರಿನಲ್ಲಿ ವಿಮಾನ ನಿಲ್ದಾಣವನ್ನು ನಿರ್ಮಿಸಲು ಕಳೆದ ಜೂನ್‌ನಲ್ಲಿ ತಮಿಳುನಾಡು ಸರ್ಕಾರ ಘೋಷಣೆ ಮಾಡಿತ್ತು.ಇದು ಬೆಂಗಳೂರಿಗೆ ಸಮೀಪದಲ್ಲಿರುವುದರಿಂದ, ಈ ನಗರದ ದಕ್ಷಿಣ ಭಾಗದ ನಿವಾಸಿಗಳಿಗೆ, ಹೊಸೂರು ವಿಮಾನ ನಿಲ್ದಾಣವನ್ನು ಪ್ರವೇಶಿಸಲು ಅನುಕೂಲವಾಗತ್ತದೆ ಎಂದು ವಿಮಾನ ನಿಲ್ದಾಣದ ನಿರ್ಮಾಣದ ನಿರ್ಧಾರವನ್ನು ತಗೆದುಕೊಳ್ಳಲಾಗಿತ್ತು.

ವಿಮಾನ ನಿಲ್ದಾಣದ ಸ್ಥಳ ನಿಗದಿಯ ವಿವರಗಳು

ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (AAI) ಮತ್ತು ತಮಿಳುನಾಡು ಕೈಗಾರಿಕಾ ಅಭಿವೃದ್ಧಿ ನಿಗಮದ (TIDCO) ಸದಸ್ಯರು ಸೆಪ್ಟೆಂಬರ್‌ನಲ್ಲಿ ಐದು ಸ್ಥಳಗಳನ್ನು ವಿಮಾನ ನಿಲ್ದಾಣ ಮಾಡಲು ಸೂಕ್ತವೇ ಎಂದು ಅಧ್ಯಯನ ಮಾಡಿದರು. TAAL, ಹೊಸೂರು ಏರ್‌ಸ್ಟ್ರಿಪ್‌ನಿಂದ 1.5 ಕಿಮೀ ದಕ್ಷಿಣಕ್ಕೆ, ಎರಡನೆಯದು ಉಲಗಂ ಬಳಿ, ಮೂರನೇ ಸೈಟ್ ತೊಗರೈ ಅಗ್ರಹಾರದ ಬಳಿ, ನಾಲ್ಕನೆಯದು ಉಲಗಂ ಬಳಿ ಮತ್ತು ದಸಪಲ್ಲಿ ಬಳಿ ಕೊನೆಯದಾದ ಸ್ಥಳವನ್ನು ಗುರುತು ಮಾಡಿದ್ದರು.ಹೊಸೂರು ವಿಮಾನ ನಿಲ್ದಾಣದ ನಿರ್ಮಾಣದ ಸ್ಥಳ ಅಧ್ಯಯನವನ್ನು ಮಾಡಿದ ನಂತರ, AAI ಪ್ರತಿ ಸೈಟ್‌ನ ಸಾಧಕ ಬಾಧಕಗಳನ್ನು ಪರಿಶೀಲನೆ ಮಾಡಿ ಕರಡು ವರದಿಯನ್ನು ಸರ್ಕಾರಕ್ಕೆ ಪ್ರಸ್ತುತಪಡಿದ್ದರು. ಅವರ ಶಿಫಾರಸುಗಳ ಆಧಾರದ ಮೇಲೆ, ಎರಡು ಸೈಟ್‌ಗಳನ್ನು ರಾಜ್ಯ ಸರ್ಕಾರವು ಶಾರ್ಟ್‌ಲಿಸ್ಟ್ ಮಾಡಿದೆ ಮತ್ತು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ಮಾಹಿತಿಯನ್ನು ಸಹ ನೀಡಲಾಗಿದೆ.

ರಾಜ್ಯ ಸರ್ಕಾರವು ಸೈಟ್ ಅನ್ನು ಅಂತಿಮಗೊಳಿಸಿದ ನಂತರ, ಅವರು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಮತ್ತು ರಕ್ಷಣಾ ಸಚಿವಾಲಯದಿಂದ ಅನುಮತಿಗಳನ್ನು ಪಡೆಯಬೇಕು. "ಸ್ಥಳವನ್ನು ನಿರ್ಧರಿಸಿದ ನಂತರ, ಮುಂದಿನ ಹಂತವು ಯೋಜನೆಗೆ ಭೂಸ್ವಾಧೀನಪಡಿಸಿಕೊಳ್ಳುವುದು" ಎಂದು ಮೂಲವೊಂದು ತಿಳಿಸಿದೆ.

ರಾಜ್ಯ ಸರ್ಕಾರವು ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ (ಬಿಐಎಎಲ್) ನೊಂದಿಗೆ ಚರ್ಚೆ ನಡೆಸಿದೆ ಆದರೆ ಅವರು ಹೊಸೂರು ವಿಮಾನ ನಿಲ್ದಾಣದ ಬಗ್ಗೆ ಆಸಕ್ತಿ ವಹಿಸುತ್ತಾರೆಯೇ ಎಂಬುದು ವರದಿಯಲ್ಲಿ ಇನ್ನೂ ಸ್ಪಷ್ಟವಾಗಿಲ್ಲ ಎಂದು ಮೂಲಗಳು ತಿಳಿಸಿವೆ. 2033 ರವರೆಗೆ 150 ಕಿಮೀ ವೈಮಾನಿಕ ಅಂತರದಲ್ಲಿ ಯಾವುದೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ಮಿಸಬಾರದು ಎಂದು BIAL ಕೇಂದ್ರದೊಂದಿಗೆ ಒಪ್ಪಂದ ಮಾಡಿಕೊಂಡಿರುವುದರಿಂದ ತಮಿಳುನಾಡು ಸರ್ಕಾರ ಅವರೊಂದಿಗೆ ಮೊದಲು ಸಭೆ ನಡೆಸಲು ನಿರ್ಧರಿಸಿದೆ ಎಂದು ಮಾಹಿತಿ ತಿಳಿದು ಬಂದಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+