ದೇಶದಲ್ಲಿರುವ ಆರ್ಥಿಕತೆ ಮಂದಗತಿಯಿಂದಾಗಿ 2019-20ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಮನೆಗಳ ಮಾರಾಟದಲ್ಲಿ ತೀವ್ರ ಕುಸಿತ ದಾಖಲಾಗಿದೆ. ದೇಶದ ಪ್ರಮುಖ ನಗರಗಳಲ್ಲಿ ಮನೆ ಮಾರಾಟ ಇಳಿಕೆ ಕಂಡಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 50 ಪರ್ಸೆಂಟ್ ಕುಸಿತವಾಗಿದೆ.
ಅಕ್ಟೋಬರ್‌ನಿಂದ ಡಿಸೆಂಬರ್ 2019ರ ಅವಧಿಯಲ್ಲಿ ದೇಶದ ಪ್ರಮುಖ 9 ನಗರಗಳಲ್ಲಿ 64 ಸಾವಿರ ಮನೆಗಳು ಮಾರಾಟವಾಗಿವೆ ಎಂದು ಪ್ರಾಪ್ ಟೈಗರ್ಸ್ ವರದಿ ಮಾಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 91,464 ಮನೆಗಳು ಮಾರಾಟವಾಗಿದ್ದವು, ಇದಕ್ಕೆ ಹೋಲಿಸಿದರೆ 30 ಪರ್ಸೆಂಟ್‌ಗೂ ಅಧಿಕ ಕುಸಿತಗೊಂಡಿದೆ ಎಂದು ವರದಿಯಲ್ಲಿ ಕಂಡುಬಂದಿದೆ.

2019ರ ಮೊದಲ 9 ತಿಂಗಳಲ್ಲಿ ಮನೆಗಳ ಮಾರಾಟವು 13 ಪರ್ಸೆಂಟ್ ಕುಸಿತ ಕಂಡಿತ್ತು. ಆದರೆ ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ ಇದರ ಪ್ರಮಾಣವು 30 ಪರ್ಸೆಂಟ್ ದಾಖಲಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ಮನೆಗಳ ಮಾರಾಟ 50 ಪರ್ಸೆಂಟ್ ಇಳಿಕೆಯಾಗಿದೆ ಎಂದು ವರದಿಯಲ್ಲಿ ತಿಳಿಸಿದೆ. ಈ ಅವಧಿಯಲ್ಲಿ ಕೇವಲ 5,155 ಮನೆಗಳು ಮಾತ್ರ ಮಾರಾಟವಾಗಿವೆ.
ಬೆಂಗಳೂರಿನ ನಂತರದ ಸ್ಥಾನದಲ್ಲಿ ಹೈದ್ರಾಬಾದ್ 44 ಪರ್ಸೆಂಟ್, ಪುಣೆ 39, ನೊಯ್ಡಾ 38, ಚೆನ್ನೈ ಮತ್ತು ಕೊಲ್ಕತ್ತಾ 33, ದೆಹಲಿ 6, ಮುಂಬೈ 18 ಪರ್ಸೆಂಟ್ ನಷ್ಟು ಮನೆ ಮಾರಾಟದಲ್ಲಿ ಕುಸಿತವಾಗಿದೆ.


Click it and Unblock the Notifications